Advertisement

ಮೆಕ್ಕೆ ಜೋಳಕ್ಕೆ ಶಾಪವಾದ ಅಕಾಲಿಕ ಮಳೆ

02:25 PM Dec 09, 2021 | Team Udayavani |

ಸಿರಿಗೆರೆ: ಕಟಾವಿಗೆ ಬಂದಿದ್ದ ಮೆಕ್ಕೆಜೋಳವನ್ನು ಕೊಯ್ಲು ಮಾಡುವ ಕನಸು ಕಂಡಿದ್ದ ಬೆಳೆಗಾರರು ಮಳೆ ಹೊಡೆತದಿಂದ ಕಂಗಾಲಾಗಿದ್ದಾರೆ.

Advertisement

ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬೆಳೆಯೇಮೆಕ್ಕೆ ಜೋಳ. ಇದನ್ನು ಬೆಳೆದು ಸಾವಿರಾರು ಕುಟುಂಬಗಳು ಜೀವನ ನಿರ್ವಹಣೆ ಮಾಡುತ್ತಿವೆ. ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಕಟಾವು ಮಾಡಲಾಗದೆ ರೈತರು ಪರದಾಡುವಂತಾಗಿದೆ.

ಮಳೆಬಿಡುವು ಕೊಟ್ಟಿದ್ದರೆ ಒಕ್ಕಲು ಮಾಡಿ ಮೆಕ್ಕೆಜೋಳವನ್ನುರಕ್ಷಣೆ ಮಾಡಿಕೊಳ್ಳುತ್ತಿದ್ದರು. ಆದರೆ ಈ ವರ್ಷರೈತರಿಗೆ ಸರಿಯಾಗಿ ಮೆಕ್ಕೆಜೋಳ ಕೊಯ್ಲು ಮಾಡಲು ಆಗಿಯೇ ಇಲ್ಲ. ಇದರಿಂದಾಗಿ ಬೆಳೆದು ನಿಂತ ಜೋಳದಿನದಿಂದ ದಿನಕ್ಕೆ ಕುಸಿದು ನೆಲಕ್ಕೆ ಬೀಳುತ್ತಿವೆ. ಹಲವೆಡೆ ಜಮೀನುಗಳಲ್ಲಿ ಮಳೆ ನೀರು ನಿಂತು ಮೆಕ್ಕೆಜೋಳ ಇದ್ದಲ್ಲಿಯೇ ಮೊಳಕೆ ಬರುತ್ತಿದೆ.
ಒಂದರಿಂದ ಮೂರು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದುಬದುಕಿನ ಬಂಡಿ ಎಳೆಯುವ ರೈತರ ಬದುಕುಅತಂತ್ರ ಸ್ಥಿತಿಯಲ್ಲಿದೆ. ಇಸಾಮುದ್ರ ಗ್ರಾಮದಲ್ಲಿ ಶಾನುಬೋಗರಹಳ್ಳ ತುಂಬಿ ಹರಿಯುತ್ತಿದ್ದು ಅಂದಾಜು 300 ಎಕರೆ ಹೊಲಗಳಿಗೆ ನೀರು ನುಗ್ಗಿದೆ.

ಮುಂಗಾರು ಬೆಳೆಯಾದ ಮೆಕ್ಕೆಜೋಳ ಮುರಿಯುವ ಹಂತದಲ್ಲಿದ್ದ ಹೊಲಗಳಲ್ಲಿ ನೀರು ನುಗ್ಗಿದ ಪರಿಣಾಮ ಮೊಳಕೆ ಬರಲು ಆರಂಭಿಸಿದೆ. ಪ್ರತಿ ಎಕರೆಗೆ ಸುಮಾರು 15 ಸಾವಿರ ರೂ.ಗಳನ್ನು ರೈತರು ಖರ್ಚು ಮಾಡಿದ್ದಾರೆ. ಗೊಬ್ಬರ,ಬೀಜ, ಔಷದೋಪಚಾರ ಮಾಡಲು ಸಾಲ ಮಾಡಿಕೊಂಡಿದ್ದಾರೆ.

ಈಗ ಬೆಳೆಯನ್ನು ಕಟಾವು ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೂ ಅವರಿಗೆತಾವು ಖರ್ಚು ಮಾಡಿದ ಹಣವೂ ಬರುವುದಿಲ್ಲ.ಇದುವರೆಗೆ ಪ್ರತಿ ಎಕರೆಯಲ್ಲಿನ ಜೋಳದ ತೆನೆಯನ್ನು ಕಟಾವು ಮಾಡಲು 2000 ರಿಂದ 2200 ರೂ.ಗಳ ತನಕ ಬೆಲೆ ನಿಗದಿಪಡಿಸಿದ್ದ ಕೂಲಿಕಾರರೂ ಡಿಮ್ಯಾಂಡ್‌ ಹೆಚ್ಚಿಸಿದ್ದಾರೆ. ಈ ಬಾರಿ ಪ್ರತಿ ಎಕರೆಗೆ 3000ರಿಂದ3200 ರೂ. ತನಕ ಬೆಲೆ ನಿಗದಿ ಮಾಡಿರುವುದರಿಂದ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ.

Advertisement

ರಾಜ ಸಿರಿಗೆರೆ

Advertisement

Udayavani is now on Telegram. Click here to join our channel and stay updated with the latest news.

Next