Advertisement

ಗ್ರಾಮೀಣ ಕ್ರೀಡೆಗೂ ಪ್ರೋತ್ಸಾಹ ದೊರೆಯಲಿ

06:20 PM Nov 16, 2021 | Team Udayavani |

ಚಿತ್ರದುರ್ಗ: ಕನ್ನಡ ಭಾಷೆಯ ಜೊತೆಗೆಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕಾಗಿದೆ ಎಂದು ಚಿನ್ಮುಲಾದ್ರಿ ಸಾಹಿತ್ಯ ವೇದಿಕೆಅಧ್ಯಕ್ಷೆ ದಯಾ ಪುತ್ತೂರ್ಕರ್‌ ಹೇಳಿದರು.ಆರ್ಯವೈಶ್ಯ ಸಂಘ, ಆರ್ಯವೈಶ್ಯಸಾಹಿತ್ಯ ಪರಿಷತ್‌, ವಾಸವಿ ಮಹಿಳಾ ಸಂಘದಸಂಯುಕ್ತಾಶ್ರಯದಲ್ಲಿ ಕ®Âಕ ಾ ಪರಮೇಶ್ವರಿದೇವಸ್ಥಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವಕನ್ನಡದ ಹಬ್ಬದಲ್ಲಿ ಅವರು ಮಾತನಾಡಿದರು.

Advertisement

ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲಆದ್ಯತೆ ನೀಡಿ ನಂತರ ಬೇರೆ ಭಾಷೆಗಳನ್ನುಕಲಿಯುವುದರಲ್ಲಿ ತಪ್ಪಿಲ್ಲ. ಮಕ Rಳಿಗೆ ಭಾಷೆ,ಶಿಕ್ಷಣದ ಜೊತೆ ಕ್ರೀಡೆಯೂ ಅತ್ಯವಶ್ಯಕ.ಹಳ್ಳಿ ಭಾಗದ ಜಾನಪದ ನಶಿಸುತ್ತಿದೆ. ಕ್ರಿಕೆಟ್‌ಗೆ ಸಿಕ Rಷ್ಟು ಪ್ರೋತ್ಸಾಹ ಗ್ರಾಮೀಣ ಕ್ರೀಡೆಗಳಿಗೆಇಲ್ಲದಂತಾಗಿದೆ ಎಂದರು.
ಮನಸ್ಸು ಖುಷಿಯಾಗಿದ್ದರೆ ಆರೋಗ್ಯಚೆನ್ನಾಗಿರುತ್ತದೆ. ಕಲೆ ಬೆಳೆದಾಗನಿಜವಾಗಿಯೂ ಕನ್ನಡ ರಾಜ್ಯೋತ್ಸವಕ್ಕೆಅರ್ಥ ಸಿಗುತ್ತದೆ. ಭಾಷೆ ಬಗ್ಗೆ ಎಲ್ಲರಲ್ಲಿಯೂಪ್ರೀತಿ, ಅಭಿಮಾನವಿರಬೇಕು. ಆಗ ಮಾತ್ರಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ.ಅನಕ್ಷರಸ್ಥರಿಂದ ಜಾನಪದ ಉಳಿದುಕೊಂಡಿದೆ.ಭಾಷೆಯ ಜೊತೆ ಬದುಕುವ ಛಲ,ಆñವಿಶಾ ‌¾ Ìಸವನ್ನು ತುಂಬಬೇಕಿದೆ ಎಂದು ಕರೆನೀಡಿದರು.

ಆರ್ಯವೈಶ್ಯ ಸಂಘದ ಅಧ್ಯಕ್ಷ ಕಾಶಿವಿಶ್ವನಾಥ ಶೆಟ್ಟಿ ಮಾತನಾಡಿ, ಹರಿದು ಹಂಚಿಹೋಗಿದ್ದ ಕನ್ನಡ ನಾಡಿನ ಭಾಗವನ್ನುಒಂದುಗೂಡಿಸಿ ನವೆಂಬರ್‌ ಒಂದರಂದುಕ®ಡ ‌° ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಕ®ಡ ‌°ಭಾಷೆಯ ಮೇಲಿನ ಅಭಿಮಾನ ಒಂದುದಿನಕ್ಕೆ ಸೀಮಿತವಾಗಿರಬಾರದು. ಕನ್ನಡದ ಬಗ್ಗೆಪ್ರತಿನಿತ್ಯ ಅಭಿಮಾನ ಮೈಗೂಡಿಸಿಕೊಂಡಾಗಮಾತ್ರ ಭಾಷೆ ಉಳಿಯಲು ಸಾಧ್ಯ. ಕೊರೊನಾಹಾವಳಿಯಿಂದ ಕಳೆದ ಎರಡು ವರ್ಷಗಳಿಂದಯಾವುದೇ ಕಾರ್ಯಕ್ರಮ ಮಾಡಲುಆಗಿರಲಿಲ್ಲ. ಈಗ ಮತ್ತೆ ಆರಂಭಗೊಂಡಿದೆ.ಹಾಗಂತ ಮೈಮರೆಯುವುದು ಬೇಡ.ಎಲ್ಲರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರಕಾಪಾಡಿಕೊಳ್ಳೋಣ ಎಂದರು.

ಪ್ರೊ| ಟಿ.ವಿ. ಸುರೇಶ್‌ ಗುಪ್ತ ಮಾತನಾಡಿ,ಕನ್ನಡ ಭಾಷೆಗೆ ಅಮೋಘ ಪರಂಪರೆಇದೆ. ಪ್ರತಿಯೊಬ್ಬರೂ ಕನ್ನಡವನ್ನುಮಾತನಾಡುವುದರಿಂದ ಭಾಷೆಗೆ ಗಟ್ಟಿತನಬರುತ್ತದೆ.ಅದಕ್ಕಾಗಿಕನ್ನಡರಾಜ್ಯೋತ್ಸವದಂದುಎಲ್ಲರೂ ಸೇರಿ ಕನ್ನಡದ ಹಬ್ಬವನ್ನು ಆಚರಿಸಿಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಬೇಕಾಗಿದೆಎಂದು ಅಭಿಪ್ರಾಯಪಟ್ಟರು.ಆರ್ಯವೈಶ್ಯ ಸಂಘದ ಪ್ರಧಾನಕಾರ್ಯದರ್ಶಿ ಎಲ್‌.ಆರ್‌. ವೆಂಕಟೇಶ್‌ಕುಮಾರ್‌, ಶೈಲಜಾಬಾಬುಮಾತನಾಡಿದರು.ಸುಜಾತ ಪ್ರಾಣೇಶ್‌ ಅಧ್ಯಕ್ಷತೆವಹಿಸಿದ್ದರು. ಇದೇ ವೇಳೆ ಎಚ್‌.ಎಸ್‌.ಮಂಜಮ್ಮ ಹಾಗೂ ತಿಮ್ಮ ಶ್ರೇಷ್ಠಿ ಅವರನ್ನುಸನ್ಮಾನಿಸಲಾಯಿತು. ಶೋಭಾ ಶ್ರೀನಿವಾಸ್‌ಮತ್ತು ಸಂಗಡಿಗರು ಪ್ರಾರ್ಥಿಸಿದರು.ರಾಜೇಶ್ವರಿ ಸ್ವಾಗತಿಸಿದರು. ವಾಸವಿ ಮಹಿಳಾಸಂಘದ ಅಧ್ಯಕ್ಷೆ ಸುಧಾ ನಾಗರಾಜ್‌ಬಹುಮಾನ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next