Advertisement

ಅಂದರ್‌-ಬಾಹರ್‌ ಚದುರಂಗದಲ್ಲಿ ದಡ ಸೇರಿದ ಬಿಜೆಪಿ

05:30 PM Dec 15, 2021 | Team Udayavani |

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿಕಡೆಗೂ ಬಿಜೆಪಿ ಪಟ್ಟು ಹಿಡಿದು ವಿಧಾನ ಪರಿಷತ್‌ಚುನಾವಣೆಯಲ್ಲಿ ಜಯ ದಾಖಲಿಸಿದೆ. ಸತತ ಎರಡುಅವ ಧಿಗೆ ಸ್ಪರ್ಧಿಸಿಪರಾಭವಗೊಂಡಿದ್ದ ಕೆ.ಎಸ್‌. ನವೀನ್‌ಮೂರನೇ ಅವ ಧಿಯಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ.

Advertisement

ಸ್ಥಳೀಯಅಭ್ಯರ್ಥಿ, ಅನುಕಂಪದಅಲೆಯ ಕಾರ್ಡ್‌ಪ್ಲೇ ಮಾಡಿದ ಬಿಜೆಪಿಕಾಂಗ್ರೆಸ್‌ ಅಭ್ಯರ್ಥಿಬಿ. ಸೋಮಶೇಖರ್‌ಅವರನ್ನು ಪರಾಭವಗೊಳಿಸುವಲ್ಲಿ ಯಶಸ್ವಿ ಯಾಗಿದೆ.

ಕಳೆದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷಕ್ಕಿದ್ದಎಲ್ಲಾ ಅವಕಾಶಗಳು ಈ ಬಾರಿ ಬಿಜೆಪಿ ಪರವಾಗಿದ್ದವು.ಇದರೊಟ್ಟಿಗೆ ಅನುಕಂಪದ ಅಲೆಯೂ ಸೇರಿಕೊಂಡಿತ್ತು.ಎರಡೂ ಪಕ್ಷಗಳು ಹಣದ ಹೊಳೆಯನ್ನೇ ಹರಿಸಿವೆ ಎಂಬಆರೋಪ ಕೇಳಿ ಬಂದರೂ ಅಂತಿಮವಾಗಿ ಕೆ.ಎಸ್‌.ನವೀನ್‌ ಗೆಲುವಿನ ನಗು ಬೀರಿದ್ದಾರೆ.

ಬಿಜೆಪಿಯ ಒಗ್ಗಟ್ಟಿನ ಮಂತ್ರದ ಫಲ:ಚಿತ್ರದುರ್ಗ-ದಾವಣಗೆರೆ ಅವಳಿ ಜಿಲ್ಲೆಗಳ ವ್ಯಾಪ್ತಿಯಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯ ಎಲ್ಲಶಾಸಕರು, ಸಂಸದರು, ಸಚಿವರು, ಕಾರ್ಯಕರ್ತರುಗೆಲುವಿಗಾಗಿ ಒಗ್ಗಟ್ಟಿನ ಹೋರಾಟ ನಡೆಸಿದರು.ಪಕ್ಷದ ಕಾರ್ಯಕರ್ತರು ಈ ಚುನಾವಣೆಯಲ್ಲಿಗೆಲ್ಲಲೇಬೇಕು ಎಂದು ಪಟ್ಟು ಹಿಡಿದು ಕೆಲಸ ಮಾಡಿದರು.

