Advertisement

ಪಕ್ಷ ನಿಷ್ಠನ ಮೇಲ್ಮನೆ ಪ್ರವೇಶ ಕನಸು ನನಸು !

07:20 PM Dec 15, 2021 | Team Udayavani |

ಚಿತ್ರದುರ್ಗ: ಭಾರತೀಯ ಜನತಾ ಪಕ್ಷದಲ್ಲಿಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕಾರ್ಯಕರ್ತಕೆ.ಎಸ್‌.ನವೀನ್‌ ಜಿಲ್ಲೆಯಿಂದ ವಿಧಾನ ಪರಿಷತ್ತಿಗೆಆಯ್ಕೆಯಾಗಿದ್ದಾರೆ.2013ರಲ್ಲಿ ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿಯಾಗಿ ಕೆಲಸ ಮಾಡುವಮೂಲಕ ಗುರುತಿಸಿಕೊಂಡ ನವೀನ್‌, 2016ರಲ್ಲಿಜಿಲ್ಲಾಧ್ಯಕ್ಷರಾದರು. ಸದ್ಯ ಅವರು ಬಿಜೆಪಿ ರಾಜ್ಯಕಾರ್ಯದರ್ಶಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

Advertisement

46 ವರ್ಷದ ಕೆ.ಎಸ್‌. ನವೀನ್‌, 2013 ಮತ್ತು 2015ಸೇರಿದಂತೆ ಎರಡು ಬಾರಿ ಪರಿಷತ್‌ ಚುನಾವಣೆಗೆಸ್ಪ ರ್ಧಿಸಿ ಕ್ರಮವಾಗಿ 122 ಹಾಗೂ 223 ಮತಗಳಅಂತರದಲ್ಲಿ ಪರಾಭವಗೊಂಡಿದ್ದರು.ವಿವಿಧ ರಾಜ್ಯಗಳ ಚುನಾವಣೆ ಉಸ್ತುವಾರಿ: ಕೆ.ಎಸ್‌.ನವೀನ್‌ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಅವ ಧಿಯಲ್ಲಿನಡೆದ ವಿಧಾನಸಭೆ ಚುನಾವಣೆಯಲ್ಲಿ ಐವರುಶಾಸಕರನ್ನು ಗೆಲ್ಲಿಸಿಕೊಳ್ಳುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದರು. ಇದೇ ಅವ ಧಿಯಲ್ಲಿ ಲೋಕಸಭೆಯೂ ಬಿಜೆಪಿ ಪಾಲಾಯಿತು.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಬಿಜೆಪಿ ವರಿಷ್ಠರುನವೀನ್‌ ಅವರಿಗೆ ರಾಜ್ಯ ಕಾರ್ಯದರ್ಶಿ ಜವಾಬ್ದಾರಿನೀಡಿ ವಿವಿಧ ರಾಜ್ಯಗಳ ಚುನಾವಣೆ ಉಸ್ತುವಾರಿ ವಹಿಸಿದ್ದರು. ಗುಂಡ್ಲುಪೇಟೆ ಉಪಚುನಾವಣೆ,ಮಹಾರಾಷ್ಟ್ರ, ಪುದುಚೆರಿ, ತಮಿಳುನಾಡು, ಬಳ್ಳಾರಿ ಲೋಕಸಭೆ ಉಪಚುನಾವಣೆ, ಬಿಬಿಎಂಪಿ ಸೇರಿದಂತೆಹಲವು ಚುನಾವಣೆಗಳಲ್ಲಿ ತೊಡಗಿಸಿಕೊಂಡಿದ್ದರು.ನವೀನ್‌ ಜಿಲ್ಲಾಧ್ಯಕ್ಷರಾಗಿದ್ದ ಅವ ಧಿಯಲ್ಲಿಜಿಲ್ಲೆಯಲ್ಲಿ ಎರಡು ಬಾರಿ ಪ್ರಧಾನಿ ನರೇಂದ್ರಮೋದಿ ಅವರ ರ್ಯಾಲಿ, ಅಮಿತ್‌ ಶಾ ರ್ಯಾಲಿಗಳನ್ನುಸಂಘಟಿಸಿದ್ದರು.

ಬೆಂಗಳೂರು ಪ್ರಭಾರಿ, ಬಿಜೆಪಿಎಸ್‌ಸಿ ಮೋರ್ಚಾ ಪ್ರಭಾರಿ, ಪ್ರಧಾನಮಂತ್ರಿಗಳಮನ್‌ ಕೀ ಬಾತ್‌ ಕಾರ್ಯಕ್ರಮದ ರಾಜ್ಯದಸಹ ಪ್ರಭಾರಿ, ರಾಜ್ಯ ಪ್ರಶಿಕ್ಷಣ ಪ್ರಮುಖ್‌,ಜನಸೇವಕ ಸಮಾವೇಶದ ಸಂಚಾಲಕ, ನಾಮಫಲಕ ಅಳವಡಿಸುವ ಕಾರ್ಯಕ್ರಮದ ಉಸ್ತುವಾರಿಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳಲ್ಲಿಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಶರಣ ಸಂಸ್ಕೃತಿ ಉತ್ಸವದ ಕಾರ್ಯಾಧ್ಯಕ್ಷ:2021ನೇ ಸಾಲಿನ ಮುರುಘಾ ಮಠದ ಶರಣಸಂಸ್ಕೃತಿ ಉತ್ಸವದ ಕಾರ್ಯಾಧ್ಯಕ್ಷರಾಗಿಂ ನವೀನ್‌ಜವಾಬ್ದಾರಿ ನಿಭಾಯಿಸಿದ್ದರು. ಇದರೊಟ್ಟಿಗೆಚಿತ್ರದುರ್ಗ ಸಮಗ್ರ ವಿಕಾಸ ಟ್ರಸ್ಟ್‌, ನವೀನ್‌ರೂರಲ್‌ ಎಜ್ಯುಕೇಶನ್‌ ಆ್ಯಂಡ್‌ ಚಾರಿಟೇಬಲ್‌ಟ್ರಸ್ಟ್‌ ಅಧ್ಯಕ್ಷರಾಗಿ ಐಎಲ್‌ವೈಎಫ್‌ ಸಂಸ್ಥಾಪಕಅಧ್ಯಕ್ಷರು, ಹೋಟೆಲ್‌ ಉದ್ಯಮಿ, ರೈತರಾಗಿನವೀನ್‌ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next