ಚಿತ್ರದುರ್ಗ: ಮುಂದಿನ ದಿನಗಳಲ್ಲಿ ಒಟಿಪಿ ಆಧಾರಿತ ಆ್ಯಪ್‌ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ನಡೆಸಲಾಗುವುದುಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ನಾಡೋಜ ಡಾ|ಮಹೇಶ ಜೋಶಿ ಹೇಳಿದರು.
ನಗರದ ದೊಡ್ಡಪೇಟೆಯ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ವತಿಯಿಂದ ಕೇಂದ್ರ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿಆಯ್ಕೆಯಾದ ನಾಡೋಜ ಡಾ| ಮಹೇಶ ಜೋಶಿ ಅವರಿಗೆಅಭಿನಂದನೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನಅಧ್ಯಕ್ಷರಾಗಿ ಆಯ್ಕೆಯಾದ ಕೆ.ಎಂ. ಶಿವಸ್ವಾಮಿ ನಾಯಕನಹಟ್ಟಿ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಂದಿನ ಬಾರಿ ನಡೆಯುವ ಕಸಾಪ ಚುನಾವಣೆ ನಯಾಪೈಸೆಖರ್ಚಿಲ್ಲದಂತೆ ಮನೆಯಿಂದಲೇ ಆ್ಯಪ್ ಮೂಲಕ ಮತದಾನಮಾಡುವ ಕ್ರಾಂತಿಕಾರಕ ಬದಲಾವಣೆ ಜಾರಿಗೆ ತರಲಾಗುವುದು.ಆ್ಯಪ್ ಮೂಲಕ ಪಾರದರ್ಶಕವಾಗಿ ಚುನಾವಣೆ ನಡೆಸಲಾಗುವುದು.ಇದರಿಂದ ಮತದಾರರು ಮತಗಟ್ಟೆಗೆ ಬರುವುದನ್ನು ಹಾಗೂಚುನಾವಣೆಗಾಗಿ ಕೋಟಿಗಟ್ಟಲೆ ಹಣ ಖರ್ಚಾಗುವುದನ್ನುತಡೆಯಬಹುದಾಗಿದೆ. ಒಬ್ಬ ವ್ಯಕ್ತಿ ಒಮ್ಮೆ ಮಾತ್ರ ಕಸಾಪ ಅಧ್ಯಕ್ಷರಾಗಿಆಯ್ಕೆಯಾಗಬೇಕು ಎಂದು ಕಾಯ್ದೆ ಮಾಡಲಾಗುವುದು.
ಮುಂದಿನದಿನಗಳಲ್ಲಿ ತಾಲೂಕು ಅಧ್ಯಕ್ಷರಿಗೂ ಚುನಾವಣೆ ನಡೆಯಲಿದೆಎಂದರು.ನಿಜವಾದ ಕನ್ನಡ ಸಂಸ್ಕøತಿ, ಅಸ್ಮಿತೆ ಎಂಬುದು ಎಲ್ಲರಿಗೂಸಮ ಗೌರವ ಕೊಡಲಿದೆ. ಈ ನಿಟ್ಟಿನಲ್ಲಿ ಕನ್ನಡ ಕಟ್ಟುವ ಕೆಲಸಮಾಡುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಜನ ಸಾಮಾನ್ಯರಪರಿಷತ್ತು, ಜನಪರ, ಜನಪಯೋಗಿ ಪರಿಷತ್ತು ಮಾಡಲಾಗುವುದು.
ಮನೆಯಲ್ಲಿಯೇ ಕುಳಿತು ಆಧುನಿಕ ತಂತ್ರಜ್ಞಾನವನ್ನುಬಳಸಿಕೊಂಡುವಿಶ್ವದಲ್ಲಿರುವ ಕನ್ನಡಿಗರು ಯಾವುದೇ ತೊಂದರೆ ಇಲ್ಲದೇ ಸದಸ್ಯತ್ವಪಡೆಯಬಹುದು. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದುತಿಳಿಸಿದರು.