Advertisement

ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ

03:19 PM Nov 23, 2021 | Team Udayavani |

ಚಿತ್ರದುರ್ಗ: ಪಕ್ಷದ ವರಿಷ್ಠರುವಿಶ್ವಾಸವಿಟ್ಟು ಕೆ.ಎಸ್‌. ನವೀನ್‌ ಅವರಿಗೆಮತ್ತೆ ವಿಧಾನ ಪರಿಷತ್‌ ಚುನಾವಣೆಸ್ಪರ್ಧೆಗೆ ಅವಕಾಶ ಕಲ್ಪಿಸಿದ್ದಾರೆ. ಈಬಾರಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದುಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿ ವಿಶ್ವಾಸವ್ಯಕ್ತಪಡಿಸಿದರು.

Advertisement

ನಗರದ ಅಕ್ಕಮಹಾದೇವಿಸಮಾಜದಲ್ಲಿ ಸೋಮವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಬಿಜೆಪಿ ಅಭ್ಯರ್ಥಿಯಾಗಿಕೆ.ಎಸ್‌. ನವೀನ್‌ ಮಂಗಳವಾರಜಿಲ್ಲಾ ಧಿಕಾರಿ ಕಚೇರಿಯಲ್ಲಿನಾಮಪತ್ರ ಸಲ್ಲಿಸಲಿದ್ದಾರೆ.

ಮಧ್ಯಾಹ್ನ12 ಗಂಟೆಗೆ ನೀಲಕಂಠೇಶ್ವರಸ್ವಾಮಿದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರಕಾರ್ಯಕರ್ತರು ಹಾಗೂ ಮುಖಂಡರಜೊತೆಗೆ ಜಿಲ್ಲಾ ಧಿಕಾರಿ ಕಚೇರಿಗೆ ತೆರಳಿನಾಮಪತ್ರ ಸಲ್ಲಿಸಲಾಗುವುದು.

ಕೇಂದ್ರಸಚಿವ ಎ. ನಾರಾಯಣಸ್ವಾಮಿ, ಜಿಲ್ಲಾಉಸ್ತುವಾರಿ ಸಚಿವ ಬಿ. ಶ್ರೀರಾಮುಲು,ಸಚಿವ ಬೈರತಿ ಬಸವರಾಜ್‌,ದಾವಣಗೆರೆ ಸಂಸದ ಡಾ| ಜಿ.ಎಂ.ಸಿದ್ದೇಶ್ವರ, ಜಿಲ್ಲೆಯ ಶಾಸಕರು, ವಿಧಾನಪರಿಷತ್‌ ಸದಸ್ಯರು ಕಾರ್ಯಕರ್ತರುಭಾಗವಹಿಸಲಿದ್ದಾರೆ ಎಂದರು.ಬಿಜೆಪಿ ಅಭ್ಯರ್ಥಿ ಕೆ.ಎಸ್‌.ನವೀನ್‌ ಮಾತನಾಡಿ, ಎರಡುಬಾರಿ ಪರಿಷತ್‌ ಚುನಾವಣೆಯಲ್ಲಿಸೋತಿದ್ದರೂ ರಾಜ್ಯ ಮತ್ತು ರಾಷ್ಟ್ರನಾಯಕರು ನನ್ನ ಮೇಲೆ ವಿಶ್ವಾಸವಿಟ್ಟುಮತ್ತೂಂದು ಅವಕಾಶ ನೀಡಿದ್ದಾರೆ.

ಬಿಜೆಪಿ ರಾಜ್ಯ ಪದಾಧಿ ಕಾರಿಗಳ ಪೈಕಿನನಗೆ ಮಾತ್ರ ಟಿಕೆಟ್‌ ನೀಡಿದ್ದಾರೆ.ಗ್ರಾಮ ಪಂಚಾಯಿತಿ ಸದಸ್ಯರುಈ ಚುನಾವಣೆಯಲ್ಲಿ ಮತದಾನಮಾಡಲಿದ್ದು, ಪ್ರತಿಯೊಬ್ಬಮತದಾರರನ್ನು ಈಗಾಗಲೇಸಂಪರ್ಕಿಸಿದ್ದೇನೆ.

