ಚಿತ್ರದುರ್ಗ: ಸತತ ಮಳೆ ಹಾಗೂ ಓವರ್‌ಲೋಡೆಡ್ ವಾಹನಗಳ ಸಂಚಾರದಸಮಸ್ಯೆಯಿಂದ ರಸ್ತೆಗಳು ಬಳಲುತ್ತಿವೆ.ಸಾರಿಗೆ ಇಲಾಖೆ ಸರಿಯಾಗಿ ಕೆಲಸಮಾಡಿದರೆ ರಸ್ತೆಗಳು ಹಾಳಾಗುವುದಿಲ್ಲಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ್ ಹೇಳಿದರು.
ಶನಿವಾರ ಲೋಕೋಪಯೋಗಿಇಲಾಖೆಯ ನೂತನ ವಿಭಾಗ ಕಚೇರಿ ಉದ್ಘಾಟನೆ, ಹೆದ್ದಾರಿ ವಿಭಾಗ ಸ್ಥಳಾಂತರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿಅವರು ಮಾತನಾಡಿದರು. ನಾವುಮಾಡುವ ರಸ್ತೆಗಳು ಕನಿಷ್ಠ 25-30ವರ್ಷ ಬಾಳಿಕೆ ಬರಬೇಕು ಎನ್ನುವ ಅಭಿಲಾಷೆ ಇಂಜಿಯರ್‌ಗಳಲ್ಲಿರಬೇಕು.ಯಾವುದೇ ಕಾಮಗಾರಿ ಆರಂಭಿಸುವಾಗಆರಂಭದಿಂದ ಅಂತ್ಯದವರೆಗೆ ಅಭ್ಯಾಸಮಾಡಬೇಕು.
ಮಧ್ಯದಲ್ಲಿ ಅರಣ್ಯ ಇದ್ದರೆಮೊದಲೇ ಅನುಮತಿ ಪಡೆದುಕೊಂಡರೆಬೇಗ ಮುಗಿಸಬಹುದು ಎಂದರು.ರಸ್ತೆಗಳಿಗೆ ಆಧುನಿಕ ಸ್ಪರ್ಶ ಕೊಟ್ಟಿದ್ದುಮಾಜಿ ಪ್ರಧಾನಿ ವಾಜಪೇಯಿ. ಅವರುಚತುಷ್ಪಥ, ಷಟ³ಥ ರಸ್ತೆ ನಿರ್ಮಾಣದಮೂಲಕ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆಎಂದು ಸ್ಮರಿಸಿದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪ್ರಸ್ತಾಪಿಸಿರುವ ಅಫೆಂಡಿಕ್ ಸಿಹಾಗೂ ಉಳಿದ ಎಲ್ಲಾ ಅನುದಾನಗಳನ್ನುಬಗೆಹರಿಸಿ ಬಿಡುಗಡೆ ಮಾಡುತ್ತೇನೆ ಎಂದರು.
ಚಿತ್ರದುರ್ಗದಲ್ಲಿ ಖಾಸಗಿಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜುನಿರ್ಮಾಣಕ್ಕೆ ಈ ಹಿಂದೆ ಸರ್ಕಾರ ಚಿಂತನೆನಡೆಸಿತ್ತು. ಖಾಸಗಿಯವರು ಕಾಲೇಜುಮಾಡಿದರೆ ಬಡವರನ್ನು ಸುಲಿಗೆಮಾಡುತ್ತಾರೆ. ಯಾವ ಕಾರಣಕ್ಕೂಅಂತಹ ಕಾಲೇಜು ನಿರ್ಮಾಣಕ್ಕೆ ಇಲ್ಲಿಅವಕಾಶ ನೀಡುವುದಿಲ್ಲ ಎಂದು ಶಾಸಕಜಿ.ಎಚ್. ತಿಪ್ಪಾರೆಡ್ಡಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿದರು.ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ಲೋಕೋಪಯೋಗಿಇಲಾಖೆಯ ಶಿವಮೊಗ್ಗ ವಿಭಾಗೀಯ ಮುಖ್ಯ ಇಂಜಿನಿಯರ್ ಬಿ.ಟಿ.ಕಾಂತರಾಜು, ವಿಧಾನ ಪರಿಷತ್ ಸದಸ್ಯಎಂ. ಚಿದಾನಂದ ಗೌಡ ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಡಿಸಿ ಕವಿತಾ ಎಸ್. ಮನ್ನಿಕೇರಿ,ಜಿಪಂ ಸಿಇಒ ಡಾ| ಕೆ. ನಂದಿನಿದೇವಿ,ಲೋಕೋಪಯೋಗಿ ಇಲಾಖೆಕಾರ್ಯದರ್ಶಿ ಡಾ| ಕೆ.ಎಸ್. ಕೃಷ್ಣಾರೆಡ್ಡಿ,ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್‌ರಾಘವನ್ ಮತ್ತಿತರರು ಇದ್ದರು.ಲೋಕೋಪಯೋಗಿ ಇಇ ಸತೀಶ್‌ಬಾಬುಸ್ವಾಗತಿಸಿದರು. ಸರ್ಕಾರಿ ನೌಕರರ ಸಂಘದಅಧ್ಯಕ್ಷ ಮಂಜುನಾಥ್ ವಂದಿಸಿದರು.