Advertisement

ಪರಿಷತ್‌ ಚುನಾವಣೆ: ಮತದಾರರ ಪಟ್ಟಿಸಲ್ಲಿಕೆಗೆ ಸೂಚನೆ

03:30 PM Nov 11, 2021 | Team Udayavani |

ಚಿತ್ರದುರ್ಗ: ವಿಧಾನ ಪರಿಷತ್‌ ಸ್ಥಳೀಯಸಂಸ್ಥೆಗಳ ಮತದಾರರ ಪಟ್ಟಿಯನ್ನು ಚುನಾವಣಾಆಯೋಗಕ್ಕೆ ಸಲ್ಲಿಸಬೇಕಾಗಿದ್ದು, ತಹಶೀಲ್ದಾರ್‌ಗಳು ತಮ್ಮ ವ್ಯಾಪ್ತಿಯ ಮತದಾರರ ಪಟ್ಟಿಯನ್ನುಆದಷ್ಟು ಬೇಗ ನೀಡಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಸೂಚಿಸಿದರು.
ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ವಿಧಾನ ಪರಿಷತ್‌ಚುನಾವಣೆ-2021 ಚಿತ್ರದುರ್ಗ ಸ್ಥಳೀಯಸಂಸ್ಥೆಗಳ ಕ್ಷೇತ್ರದ ಸಂಬಂಧ ಚುನಾವಣಾಸಭೆಯ ಅಧ್ಯಕ್ಷತೆ ವಹಿಸಿ ಅವರುಮಾತನಾಡಿದರು. ವಿಧಾನ ಪರಿಷತ್ತಿಗೆಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಚುನಾವಣೆ-2021ರ ಮಾದರಿ ನೀತಿಸಂಹಿತೆಈಗಾಗಲೇ ಜಾರಿಯಲ್ಲಿದ್ದು, ನೀತಿಸಂಹಿತೆಉಲ್ಲಂಘನೆಯಾಗದಂತೆ ಜವಾಬ್ದಾರಿಯಿಂದಕಾರ್ಯ ನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನಸೂಚನೆ ನೀಡಿದರು.

Advertisement

ಮಾದರಿ ನೀತಿಸಂಹಿತೆ ನ. 9 ರಿಂದಜಾರಿಯಾಗಿದ್ದು, ಚುನಾವಣಾ ಪ್ರಕ್ರಿಯೆಮುಕ್ತಾಯಗೊಳ್ಳುವವರೆಗೂ ಅಂದರೆಡಿಸೆಂಬರ್‌ 16 ರವರೆಗೂ ಜಾರಿಯಲ್ಲಿರುತ್ತದೆ.ನೀತಿಸಂಹಿತೆ ಜಾರಿಯಲ್ಲಿರುವುದರಿಂದಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ.ಈ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ,ತಾಲೂಕು ಪಂಚಾಯಿತಿ ಇಒ ಹಾಗೂ ಗ್ರಾಮಪಂಚಾಯಿತಿ ಅಭಿವೃದ್ಧಿ ಅ ಧಿಕಾರಿಗಳು ಅಗತ್ಯಕ್ರಮ ವಹಿಸಬೇಕು ಎಂದರು.

ವಿಧಾನ ಪರಿಷತ್‌ ಚುನಾವಣೆಯಲ್ಲಿಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯಿತಿ,ಗ್ರಾಮ ಪಂಚಾಯಿತಿ, ಗ್ರಾಮ ಪಂಚಾಯಿತಿ,ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಚುನಾಯಿತ ಜನಪ್ರತಿನಿ ಗಳು ಮತಚಲಾಯಿಸಲಿದ್ದಾರೆ. ಚುನಾವಣಾ ಆಯೋಗದನಿರ್ದೇಶನದಂತೆ ಸಮಯಕ್ಕೆ ಸರಿಯಾಗಿ ಮಾಹಿತಿಒದಗಿಸಬೇಕು. ಚುನಾವಣಾ ಕರ್ತವ್ಯದಲ್ಲಿಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು.

ಹಾಗಾಗಿ ಅ ಕಾರಿಗಳುಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು.ಮತದಾನ ಕೇಂದ್ರಗಳ ಸ್ಥಾಪನೆ, ಮತಗಟ್ಟೆಸಿಬ್ಬಂದಿಗಳ ನೇಮಕಾತಿ, ಮತಗಟ್ಟೆ ಸಿಬ್ಬಂದಿಗಳಿಗೆತರಬೇತಿ, ಮತಗಟ್ಟೆ ಸಾಮಗ್ರಿಗಳ ಸಂಗ್ರಹಣೆ,ಮತಪೆಟ್ಟಿಗೆಗಳ ಸಿದ್ಧತೆಯನ್ನು ಕೈಗೊಳ್ಳುವಂತೆತಿಳಿಸಿದರು.ಸಭೆಯಲ್ಲಿ ಅಪರ ಜಿಲ್ಲಾ ಧಿಕಾರಿ ಇ. ಬಾಲಕೃಷ್ಣ,ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ|ರಂಗಸ್ವಾಮಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ವರಿಷ್ಠಾ ಧಿಕಾರಿ ನಂದಗಾವಿ, ಚುನಾವಣಾತಹಶೀಲ್ದಾರ್‌ ಸಿ.ಜೆ. ಕೃಷ್ಣಮೂರ್ತಿ ಸೇರಿದಂತೆಜಿಲ್ಲಾ ಮತ್ತು ತಾಲೂಕು ಮಟ್ಟದ ಅ ಧಿಕಾರಿಗಳುಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next