ಚಿತ್ರದುರ್ಗ: ಜಿಲ್ಲೆಯಲ್ಲಿ ಸುರಿಯುತ್ತಿರುವಅಕಾಲಿಕ ಮಳೆಯಿಂದಾಗಿ ಅನ್ನದಾತರು ಸಂಕಷ್ಟಕ್ಕೆಸಿಲುಕಿದ್ದಾರೆ. ಹಿಂಗಾರು ಮುಗಿಯುವ ಹಂತಬಂದರೂ ಬಿಟ್ಟೂ ಬಿಡದೆ ಸುರಿಯುತ್ತಿರುವಮಳೆಯಿಂದಾಗಿ ಮುಂಗಾರಿನ ಅನುಭವಆಗುತ್ತಿದೆ.ಮುಂಗಾರಿನಲ್ಲಿ ಜಿಲ್ಲೆಯಲ್ಲಿ ನಾಟಿ ಮಾಡಿರುವಬೆಳೆಗಳನ್ನು ಕಟಾವು ಮಾಡುವ ಸಮಯ.
ಆದರೆ ಕಳೆದೊಂದು ತಿಂಗಳಿಂದಒಂದು ವಾರವೂ ಸರಿಯಾಗಿಬಿಡುವು ಕೊಡದೆ ಮಳೆಸುರಿಯುತ್ತಿರುವುದರಿಂದತೋಟಗಾರಿಕೆ ಸೇರಿದಂತೆಎಲ್ಲಾ ರೀತಿಯಬೆಳೆಗಳು ಜಮೀನಿನಲ್ಲೇಉಳಿದಿವೆ. ಮಳೆ ಹೆಚ್ಚಾದಪರಿಣಾಮ ಕೆಲ ಬೆಳೆಗಳುಹಾಳಾಗುತ್ತಿವೆ. ಹಲವೆಡೆ ರೈತರಜಮೀನುಗಳಲ್ಲಿ ಮೆಕ್ಕೆಜೋಳದತೆನೆಗಳಲ್ಲಿ ಮೊಳಕೆ ಕಾಣಿಸಿಕೊಂಡಿದೆ.ರಾಗಿ ಕಟಾವಿಗೆ ಬಂದರೂ ಕಟಾವು ಮಾಡದ ಸ್ಥಿತಿಇದ್ದರೆ, ಶೇಂಗಾ ಬೆಳೆ ಸಂಪೂರ್ಣ ಹಾಳಾಗಿದೆ.ಈರುಳ್ಳಿ ಕೂಡ ಈ ಹಿಂದೆಯೇ ಅತಿವೃಷ್ಟಿಯಿಂದಹಾಳಾಗಿರುವ ಬಗ್ಗೆ ಜಿಲ್ಲಾಡಳಿತ ಸರ್ಕಾರಕ್ಕೆ ವರದಿಸಲ್ಲಿಸಿದೆ.
ಜಿಟಿ ಜಿಟಿ ಮಳೆಗೆ ಕೊಳೆಯುತ್ತಿದೆ ಶೇಂಗಾ: ಜಿಲ್ಲೆಯಚಳ್ಳಕೆರೆ, ಮೊಳಕಾಲ್ಮೂರು, ಹಿರಿಯೂರು ಹಾಗೂಚಿತ್ರದುರ್ಗದ ಕೆಲ ಭಾಗಗಳಲ್ಲಿ 1.40 ಲಕ್ಷ ಹೆಕ್ಟೇರ್‌ನಲ್ಲಿ ಅತಿ ಹೆಚ್ಚು ಬೆಳೆಯುವ ಹಾಗೂ ಈ ಭಾಗದಪ್ರಮುಖ ಬೆಳೆಯೂ ಆಗಿರುವ ಶೇಂಗಾ ಜಿಟಿಜಿಟಿ ಮಳೆಗೆ ಕೊಳೆಯುತ್ತಿದೆ. ಕಾಯಿ ಬಲಿಯುವಮುನ್ನವೇ ಶೇಂಗಾ ಬಳ್ಳಿ ಮಳೆಗೆ ಕೊಳೆಯುತ್ತಿದೆ.ಇದರಿಂದ ರಾಸುಗಳಿಗೆ ಮೇವು ಸಿಗದಂತಹಸ್ಥಿತಿ ನಿರ್ಮಾಣವಾಗಿದೆ.