Advertisement

ಕಳೆದ ಏಳುವರ್ಷಗಳಲ್ಲಿ ಕೇಂದ್ರ ಸರ್ಕಾರನೇರವಾಗಿ ಗ್ರಾಮ ಪಂಚಾಯಿತಿಗಳಿಗೆಅನೇಕ ಯೋಜನೆಗಳನ್ನು ನೀಡಿದೆ.ಕಳೆದ ಚುನಾವಣೆಯಲ್ಲಿ ಕಡಿಮೆಅಂತರದಿಂದ ಸೋತಿದ್ದೆ. ಈಗ ನನ್ನನ್ನುಮತದಾರರು ಗೆಲ್ಲಿಸುವ ನಂಬಿಕೆಯಿದೆಎಂದು ಹೇಳಿದರು.ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿಕೇಂದ್ರ ಮತ್ತು ರಾಜ್ಯ ಸರ್ಕಾರಗಳುಅನೇಕ ಅಭಿವೃದ್ಧಿ ಕೆಲಸ ಮಾಡಿವೆ.ಈ ಸಾಧನೆಗಳ ಮುಖಾಂತರ ನಮ್ಮಅಭ್ಯರ್ಥಿ ಪರ ಮತ ಕೇಳುತ್ತೇವೆ.ಜಿಲ್ಲೆಯಲ್ಲಿ ಹದಿನಾಲ್ಕು ಸಾವಿರಅಲೆಮಾರಿಗಳಿಗೆ ಮನೆಗಳನ್ನುನೀಡಲಾಗಿದೆ.

ಒಂದು ಗ್ರಾಮಪಂಚಾಯಿತಿಗೆ ಐವತ್ತರಿಂದ ನೂರುಮನೆಗಳನ್ನು ನೀಡಲಾಗುವುದು.ಪ್ರಧಾನಮಂತ್ರಿಗಳ ಗ್ರಾಮ ಸಡಕ್‌ಯೋಜನೆ, ಕನ್ಯಾಕುಮಾರಿಯಿಂದಹಿಮಾಲಯದವರೆಗೆ ಒಬ್ಬೊಬ್ಬಶಾಸಕರಿಗೆ 30 ಕಿಮೀ ರಸ್ತೆಗಳನ್ನುನೀಡಿದೆ. ಜಲಜೀವನ್‌ ಮಿಷನ್‌,ಅಟಲ್‌ ಭೂಜಲ್‌ ಇವೆಲ್ಲಾ ಒಳ್ಳೆಯಸಾಧನೆಗಳು.

ಕೋವಿಡ್‌ ಸಂದರ್ಭದಲ್ಲಿಬಡವರಿಗೆ ಉಚಿತವಾಗಿ ಪಡಿತರನೀಡಿದ ಹೆಗ್ಗಳಿಕೆ ನಮ್ಮ ಸರ್ಕಾರದ್ದು.ಮನೆ ಮನೆಗೆ ಗ್ಯಾಸ್‌ ಸಂಪರ್ಕಆರಂಭವಾಗಿದೆ. ಈ ಬಾರಿಯವಿಧಾನಪರಿಷತ್‌ ಚುನಾವಣೆಯಲ್ಲಿಶತಾಯಗತಾಯ ಕೆ.ಎಸ್‌. ನವೀನ್‌ಗೆಲ್ಲಿಸುತ್ತೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ನಗರಸಭೆಅಧ್ಯಕ್ಷ ತಿಪ್ಪಮ್ಮ, ನಗರಾಭಿವೃದ್ಧಿಪ್ರಾಧಿಕಾರದ ಅಧ್ಯಕ್ಷ ಟಿ. ಬದರೀನಾಥ್‌,ಪ್ರಧಾನ ಕಾರ್ಯದರ್ಶಿಗಳಾದಜಯಪಾಲ್‌, ಸುರೇಶ್‌ ಸಿದ್ದಾಪುರಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next