ಚಿತ್ರದುರ್ಗ: ಹಣದ ಮೋಹ ಹಾಗೂದುರಾಸೆ ಹೊಂದಿರುವ ಕುಟುಂಬ ಎಂದಿಗೂಸುಖವಾಗಿರುವುದಿಲ್ಲ ಎಂದು ಡಾ| ಶಿವಮೂರ್ತಿಮುರುಘಾ ಶರಣರು ಹೇಳಿದರು.ಮುರುಘಾ ಮಠದ ಅನುಭವ ಮಂಟಪದಲ್ಲಿಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ಸಹಯೋಗದಲ್ಲಿ ಭಾನುವಾರ ನಡೆದ ಸಾಮೂಹಿಕಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೆಣ್ಣಿನ ಕಡೆಯವರಿಂದ ಪೀಡಿಸಿ ವರದಕ್ಷಿಣೆ ಪಡೆದು ಬದುಕುವವರ ಸಂಸಾರ ಅಷ್ಟುಸುಖವಾಗಿರುವುದಿಲ್ಲ. ಗಂಡಸರು ತಮ್ಮನ್ನು ಹಣಕ್ಕೆಮಾರಾಟ ಮಾಡಿಕೊಳ್ಳಬಾರದು. ಯಾರೂ ಸಹಶೋಷಣೆ ಮಾಡಬಾರದು. ಬುದ್ಧ, ಬಸವಣ್ಣ,ಅಂಬೇಡ್ಕರ್, ಪೈಗಂಬರ್, ಏಸು ಶೋಷಣೆ ವಿರುದ್ಧಹೋರಾಡಿದರು ಎಂದರು.ಎಲ್ಲಿಯೋ ಬೆಳೆದ ಹೂವು ಮಾಲೆಯಾಗಿ ನಿಮ್ಮಕೊರಳು ಸೇರಿ ಈ ಸಂದರ್ಭಕ್ಕೆ ತನ್ನ ಬದುಕನ್ನೇಸಮರ್ಪಣೆ ಮಾಡಿಕೊಳ್ಳುತ್ತದೆ.
ಅದೇ ರೀತಿಸಾಮೂಹಿಕ ವಿವಾಹದಲ್ಲಿ ಭಾಗಿಯಾಗಿ ದಾಂಪತ್ಯಕ್ಕೆಪದಾರ್ಪಣೆ ಮಾಡುವುದು ಒಂದು ಅಪೂರ್ವಸಂದರ್ಭ ಎಂದು ತಿಳಿಸಿದರು.
ಕುಂದಗೋಳ ಕಲ್ಯಾಣಪುರ ಮಠದ ಶ್ರೀ ಬಸವಣ್ಣೆಜ್ಜಮಾತನಾಡಿ, ಮುರುಘಾ ಶರಣರು ಅನೇಕವಿಧಾಯಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸರಳ ವಿವಾಹಕ್ಕೆಮುಂದಾಗಿರುವುದು ಸಂತಸದ ವಿಷಯ. ನಮ್ಮಂತಹಅನೇಕ ಮಠಾಧಿಧೀಶರಿಗೆ ಮಾರ್ಗದರ್ಶಿಯಾಗಿದ್ದಾರೆ.
ಉತ್ತಮ ಸಮಾಜದ ನಿರ್ಮಾಣಕ್ಕೆ ಅವರ ಅವಿರತಪ್ರಯತ್ನ ಮುಂದುವರಿದಿದೆ. ನವದಂಪತಿಗಳಿಗೆಶ್ರೀಗಳ ಆಶೀರ್ವಾದ ಯಾವತ್ತೂ ಇರುತ್ತದೆಎಂದರು.ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ರೆಡ್ಡಿಸಮುದಾಯದ ವರ, ಆದಿ ದ್ರಾವಿಡ ಸಮುದಾಯದವಧು, ಲಿಂಗಾಯತ ಸಮುದಾಯದ ವರ-ವಾಲ್ಮೀಕಿನಾಯಕ ಸಮುದಾಯದ ವಧು ಸೇರಿ ಎರಡುಜೋಡಿಯ ಅಂತರ್ಜಾತಿ ವಿವಾಹ ಸೇರಿ29 ಜೋಡಿಗಳು ದಾಂಪತ್ಯಕ್ಕೆ ಪದಾರ್ಪಣೆಮಾಡಿದರು. ಕಾರ್ಯಕ್ರಮದ ದಾಸೋಹಿಗಳಾದಎಸ್. ರುದ್ರಮುನಿಯಪ್ಪ, ಚಳ್ಳಕೆರೆ ಮತ್ತು ಎಂ.ಶಂಕರಮೂರ್ತಿ ವೇದಿಕೆಯಲ್ಲಿದ್ದರು.
ಜಮುರಾಕಲಾವಿದರು ಪ್ರಾರ್ಥಿಸಿದರು. ಹರೀಶ್ ದೇವರುಸ್ವಾಗತಿಸಿದರು. ಪ್ರಕಾಶ್ ದೇವರು ನಿರೂಪಿಸಿದರು.