ಚಿತ್ರದುರ್ಗ: ಭಾರತೀಯ ಜನತಾ ಪಕ್ಷದಿಂದವಾರಾಣಸಿಯಲ್ಲಿ ಡಿ.13 ರಂದು ಬೆಳಗ್ಗೆ 10ಗಂಟೆಗೆ “ಭವ್ಯ ಕಾಶಿ- ದಿವ್ಯ ಕಾಶಿ’ ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಮಾಧ್ಯಮ ಸಂಚಾಲಕ ಕರುಣಾಕರ ಖಾಸಾಲೆ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಾರ್ಯಕ್ರಮ ಹಿನ್ನೆಲೆಯಲ್ಲಿ ದೇಶಾದ್ಯಂತ ಜ.14ಸಂಕ್ರಾಂತಿವರೆಗೆ ಒಂದು ತಿಂಗಳ ಕಾಲ ವಿವಿಧಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.ವಾರಾಣಸಿಯಲ್ಲಿ ನಡೆಯುವಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರಮೋದಿ ಉದ್ಘಾಟಿಸಿ ಬೆಳಿಗ್ಗೆ 11 ಗಂಟೆಗೆ ದೇಶದಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ರಾಜ್ಯಗಳಮುಖ್ಯಮಂತ್ರಿಗಳು, ವಿವಿಧ ಮಠಾಧಿಧೀಶರುಭಾಗವಹಿಸುವರು. ನಮ್ಮ ರಾಜ್ಯದ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ, ಆದಿಚುಂಚನಗಿರಿಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ,ಉಡುಪಿ ಪೇಜಾವರ ಮಠದ ಸ್ವಾಮೀಜಿ ಕೂಡಭಾಗವಹಿಸಲಿದ್ದಾರೆಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಜಯಪಾಲಯ್ಯ ಮಾತನಾಡಿ, ದೇಶಾದ್ಯಂತ ಈಕಾರ್ಯಕ್ರಮ ವೀಕ್ಷಿಸುವ ಉದ್ದೇಶದಿಂದ 51ಸಾವಿರ ಕಾರ್ಯಕ್ರಮ ಆಯೋಜಿಸಲಾಗುವುದು.ಅದರಂತೆ ಪ್ರತಿ ಮಂಡಲದಲ್ಲಿ 10 ಕಡೆಗಳಲ್ಲಿಕಾರ್ಯಕ್ರಮ ವೀಕ್ಷಣೆಗೆ ಎಲ್‌ಇಡಿ ವ್ಯವಸ್ಥೆಮಾಡಲಾಗುವುದು. ದೇವಸ್ಥಾನಗಳಲ್ಲಿ ವಿಶೇಷಕಾರ್ಯಕ್ರಮ ನಡೆಸಲಾಗುತ್ತಿದ್ದು, 200ರಿಂದ300 ಜನರು ಭಾಗವಹಿಸುವರು ಎಂದರು.ಒಂದು ಕಾಲದಲ್ಲಿ ಕಾಶಿಯಲ್ಲಿ ಕಲುಷಿತವಾತಾವರಣ ನಿರ್ಮಾಣವಾಗಿತ್ತು. ಅದನ್ನುನಿವಾರಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಕೈಗೊಳ್ಳಲಾಗಿದೆ.
ಅಲ್ಲಿನ ಜ್ಯೋತಿರ್ಲಿಂಗ ಸೇರಿದಂತೆಅನೇಕ ಸ್ಥಳಗಳನ್ನು ಸ್ವತ್ಛಗೊಳಿಸಲಾಗಿದೆ. ಈಹಿನ್ನೆಲೆಯಲ್ಲಿ ವಾರಾಣಸಿಯಲ್ಲಿ “ಭವ್ಯ ಕಾಶಿ-ದಿವ್ಯಕಾಶಿ’ ಕಾರಿಡಾರ್ ಉದ್ಘಾಟಿಸಲಾಗುತ್ತಿದೆ.ಇದರ ಅಂಗವಾಗಿ ಜಿಲ್ಲೆಯಲ್ಲೂ ಸ್ವತ್ಛತಾಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮನಡೆಸಲಾಗುವುದು. ಜಿಲ್ಲೆಯ ಎಲ್ಲ ಜನಪ್ರತಿನಿ ಧಿಗಳು, ಪಕ್ಷದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷಕಲ್ಲೇಶಯ್ಯ, ಮಾಧ್ಯಮ ವಕ್ತಾರ ನಾಗರಾಜ ಬೇದ್ರೆ,ದಾವಣಗೆರೆ ವಿಭಾಗದ ಮಾಧ್ಯಮ ಪ್ರಮುಖಅವಿನಾಶ್, ವೆಂಕಟ್ ಸುದ್ದಿಗೋಷ್ಠಿಯಲ್ಲಿ ಇದ್ದರು.