Advertisement

ವಿಶ್ವಕರ್ಮ ಸಮುದಾಯ ಸಂಘಟನೆಗೆ ಯತ್ನ

06:48 PM Nov 25, 2021 | Team Udayavani |

ಚಿತ್ರದುರ್ಗ: ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂರಾಜಕೀಯವಾಗಿ ಹಿಂದುಳಿದಿರುವ ವಿಶ್ವಕರ್ಮಸಮುದಾಯವನ್ನು ಸಂಘಟಿಸಿ ಅರ್ಹರಿಗೆ ಸರ್ಕಾರದಸೌಲಭ್ಯ ತಲುಪಿಸುವ ಉದ್ದೇಶದಿಂದ ಅಖೀಲ ಭಾರತವಿಶ್ವಕರ್ಮ ಪರಿಷತ್‌ ರಚನೆ ಮಾಡಲಾಗಿದೆ ಎಂದುರಾಜ್ಯಾಧ್ಯಕ್ಷ ಆರ್‌. ಪ್ರಸನ್ನಕುಮಾರ್‌ ಹೇಳಿದರು.

Advertisement

ಬುಧವಾರ ನಗರದ ಪತ್ರಿಕಾ ಭವನದಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯದ 31 ಜಿಲ್ಲೆಗಳಲ್ಲೂ ವಿಶ್ವಕರ್ಮ ಸಮುದಾಯಸಂಘಟಿಸಲು ಮಹಿಳಾ ಹಾಗೂ ಯುವಘಟಕಗಳನ್ನೂ ರಚನೆ ಮಾಡಲಾಗುವುದು. ಐದುಕುಲಕಸುಬುಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಏಕೈಕ ಸಮಾಜ ವಿಶ್ವಕರ್ಮಸಮಾಜವಾಗಿದೆ.

ಸಮಾಜ ಕಸುಬಿನ ಆಧಾರದಮೇಲೆ ಗುರುತಿಸಿಕೊಂಡಿದೆ ಎಂದರು.ಸನಾತನ ಹಿಂದು ಧರ್ಮ ವೈಚಾರಿಕತೆಯಿಂದಕೂಡಿದೆ. ಈ ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನುಗುರುತಿಸಿ ಸಂಘಟಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕಳೆದ25 ವರ್ಷಗಳಿಂದ ಹೋರಾಟ ಮಾಡಿಕೊಂಡುಬರುತ್ತಿದ್ದೇವೆ. ರಾಜ್ಯದ 31 ಜಿಲ್ಲೆಗಳಲ್ಲಿಯೂಪದಾ ಧಿಕಾರಿಗಳನ್ನು ಸೇರಿಸಿಕೊಂಡು ಜಾಗೃತಿಮೂಡಿಸಲಾಗುವುದು ಎಂದು ವಿವರಿಸಿದರು.

ಅಖೀಲ ಭಾರತ ವಿಶ್ವಕರ್ಮ ಪರಿಷತ್‌ ಸಂಸ್ಥಾಪಕರಾಷ್ಟ್ರೀಯ ಅಧ್ಯಕ್ಷ ಎಚ್‌.ವಿ. ಸತೀಶ್‌ಕುಮಾರ್‌ಮಾತನಾಡಿ, ಅತ್ಯಂತ ಹಿಂದುಳಿದಿರುವ ವಿಶ್ವಕರ್ಮಸಮುದಾಯದ ಅನೇಕ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳಬೇಕಾಗಿದೆ. ಐಎಎಸ್‌, ಐಪಿಎಸ್‌,ಕೋಚಿಂಗ್‌ ಪಡೆಯುವ ನಮ್ಮ ಸಮಾಜದಬಡ ವಿದ್ಯಾರ್ಥಿಗಳಿಗೆ ವಸತಿ ಮತ್ತು ವ್ಯಾಸಂಗಕ್ಕೆಅನುಕೂಲ ಮಾಡಿಕೊಡಲಾಗುವುದು. ರಾಜ್ಯಾದ್ಯಂತಇರುವ ಕಾಳಿಕಾದೇವಿ ದೇವಸ್ಥಾನಗಳ ಸ್ಥಿತಿಗತಿಗಳನ್ನುವೀಕ್ಷಿಸಿ ಅವಲೋಕನ ಮಾಡುವ ಮುಖೇನರಾಜ್ಯದ ಇಡಿ ದೇವಸ್ಥಾನಗಳ ಮಾಹಿತಿಯುಳ್ಳ ಪುಸ್ತಕಹೊರತರಲಾಗುವುದು ಎಂದರು.

