ಚಿತ್ರದುರ್ಗ: ಸರ್ಕಾರಿ ಮತ್ತಿತರೆಕಾಮಗಾರಿಗಳಿಗೆ ಮಣ್ಣು, ಜಲ್ಲಿ,ಮರಳು ಸಾಗಾಣೆ ಮಾಡುವ ಲಾರಿಗಳುಓವರ್‌ಲೋಡ್ ಮಾಡಿಕೊಂಡುತಿರುಗಾಡುವುದರಿಂದ ರಸ್ತೆಗಳುಹಾಳಾಗುತ್ತಿವೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ದೂರಿದರು.
ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಕಾಮಗಾರಿಯ ಬಿಲ್ ಕೂಡಾಗುತ್ತಿಗೆದಾರರಿಗೆ ಪಾವತಿ ಆಗಿರುವುದಿಲ್ಲ.ಅಷ್ಟರಲ್ಲೇ ರಸ್ತೆಗಳು ಸಂಪೂರ್ಣ ಹಾಳಾಗಿವೆಎಂದರು.ಚಿತ್ರದುರ್ಗ ತಾಲೂಕಿನಲ್ಲಿ ಕಳೆದೊಂದುವರ್ಷದಲ್ಲಿ ನಿರ್ಮಾಣ ಮಾಡಿರುವ ಸುಮಾರು50 ಕೋಟಿ ರೂ. ಮೊತ್ತದ ಗ್ರಾಮೀಣಪ್ರದೇಶಗಳ ರಸ್ತೆಗಳಲ್ಲಿ 35 ರಿಂದ 40 ಟನ್‌ಮಣ್ಣು, ಜಲ್ಲಿ ತುಂಬಿಕೊಂಡು ಓಡಾಡುವಲಾರಿಗಳಿಂದ ಸಂಪೂರ್ಣ ಹಾಳಾಗಿವೆ.
ಈರಸ್ತೆ ನಿರ್ಮಾಣಕ್ಕೆ ಸರ್ಕಾರದಿಂದ ಮತ್ತೆ ಐದುವರ್ಷ ಅನುದಾನ ಬರುವುದಿಲ್ಲ. ಇದುದೊಡ್ಡ ಸಮಸ್ಯೆಯಾಗಿದ್ದು, ಜಿಲ್ಲಾಡಳಿತ ತಕ್ಷಣಗಮನ ಹರಿಸಬೇಕು ಎಂದು ಆಗ್ರಹಿಸಿದರು.ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಲಘುವಾಹನಗಳ ಸಂಚಾರ ಮಾಡಬಹುದು.ಆದರೆ ಭಾರೀ ಗಾತ್ರದ ಅಥವಾ ಅತಿಯಾದತೂಕ ಹೊತ್ತ ವಾಹನಗಳು ಓಡಾಡುತ್ತಿವೆ. 3ಕೋಟಿ ರೂ. ಅನುದಾನದಲ್ಲಿ ನಿರ್ಮಿಸಿರುವಜೋಡಿಚಿಕ್ಕೇನಹಳ್ಳಿ-ಜೆ.ಎನ್. ಕೋಟೆರಸ್ತೆ, ಒಂದೂವರೆ ಕೋಟಿ ರೂ. ವೆಚ್ಚದಮರಡಿಹಳ್ಳಿ ರಸ್ತೆಗಳು ಟೈರ್ ಕೆಳಗೆ ಸಿಕ್ಕಚಪಾತಿಯಂತಾಗಿವೆ.
ಇದೇ ರಸ್ತೆಯಲ್ಲಿ 4ಡೆಕ್‌ಗಳನ್ನು ನಿರ್ಮಿಸಿದ್ದು ಅವೂ ಕುಸಿದಿವೆಎಂದು ಅಸಮಾಧಾನ ವ್ಯಕ್ತಪಡಿಸಿದರು.ಮುರುಘಾ ಮಠದಿಂದ ರೈಲ್ವೆ ಹಳಿ ಬಳಿಈಚಲನಾಗೇನಹಳ್ಳಿಗೆ ಹೋಗುವ ರಸ್ತೆಯಲ್ಲಿಬೈಕ್ ಸಂಚರಿಸುವುದು ಕಷ್ಟವಾಗಿದೆ.ರಾಷ್ಟ್ರೀಯ ಹೆದ್ದಾರಿಯಿಂದ ಗುತ್ತಿನಾಡು,ಗೂಳಯ್ಯನಹಟ್ಟಿ, ಕ್ಯಾಸಾಪುರ ಸಂಚಾರಮಾಡುವ ರಸ್ತೆ, ಮಾರಘಟ್ಟ-ಚಿಕ್ಕಪುರರಸ್ತೆಯಲ್ಲಿ ಪಿಎನ್‌ಸಿ ಕಂಪನಿಯ ಲಾರಿಗಳುಮಣ್ಣು ತುಂಬಿಕೊಂಡು ಸಂಚಾರ ಮಾಡಿಸಂಪೂರ್ಣ ಹಾಳಾಗಿವೆ.
ಚಿತ್ರದುರ್ಗನಗರದಲ್ಲಿ ಅಮƒತ ಆಯುರ್ವೇದಿಕ್‌ಕಾಲೇಜು ಬಳಿ ಗುಡ್ಡದಿಂದ ಮಣ್ಣುಸಾಗಾಣೆ ಮಾಡಿ ಆ ರಸ್ತೆ ಕೂಡ ಹಾಳಾಗಿದೆ.ರಾತ್ರಿ ವೇಳೆ ಓವರ್‌ಲೋಡ್ ಮರಳುತುಂಬಿಕೊಂಡು ಓಡಾಡುವ ವಾಹನಗಳೂಇದಕ್ಕೆ ಕಾರಣವಾಗಿವೆ ಎಂದು ದೂರಿದರು.