Advertisement

ಮತಪೆಟ್ಟಿಗೆ ಸೇರಿದ ಉಮೇದುವಾರರ ಹಣೆಬರಹ

07:32 PM Dec 11, 2021 | Team Udayavani |

ಚಿತ್ರದುರ್ಗ: ಭಾರೀ ಕುತೂಹಲಕ್ಕೆ ಎಡೆಮಾಡಿರುವಚಿತ್ರದುರ್ಗ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಶೇ.99.98ರಷ್ಟುಮತದಾನವಾಗುವ ಮೂಲಕ ಮತದಾನ ಪ್ರಕ್ರಿಯೆಶುಕ್ರವಾರ ಶಾಂತಿಯುತವಾಗಿ ಮುಕ್ತಾಯವಾಯಿತು.

Advertisement

ಬೆಳಗ್ಗೆ 8 ಗಂಟೆಯಿಂದಲೇ ಮತದಾನಕ್ಕೆ ಅವಕಾಶಕಲ್ಪಿಸಿದ್ದರೂ, ಮಧ್ಯಾಹ್ನ 3 ಗಂಟೆವರೆಗೆ ಶೇ.10ರಷ್ಟುಮಾತ್ರ ಮತದಾನವಾಗಿತ್ತು. ಈ ಸಂಖ್ಯೆ ರಾಜ್ಯದಲ್ಲೇಕೊನೆಯ ಸ್ಥಾನದಲ್ಲಿತ್ತು.ಬೆಳಿಗ್ಗೆ 8ರಿಂದ 10 ಗಂಟೆಯವರೆಗೆ ಶೇ 0.5ರಷ್ಟುಅಂದರೆ 29 ಮತದಾರರು ಮಾತ್ರ ಮತ ಹಾಕಿದ್ದರು.

ಇನ್ನೂ 10ರಿಂದ ಮಧ್ಯಾಹ್ನ 12 ಗಂಟೆಯವರೆಗೆ 138ಮಂದಿ (ಶೇ.2.7) ಮತದಾನ ಮಾಡಿದ್ದರು. ಮಧ್ಯಾಹ್ನ2 ಗಂಟೆಯ ಹೊತ್ತಿಗೆ 542 (ಶೇ 10.7) ಮತದಾರರುಮತದಾನ ಮಾಡಿದ್ದರು. ಉಳಿದ ಶೇ 90ರಷ್ಟುಮತದಾರರು ಕೊನೆಯ ಎರಡು ಗಂಟೆಯಲ್ಲಿ ಹಕ್ಕುಚಲಾವಣೆ ಮಾಡಿದರು.ಮಧ್ಯಾಹ್ನ 3 ಗಂಟೆ ನಂತರದ ಒಂದು ಗಂಟೆ ಅವಯಲ್ಲಿ ಏಕಾಏಕಿ ಎಲ್ಲಾ ಸದಸ್ಯರು ಮತಗಟ್ಟೆಗೆ ಬಂದುಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಈ ವೇಳೆ ಇಡೀ ಚುನಾವಣಾ ಪ್ರಕ್ರಿಯೆ ಬಿರುಸುಪಡೆದುಕೊಂಡಿತು. ಜಿಲ್ಲೆಯ ಬಹುತೇಕ ಗ್ರಾಮಪಂಚಾಯಿತಿಗಳಲ್ಲಿ ಮಧ್ಯಾಹ್ನ 2 ಗಂಟೆವರೆಗೆ ಒಂದುಮತದಾನವೂ ಆಗಿರಲಿಲ್ಲ. ಮತದಾನ ವಿಳಂಬಕ್ಕೆ ಆಮಿಷ ಕಾರಣ ಎಂದು ವಿಶ್ಲೇಷಿಸಲಾಯಿತು.ಆದರೆ, ವಿಳಂಬ ಯಾಕೆ ಎಂಬ ಪ್ರಶ್ನೆಗೆ ಕೆಲ ಸದಸ್ಯರು,ಇದರಲ್ಲಿ ವಿಶೇಷವೇನು ಇಲ್ಲ. ಚುನಾವಣಾ ಆಯೋಗ4 ಗಂಟೆವರೆಗೆ ಮತದಾನಕ್ಕೆ ಅವಕಾಶ ಕೊಟ್ಟಿದೆ. ಊಟಮುಗಿಸಿ ಎಲ್ಲರೂ ಒಟ್ಟಿಗೆ ಬಂದು ಮತ ಹಾಕುವ ಬಗ್ಗೆಮಾತನಾಡಿಕೊಂಡಿದ್ದೆವು ಎಂದು ಕಾರಣ ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next