Advertisement

ಮೃತರ ಕುಟುಂಬಕ್ಕೆ ಸಚಿವ ಶ್ರೀರಾಮುಲು ಸಾಂತ್ವನ

03:23 PM Nov 24, 2021 | Team Udayavani |

ಚಳ್ಳಕೆರೆ: ಅಂಗನವಾಡಿ ಕಟ್ಟಡದ ಗೋಡೆ ಕುಸಿದುದಂಪತಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲುನಾಯಕನಹಟ್ಟಿಗೆ ತೆರಳಿ ಮೃತರ ಕುಟುಂಬಕ್ಕೆ ಸಾಂತ್ವನಹೇಳಿದರು. ವಿಧಾನ ಪರಿಷತ್‌ ಚುನಾವಣೆಯ ನಂತರನೊಂದ ಕುಟುಂಬಕ್ಕೆ ಅಗತ್ಯವಿರುವ ಸೌಲಭ್ಯಗಳನ್ನುಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.

Advertisement

ಮೃತ ದಂಪತಿ ಪುತ್ರಿ ಅಪೂರ್ವಳನ್ನು ಭೇಟಿ ಮಾಡಿದಸಚಿವರು, ಸರ್ಕಾರದಿಂದ ಸೌಲಭ್ಯಗಳ ಜೊತೆಗೆಸೂಕ್ತ ಉದ್ಯೋಗ ನೀಡಲು ಚಿಂತನೆ ನಡೆಸಲಾಗಿದೆ.ಮನೆಯ ಆಧಾರಸ್ತಂಭವಾದ ತಂದೆ- ತಾಯಿ ಇಬ್ಬರೂದುರ್ಘ‌ಟನೆಯಲ್ಲಿ ಮೃತಪಟ್ಟಿರುವುದು ಮನಸ್ಸಿಗೆ ಹೆಚ್ಚುನೋವು ತಂದಿದೆ.

ಧೈರ್ಯ ತಂದುಕೊಂಡು ಜೀವನನಡೆಸಿ. ಸರ್ಕಾರ ಸದಾ ಕಾಲ ನಿಮ್ಮ ನೆರವಿಗೆ ಬರಲಿದೆ.ಶಿಥಿಲಗೊಂಡ ಗೋಡೆ, ಮನೆ, ಗುಡಿಸಲುಗಳಿದ್ದಲ್ಲಿಅವುಗಳಲ್ಲಿ ವಾಸಿಸುತ್ತಿರುವವರನ್ನು ತೆರವುಗೊಳಿಸಿಆಶ್ರಯ ನೀಡುವಂತೆ ನಿರ್ದೇಶನ ನೀಡಲಾಗಿದೆ.ನಾಯಕನಹಟ್ಟಿಯಲ್ಲೇ ಸುಮಾರು 300ಕ್ಕೂ ಹೆಚ್ಚುಜನರಿಗೆ ಯಾತ್ರಿ ನಿವಾಸದಲ್ಲಿ ಪರ್ಯಾಯ ವ್ಯವಸ್ಥೆಮಾಡಲಾಗಿದೆ ಎಂದರು.

ಬಿಜೆಪಿಯ ತಳಕು-ನಾಯಕನಹಟ್ಟಿ ಮಂಡಲಾಧ್ಯಕ್ಷಈ. ರಾಮ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಜೆ.ಪಿ. ಜಯಪಾಲಯ್ಯ, ಬಿಜೆಪಿ ಮುಖಂಡರಾದಮಹಂತಪ್ಪ, ಮಮತಾ, ವೇಣು, ಶಿವಣ್ಣ, ತ್ರಿಶೂಲ್‌,ರಾಜು, ಜನ್ನಗಾನಹಳ್ಳಿ ಮಲ್ಲೇಶ್‌, ಸಿ.ಎಂ. ಮೋಹನ್‌,ಎಚ್‌.ವಿ. ಪ್ರಕಾಶ್‌ ರೆಡ್ಡಿ, ಗೋವಿಂದಪ್ಪ, ವಿಷ್ಣು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next