Advertisement
ಪತ್ರಿಕಾ ಭವನದಲ್ಲಿ ಸೋಮವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರುಒತ್ತಡಕ್ಕೆ ಮಣಿದು ಕಾಡುಗೊಲ್ಲ ಅಭಿವೃದ್ಧಿನಿಗಮದ ಹೆಸರು ಬದಲಾವಣೆ ಮಾಡಿದರೆರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
Related Articles
Advertisement
ಮತ್ತೆ ಮಧ್ಯ ಪ್ರವೇಶಿಸಿದ ಶಾಸಕಿಪೂರ್ಣಿಮಾ ಶ್ರೀನಿವಾಸ್ ಸಿಎಂ ಮೇಲೆ ಒತ್ತಡತಂದು ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆಗೊಲ್ಲ-ಕಾಡುಗೊಲ್ಲ ಅಭಿವೃದ್ಧಿ ನಿಗಮ ಎಂಬಹೆಸರು ಇಡಲು ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ಸಿಎಂಬಸವರಾಜ ಬೊಮ್ಮಾಯಿ ಸಹ ಸಕಾರಾತ್ಮಕವಾಗಿಸ್ಪಂದಿಸಿರುವುದಾಗಿ ತಿಳಿದು ಬಂದಿದೆ.
ಇವರಉದ್ದೇಶ ಈಡೇರಿದರೆ ಕಾಡುಗೊಲ್ಲರ ತಲೆಯಮೇಲೆ ಚಪ್ಪಡಿ ಕಲ್ಲು ಎಳೆದಂತಾಗುತ್ತದೆ.ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ತಮ್ಮನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿದರು.
ಯಾದವ ಪ್ರೇರಿತ ಗೊಲ್ಲರಿಗೂ(ಊರುಗೊಲ್ಲರು) ಕಾಡುಗೊಲ್ಲರಿಗೂ ಎಳ್ಳುಕಾಳಿನಷ್ಟೂ ಸಮಾಜೋ ಸಾಂಸ್ಕೃತಿಕ ಸಾಮ್ಯತೆ ಸಂಬಂಧಗಳಿಲ್ಲ. ಆಂಧ್ರ ಮೂಲದ ಊರುಗೊಲ್ಲರು ಒಂದು ಜಾತಿ ವರ್ಗವಾದರೆ, ಕನ್ನಡ ಮೂಲದಕಾಡುಗೊಲ್ಲರು ಬುಡಕಟ್ಟು ವರ್ಗ. ಕಾಡುಗೊಲ್ಲರು ಅಂಬು, ಕೊಂಬು, ಗುಡಿಕಟ್ಟು, ಕಟ್ಟೆಮನೆಹೊಂದಿರುವ ಸಂಪ್ರದಾಯದವರು. ಇದಾವುದೂಇಲ್ಲದ ಊರುಗೊಲ್ಲರು ಊರುಗಳಲ್ಲಿ ಮತ್ತುಪಟ್ಟಣಗಳಲ್ಲಿ ವಾಸಿಸುತ್ತಾರೆ. ಕಾಡುಗೊಲ್ಲರುಊರುಗಳಿಂದ ದೂರವಾಗಿ ಅಡವಿಗಳಲ್ಲಿ,ಹಟ್ಟಿಗಳಲ್ಲಿ ವಾಸಿಸುತ್ತಾರೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಪ್ರೊ|ಜಿ.ರಾಜಶೇಖರಯ್ಯ ಮಾತನಾಡಿ, ಕಾಡುಗೊಲ್ಲಬುಡಕಟ್ಟು ಸಮುದಾಯದೊಂದಿಗೆ ಯಾದವಊರುಗೊಲ್ಲ ಜಾತಿಯನ್ನು ಸಮೀಕರಣಮಾಡುವುದು ಅವೈಜ್ಞಾನಿಕ. ಊರುಗೊಲ್ಲಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮಸ್ಥಾಪಿಸಲು ಯಾತ ತಕರಾರೂ ಇಲ್ಲ ಎಂದು ಸ್ಟಷ್ಟಪಡಿಸಿದರು.
ಶಾಸಕಿ ಪೂರ್ಣಿಮಾ ಮತ್ತು ಅವರ ಪತಿರಾಜ್ಯ ಯಾದವ ಗೊಲ್ಲ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಕಾಡುಗೊಲ್ಲರ ಅಭಿವೃದ್ಧಿ ನಿಗಮಹಾಗೂ ಎಸ್‌ಟಿ ಮೀಸಲಾತಿ ಬಗ್ಗೆ ತಳೆದಿರುವನಕಾರಾತ್ಮಕ ಧೋರಣೆ ಬದಲಾಯಿಸಿಕೊಳ್ಳಬೇಕು.ಇಲ್ಲವಾದಲ್ಲಿ ಕಾಡುಗೊಲ್ಲರ ತೀವ್ರಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದುತಾಕೀತು ಮಾಡಿದರು.ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷಸಿ. ಪಾತಲಿಂಗಪ್ಪ, ಉಪಾಧ್ಯಕ್ಷ ಜಿ. ವೆಂಕಟೇಶ್‌ಇತರರು ಇದ್ದರು.