ನಮ್ಮ ಸಮುದಾಯದಲ್ಲಿ ಶಾಸಕರು, ಸಂಸದರು,ಸಚಿವರು ಇಲ್ಲ. ನಮ್ಮ ಸಮಸ್ಯೆಗಳನ್ನು ಯಾರಬಳಿ ಹೇಳಿಕೊಳ್ಳಬೇಕು ಎನ್ನುವುದು ತಿಳಿಯುತ್ತಿಲ್ಲ.ಈ ನಿಟ್ಟಿನಲ್ಲಿ ಎಲ್ಲಾ ಕಡೆ ಸುತ್ತಾಡಿ ವಿಶ್ವಕರ್ಮಸಮಾಜವನ್ನು ಬಲಪಡಿಸುವುದು ಪರಿಷತ್‌ನಉದ್ದೇಶ ಎಂದು ತಿಳಿಸಿದರು.ಹಿರಿಯೂರಿನ ಚಿಟುಗು ಮಲ್ಲೇಶ್ವರಸ್ವಾಮಿದೇವಸ್ಥಾನದ ಶ್ರೀ ಜ್ಞಾನಭಾಸ್ಕರ ಸ್ವಾಮೀಜಿಮಾತನಾಡಿ, ವಿಶ್ವಕರ್ಮ ಸಮುದಾಯದವರಕಷ್ಟಗಳನ್ನು ಆಲಿಸಲು ನಮ್ಮಲ್ಲಿ ನಾಯಕರಿಲ್ಲ.

Advertisement

ಇಲ್ಲಿಯವರೆಗೂ ಆಳಿದ ಎಲ್ಲಾ ಸರ್ಕಾರಗಳುನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿವೆ. ಹಾಗಾಗಿವಿಶ್ವಕರ್ಮ ಸಮುದಾಯಕ್ಕೆ ಶಕ್ತಿ ತುಂಬುವುದಕ್ಕಾಗಿಅಖೀಲ ಭಾರತ ವಿಶ್ವಕರ್ಮ ಪರಿಷತ್‌ ರಚಿಸಿರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರುಎಲ್ಲಾ ಕಡೆ ಸುತ್ತಾಡುತ್ತ ನಮ್ಮ ಸಮುದಾಯದವರಸಮಸ್ಯೆಗಳನ್ನು ಆಲಿಸುತ್ತಿದ್ದಾರೆ ಎಂದರು.

ರಾಜ್ಯ ಪೌರಸೇವಾ ನಿವೃತ್ತ ನೌಕರರ ಸಂಘದಅಧ್ಯಕ್ಷ ಎಲ್‌. ನಾರಾಯಣಾಚಾರ್‌, ತಾಲೂಕುಅಧ್ಯಕ್ಷ ಎ. ಶಂಕರಾಚಾರ್‌, ವಿಶ್ವಕರ್ಮ ಅಭಿವೃದ್ಧಿನಿಗಮದ ಜಿಲ್ಲಾ ಸದಸ್ಯ ಮಹಾಲಿಂಗಾಚಾರ್‌,ಮಾಜಿ ಸದಸ್ಯ ಬಿ.ಜಿ. ಕೆರೆ ನಾಗೇಂದ್ರ ಆಚಾರ್‌,ಛಾಯಾದೇವಿ, ಗಾಯತ್ರಿ, ದಾವಣಗೆರೆ ಜಿಲ್ಲಾಧ್ಯಕ್ಷಎಂ.ಈ. ಮೌನೇಶಾಚಾರ್‌, ಚಿತ್ರದುರ್ಗ ಜಿಲ್ಲೆನೂತನ ಅಧ್ಯಕ್ಷ ಎಂ. ಶಂಕರಮೂರ್ತಿ, ಮಹಿಳಾಘಟಕದ ಅಧ್ಯಕ್ಷೆ ವಿಜಯಕುಮಾರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next