ಇತ್ತ ಕೆಲ ರೈತರುಕಟಾವು ಮಾಡಿ ಜಮೀನು, ಕಣಗಳಲ್ಲಿ ಶೇಂಗಾಸಂಗ್ರಹಿಸಿಟ್ಟಿದ್ದಾರೆ. ಆದರೆ ಮಳೆಯ ಕಾರಣಕ್ಕೆಅದೂ ನೀರು ಪಾಲಾಗುತ್ತಿದೆ. ಕೈಗೆ ಬಂದ ತುತ್ತುಬಾಯಿಗೆ ಬಾರದ ಸ್ಥಿತಿ ರೈತರದ್ದಾಗಿದೆ.
ಅತಿಯಾದ ಮಳೆಗೆ ಪಪ್ಪಾಯ ನಾಶ: ಹೊಳಲ್ಕೆರೆ,ಹೊಸದುರ್ಗ, ಹಿರಿಯೂರು ಭಾಗಗಳಲ್ಲಿ ಹೆಚ್ಚುರೈತರು ಪಪ್ಪಾಯ ಬೆಳೆಯುತ್ತಾರೆ. ಇದೊಂದುಸೂಕ್ಷ್ಮ ಬೆಳೆಯಾಗಿರುವುದರಿಂದ ಅತಿಯಾದಮಳೆ, ಶೀತದ ವಾತಾವರಣಕ್ಕೆ ಪಪ್ಪಾಯ ಬಲುಬೇಗ ಹಾಳಾಗುತ್ತದೆ. ಈಗಾಗಲೇ ಸಾಕಷ್ಟು ಮಳೆಸುರಿದು ಜಮೀನುಗಳಲ್ಲಿ ವಾರಗಟ್ಟಲೇ ನೀರುನಿಂತು ಹೊಸದುರ್ಗ ತಾಲೂಕಿನ ನಾಕೀಕೆರೆ ಗ್ರಾಮದ ರೈತರಾದ ಜಿ.ಬಿ. ನಾಗರಾಜ್, ರಾಮಣ್ಣಎಂಬುವವರ ಪಪ್ಪಾಯ ಬೆಳೆ ಸಂಪೂರ್ಣನಾಶವಾಗಿರುವುದಾಗಿ ತಿಳಿಸಿದ್ದಾರೆ. ಎರಡು ಸಾವಿರಪಪ್ಪಾಯ ನಾಟಿ ಮಾಡಿದ್ದು, ಇದಕ್ಕಾಗಿ 4 ಲಕ್ಷ ರೂ.ವೆಚ್ಚ ಮಾಡಲಾಗಿತ್ತು. ಆದರೆ ಮಳೆಯಿಂದಾಗಿಎಲ್ಲವೂ ಕೈಬಿಟ್ಟು ಹೋಗಿದೆ ಎಂದು ರೈತನಾಗರಾಜ್ ತಿಳಿಸಿದ್ದಾರೆ.
ಬಾಳೆಗೆ ಬೆಲೆಯೇ ಇಲ್ಲ: ವಾತಾವರಣ, ಮಾರುಕಟ್ಟೆಮತ್ತಿತರೆ ಕಾರಣಕ್ಕೆ ಜಿ-9 ಎಂದು ಕರೆಯುವಪಚ್ಚ ಬಾಳೆಗೆ ಬೆಲೆಯೇ ಇಲ್ಲವಾಗಿದೆ. ಜಿಲ್ಲೆಯಬಹುತೇಕ ರೈತರು ಕಳೆದೊಂದು ವರ್ಷದಿಂದಕಷ್ಟಪಟ್ಟು ಬೆಳೆಸಿದ್ದ ಬಾಳೆಗೆ ಪ್ರತಿ ಕೆಜಿಗೆ 5 ರೂ.ಒಳಗೆ ದರವಿದೆ. ಇದರಿಂದ ಖರೀ ದಿದಾರರು ತೋಟಗಳಿಗೆ ಕಾಲಿಡುತ್ತಿಲ್ಲ. ರೈತರಿಗೆ 4 ಅಥವಾ5 ರೂ. ದರ ನೀಡಿದರೂ ಖರೀ ದಿಸಿ ಮಾರುಕಟ್ಟೆಗೆತೆಗೆದುಕೊಂಡು ಹೋದರೆ ನಷ್ಟವಾಗುತ್ತದೆ ಎಂಬಕಾರಣಕ್ಕೆ ಬಾಳೆ ಖರೀ ದಿಯನ್ನೇ ನಿಲ್ಲಿಸಿದ್ದಾರೆ.ಇದರಿಂದ ಅನೇಕ ರೈತರ ತೋಟಗಳ ಬಾಳೆಗಿಡದಲ್ಲೇ ಗೊನೆ ಹಣ್ಣಾಗಿ ಮಾಗಿ ಉದುರುತ್ತಿವೆ.
ತಿಪ್ಪೇಸ್ವಾಮಿ ನಾಕೀಕೆರೆ