Advertisement

ಶೇಂಗಾಕ್ಕೆ ಕಂಟಕವಾಯ್ತು ಮಳೆಎಸ್‌. ರಾಜಶೇಖರ

02:38 PM Nov 14, 2021 | Team Udayavani |

ಮೊಳಕಾಲ್ಮೂರು: ಪಟ್ಟಣ ಹಾಗೂ ತಾಲೂಕಿನಾದ್ಯಂತಕೆಲ ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಶೇಂಗಾ ಬೆಳೆಗೆ ಕುತ್ತು ತಂದಿಟ್ಟಿದೆ.ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವಮಳೆಯಿಂದಾಗಿ ರೈತರು, ವ್ಯಾಪಾರಸ್ಥರು ಹಾಗೂಸಾರ್ವಜನಕಿರು ಆತಂಕಗೊಂಡಿದ್ದಾರೆ.

Advertisement

ತಾಲೂಕಿನಪ್ರಮುಖ ಬೆಳೆಯಾದ ಶೇಂಗಾ ಕಟಾವಿಗೆ ಬಂದಸಮಯದಲ್ಲೇ ಮಳೆ ಕಾಟ ಶುರುವಾಗಿದೆ.ಅಲ್ಪ ಪ್ರಮಾಣದಲ್ಲಿ ಬೆಳೆದ ಶೇಂಗಾವನ್ನುಮಳೆಯಾಗುವುದಕ್ಕಿಂತ ಮುನ್ನವೇ ಬಹುತೇಕರೈತರು ಕಟಾವು ಮಾಡಿದ್ದಾರೆ. ಕೆಲವು ರೈತರುಶೇಂಗಾ ಕಟಾವು ಮಾಡುತ್ತಿದ್ದಂತೆಯೇ ಮಳೆಸುರಿಯಲಾರಂಭಿಸಿದೆ. ಹಾಗಾಗಿ ಕಟಾವು ಕಾರ್ಯವನ್ನುಅರ್ಧಕ್ಕೆ ನಿಲ್ಲಿಸಿದ್ದು, ಶೇಂಗಾ ಬಳ್ಳಿಯನ್ನು ಬಣವೆಗೆಹಾಕಲು ಆಗುತ್ತಿಲ್ಲ.

ಕಟಾವು ಆಗುವ ಶೇಂಗಾ ಬೆಳೆಮಸಿ ರೋಗ ಇಲ್ಲವೆ ಬೂದಿ ರೋಗಕ್ಕೆ ತುತ್ತಾಗುವಭೀತಿ ಎದುರಾಗಿರುವುದರಿಂದ ಮೇವಿನ ಕೊರತೆಎದುರಾಗುವ ಸಾಧ್ಯತೆಯೂ ಇಲ್ಲದಿಲ್ಲ.ಶೇಂಗಾ ಬೆಳೆ ಕಟಾವಿನ ಸಮಯ ಮುಗಿದಿದೆ.ಇದೇ ರೀತಿ ಮಳೆ ಮುಂದುವರೆದಲ್ಲಿ ಕಟಾವುಮಾಡದ ಶೇಂಗಾ ಮೊಳಕೆಯೊಡೆದು ಹಾನಿಯಾಗುವಆತಂಕ ಎದುರಾಗಿದೆ.

ಕಟಾವು ಮಾಡಿದ ಶೇಂಗಾವನ್ನುಮಳೆಗೆ ಹಾನಿಗೀಡಾಗದಂತೆ ತಾಡಪಾಲುಗಳಿಂದರಕ್ಷಿಸಿಕೊಳ್ಳುವುದು ಹರಸಾಹಸ ವಾಗಿದೆ. ಬಣವೆಗೆಹಾಕಿದ ಶೇಂಗಾ ಬಳ್ಳಿ ಬಿಸಿಲಿಲ್ಲದೆ ಕೊಳೆತುಹಾನಿಯಾಗುವ ಸ್ಥಿತಿ ನಿರ್ಮಾಣವಾಗಿದೆ. ನಿತ್ಯವೂಸುರಿವ ಮಳೆ ಶೇಂಗಾಕ್ಕೆ ಕಂಟಕವಾಗಿ ಪರಿಣಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next