Advertisement

ಬುಡಕಟ್ಟು ಉತ್ಸವದಲ್ಲಿ ನೆನಪಿನ ಮೆರವಣಿಗೆ

04:42 PM Nov 10, 2021 | Team Udayavani |

ಚಿತ್ರದುರ್ಗ: ಎಲ್ಲೋ ಕೇಳಿದ, ಎಲ್ಲೋ ಓದಿದ್ದ, ಎಂದೋನೋಡಿದ್ದ ನೆನಪಿನ ಮೆರವಣಿಗೆ ನಗರದ ಹಳೇ ಮಾಧ್ಯಮಿಕಶಾಲಾ ಆವರಣದಲ್ಲಿ ನಡೆದ ಬುಡಕಟ್ಟು ಉತ್ಸವದಲ್ಲಿಮಂಗಳವಾರ ಸಂಜೆ ನಡೆಯಿತು.

Advertisement

ದೀಪಾವಳಿ ಸಂದರ್ಭದಲ್ಲಿ ಅಂಟಿಕೆ-ಪಿಂಟಿಕೆ ನೃತ್ಯಮಾಡುತ್ತಾ ಬರುತ್ತಿರುವುದು, ಕರಡಿ ಆಡಿಸುತ್ತಾ ಬಂದುಕುಣಿಸುವುದು, ಅದರಿಂದ ಮಕ್ಕಳಿಗೆ ತಾಯತ ಕಟ್ಟಿಸುವುದುಸೇರಿದಂತೆ ಹತ್ತಾರು ನೃತ್ಯ ರೂಪಕಗಳುಕಣ್ಣು ಮತ್ತು ಮನಸ್ಸಿಗೆಮುದ ನೀಡಿದವು. ಕೇಂದ್ರ ಬುಡಕಟ್ಟು ವ್ಯವಹಾರಗಳಮಂತ್ರಾಲಯ ಹಾಗೂ ರಾಜ್ಯದ ಪರಿಶಿಷ್ಟ ಪಂಗಡಗಳ ಸಚಿವಾಲಯ, ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮತ್ತು ಚಿತ್ರದುರ್ಗ ಜಿಲ್ಲಾಡಳಿತದ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಬುಡಕಟ್ಟು ಉತ್ಸವದ ಸಮಾರೋಪದಲ್ಲಿ ಬುಡಕಟ್ಟುನೃತ್ಯಗಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ನಾಯಕ ಸಮುದಾಯದ ಖಾಸಾ ಬೇಡರ ಪಡೆ,ಪೋತರಾಜ ನೃತ್ಯ, ಶಿಕಾರಿ ಕುಣಿತ, ಸೋಬಾನೆ ಪದ, ಜೇನುಕುರುಬರಮಕ್ಕಳಕುಣಿತ,ಬುಂಡೆಕರೆಯುವುದು,ಕಾಟಿವೇಷ,ಕೋಲಾಟ, ಅಮ್ಮಳಮ್ಮ, ಗಜಮೇಳ, ಪಂಜರಿಯವರಕುಣಿತ,ಇರುಳಿಗರು, ಸೋಲಿಗರು, ಸಿದ್ಧಿ, ಯರವ,ಕೊರಗ,ಕುಡಿಯ,ಗೋಂಡ ಸಮುದಾಯದ ಡಕ್ಕೆ ಕುಣಿತ, ಗೌಡ್ಲು ಕಲಾ ತಂಡಸೇರಿದಂತೆ ಎರಡು ದಿನಗಳಲ್ಲಿ ಬರೋಬ್ಬರಿ 34 ಬುಡಕಟ್ಟುಸಮುದಾಯಗಳ ನೃತ್ಯಗಳು ಪ್ರದರ್ಶನಗೊಂಡವು.

ಸಿಂಹಹಾಗೂ ಕರಡಿ ಕುಣಿತವನ್ನು ಶಾಲಾ ಮಕ್ಕಳು ಕೇಕೆ ಹೊಡೆದುಅನುಭವಿಸಿದರು. ಮೊದಲ ದಿನ ನೀರಸವಾಗಿದ್ದ ಬುಡಕಟ್ಟುಉತ್ಸವ ಎರಡನೇ ಸಾಂಸ್ಕೃತಿಕ ನೃತ್ಯಗಳ ಮೂಲಕ ಕಳೆಗಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next