ಇದೆಲ್ಲದರ ಒಟ್ಟು ಪರಿಣಾಮವಾಗಿ ಬಿಜೆಪಿ ಅಭ್ಯರ್ಥಿಗೆಗೆಲುವು ಸಿಕ್ಕಿದೆ. ಆದರೆ ಜಿಲ್ಲೆಯಲ್ಲಿ ಬಿಜೆಪಿಗೆ ಇರುವಬಲದ ಆಧಾರದಲ್ಲಿ ನೋಡಿದರೆ ಇದು ಭಾರೀ ಅಂತರದ ಗೆಲುವಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಕೈಗೆ ಸೋಲಿನ ಬರೆ: ಕಾಂಗ್ರೆಸ್‌ ಪಕ್ಷಕ್ಕೆ ಈ ಬಾರಿ ಸ್ಥಳೀಯಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಲು ಅವಕಾಶಗಳಿದ್ದರೂಹೊರಗಿನ ಅಭ್ಯರ್ಥಿಗೆ ಮಣೆ ಹಾಕಿ ಮುಖಭಂಗ ಅನುಭವಿಸಿದೆ.

Advertisement

ಈ ಹಿಂದೆ ಪರಿಷತ್‌ ಸದಸ್ಯರಾಗಿದ್ದ ರಘು ಆಚಾರ್‌ ಕಣದಿಂದ ಹಿಂದೆ ಸರಿಯುವವೇಳೆ ಸ್ಥಳೀಯರಿಗೆ ಅವಕಾಶ ದೊರೆಯಲಿ, ನಾನುವಿಧಾನಸಭೆಗೆ ಹೋಗುತ್ತೇನೆ ಎಂಬ ಕಾರಣ ಮುಂದಿಟ್ಟುಹಿಂದೆ ಸರಿದಿದ್ದರು. ಆದರೆ ಪಕ್ಷದ ಮುಖಂಡರು ಮಾತ್ರಸ್ಥಳೀಯವಾಗಿ ಯಾರನ್ನೂ ಹುಡುಕುವ ಗೋಜಿಗೆಹೋಗಲಿಲ್ಲ. ಇದು ಬಿಜೆಪಿಗೆ ವರದಾನವಾಯಿತು.ಪದೇ ಪದೇ ಹೊರಗಿನಿಂದ ಬಂದವರಿಗೆ ಮಣೆ ಹಾಕುವಬದಲು ಸ್ಥಳೀಯವಾಗಿ ಕೈಗೆ ಸಿಗುವ ಅಭ್ಯರ್ಥಿಗೆ ಮತನೀಡಿ ಎನ್ನುವ ಬಿಜೆಪಿ ಮಾತಿಗೆ ಮತದಾರ ಪ್ರಭು ಜೈಅಂದಿದ್ದಾನೆ.

ಪ್ರಚಾರಕ್ಕೆ ಬಾರದ ರಘು ಆಚಾರ್‌: ಬಹಳ ಮುಖ್ಯವಾದಸಂಗತಿ ಎಂದರೆ ರಘು ಆಚಾರ್‌ ಪ್ರಚಾರಕ್ಕೆಬಾರದಿರುವುದು. ಹಾಲಿ ಸದಸ್ಯರಾಗಿದ್ದರೂ ಅವರನ್ನುಕಾಂಗ್ರೆಸ್‌ ಪ್ರಚಾರಕ್ಕೆ ಬಳಸಿಕೊಳ್ಳಲಿಲ್ಲ. ಒಟ್ಟಾರೆಇದುವರೆಗೆ ಕೈ ವಶದಲ್ಲಿದ್ದ ಕ್ಷೇತ್ರದಲ್ಲೀಗ ಮತ್ತೆ ಬಿಜೆಪಿಪಾಲಾಗಿದೆ. ಸಂಘಟಿತ ಹೋರಾಟದ ಮೂಲಕ ಕ್ಷೇತ್ರವನ್ನುಮರು ವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ,ಹೊರಗಿನವರನ್ನು ಅಭ್ಯರ್ಥಿಯನ್ನಾಗಿಸಿದ ಕಾಂಗ್ರೆಸ್‌ ಪಕ್ಷಈಗ ಕೈ ಹಿಸುಕಿಕೊಳ್ಳುವಂತಾಗಿದ್ದು ಸುಳ್ಳಲ್ಲ

Advertisement

Udayavani is now on Telegram. Click here to join our channel and stay updated with the latest news.

Next