ಚಿತ್ರದುರ್ಗ: ಕಾಂಗ್ರೆಸ್ ಹಣ ಬಲದ ಮೇಲೆ ಚುನಾವಣೆನಡೆಸಿದರೆ, ಬಿಜೆಪಿ ಸಂಘಟನೆ ಬಲದ ಮೇಲೆವಿಶ್ವಾಸವಿಟ್ಟು ಚುನಾವಣೆ ಎದುರಿಸಿದ ಪರಿಣಾಮ ನನಗೆಗೆಲುವು ಸಿಕ್ಕಿದೆ ಎಂದು ಪರಿಷತ್ ಚುನಾವಣೆಯಲ್ಲಿಗೆಲುವು ಸಾಧಿಸಿದ ಕೆ.ಎಸ್. ನವೀನ್ ಹೇಳಿದರು.
ಮತ ಎಣಿಕೆ ಬಳಿಕ ಕಾರ್ಯಕರ್ತರ ಜೊತೆವಿಜಯೋತ್ಸವ ಆಚರಿಸಿ ಮೆರವಣಿಗೆ ಮೂಲಕ ಡಾ|ಬಿ.ಆರ್. ಅಂಬೇಡ್ಕರ್, ಮದಕರಿ ನಾಯಕ, ಒನಕೆ ಓಬವ್ವ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ನಂತರಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅವಳಿ ಜಿಲ್ಲೆಯ ಎಲ್ಲ ಶಾಸಕರು, ಸಚಿವರು, ಸಂಸದರು, ಪಕ್ಷದ ಮುಖಂಡರು, ಕಾರ್ಯಕರ್ತರಅವಿರತ ಹೋರಾಟದ ಕಾರಣಕ್ಕೆ ಇಂಥದ್ದೊಂದು ಗೆಲುವುಸಿಕ್ಕಿದೆ. ಇದು ನನ್ನ ಗೆಲುವಲ್ಲ, ಕಾರ್ಯಕರ್ತರ ಹಾಗೂಪಕ್ಷದ ಗೆಲುವು. ಹಾಗಾಗಿ ನನ್ನ ಕೊನೆಯ ಉಸಿರುಇರುವವರೆಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದುಡಿಯುತ್ತೇನೆ ಎಂದರು.
ಕಾರ್ಯಕರ್ತರಿಗೆ ಮತ್ತುಪಕ್ಷಕ್ಕೆ ಯಾವುದೇ ಚ್ಯುತಿ ಬಾರದಂತೆ ನಿಮ್ಮ ಮನೆಯಮಗನಾಗಿ, ಸಹೋದರನಾಗಿ ಪಕ್ಷದ ಕೆಲಸ ಮಾಡುತ್ತೇನೆ.ಎರಡು ಚುನಾವಣೆಗಳಲ್ಲಿ ಸೋತಿದ್ದರೂ ರಾಜ್ಯ ಹಾಗೂರಾಷ್ಟ್ರ ನಾಯಕರು ನನಗೆ ಧೈರ್ಯ ತುಂಬಿ ಮತ್ತೂಂದುಅವಕಾಶ ನೀಡಿ ಗೆಲ್ಲಿಸಿದ್ದಾರೆ. ಅದಕ್ಕಾಗಿ ಎಲ್ಲರಿಗೂಆಭಾರಿಯಾಗಿದ್ದೇನೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿ ಮಾತನಾಡಿ,ಚಿತ್ರದುರ್ಗ-ದಾವಣಗೆರೆ ಕ್ಷೇತ್ರಗಳಲ್ಲಿ ಅಸ್ತಿತ್ವಉಳಿಸಿಕೊಳ್ಳುವುದಕ್ಕಾಗಿ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಪ್ರತಿ ಮತದಾರನ ಮನೆ ಬಾಗಿಲಿಗೆತೆರಳಿ ಮತ ಭಿಕ್ಷೆ ಕೇಳಿದ್ದಾರೆ. ಗ್ರಾಮ ಪಂಚಾಯಿತಿಸದಸ್ಯರ ಕಷ್ಟ-ಸುಖಗಳನ್ನು ಆಲಿಸಿ ಅವರ ಸಮಸ್ಯೆಗೆಸ್ಪಂದಿಸುವಂತಹ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದರು.
ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್‌ಹನಗವಾಡಿ ಮಾತನಾಡಿ, ಹೊರಗಿನಿಂದ ಬಂದುಇಲ್ಲಿ ಸುಲಭವಾಗಿ ಗೆದ್ದುಕೊಂಡು ಹೋಗುತ್ತಿದ್ದವರಿಗೆಮತದಾರರು ಈ ಬಾರಿಯ ಚುನಾವಣೆಯಲ್ಲಿಸರಿಯಾದ ಪಾಠ ಕಲಿಸಿದ್ದಾರೆ. ನವೀನ್ ಅವರಗೆಲುವು ಕಾರ್ಯಕರ್ತರಿಗೆ ಸಿಕ್ಕ ಗೆಲುವಾಗಿದೆ ಎಂದುತಿಳಿಸಿದರು.