Advertisement
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿಸೋಮವಾರ ಸಂಜೆ ರಾಜ್ಯ ಮಟ್ಟದ ಬುಡಕಟ್ಟುಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಬುಡಕಟ್ಟು ಸಮುದಾಯಗಳಲ್ಲಿರುವ ಕಲೆ,ಸಂಸ್ಕೃತಿ, ಆಹಾರ ಪದ್ಧತಿ, ವ್ಯವಹಾರ ಪರಿಚಯಮಾಡಿಕೊಡುವ ಉದ್ದೇಶದಿಂದ ಕಾರ್ಯಕ್ರಮಮಾಡಲಾಗುತ್ತಿದೆ. ಅಲ್ಲಿರುವ ಗುಡಿ ಕೈಗಾರಿಕಾವ್ಯವಸ್ಥೆಗೆ ಪ್ರೋತ್ಸಾಹ ನೀಡಿ ಮುಖ್ಯವಾಹಿನಿಗೆತರಬೇಕು. ಚಾಮರಾಜನಗರ ನೋಡಿದರೆನೋವು, ಸಂತೋಷ ಎರಡೂ ಉಕ್ಕಿ ಬರುತ್ತವೆ.ಅಷ್ಟು ಮುಗ್ಧತೆಯಲ್ಲಿ ಅಲ್ಲಿನ ಜನ ಬದುಕುತ್ತಿದ್ದಾರೆ ಎಂದರು.
Related Articles
Advertisement
ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿಮಾತನಾಡಿ, ಬುಡಕಟ್ಟು ಸಮುದಾಯ ಒತ್ತಡಕ್ಕೆಒಳಗಾಗುತ್ತಿದೆ. ಅಭಿವೃದ್ಧಿ ನೆಪದಲ್ಲಿ ಅನೇಕರತಲೆ ಕೆಡಿಸುವ ಪ್ರಯತ್ನ ನಡೆಯುತ್ತದೆ ಎಂದುಆತಂಕ ವ್ಯಕ್ತಪಡಿಸಿದರು. ಸಂಸ್ಕಾರ, ನಡೆ ನುಡಿಆಚಾರ ವಿಚಾರಗಳಿಂದ ನಮ್ಮ ಅಸ್ತಿತ್ವ ಇದೆ. ನಮ್ಮಸಮುದಾಯಕ್ಕೆ ಹಲವೆಡೆ ಸಮಸ್ಯೆ ಇದೆ. ಅನೇಕರುಬೇರೆಡೆ ವಲಸೆ ಹೋಗುತ್ತಿದ್ದಾರೆ. ಅರಣ್ಯ ಹಕ್ಕುಪತ್ರಸಿಗಬೇಕಿದೆ. ಆದರೆ ಅರಣ್ಯ ಇಲಾಖೆಯ ನಿರ್ಬಂಧಇರುವ ಕಾರಣಕ್ಕೆ ತೊಂದರೆ ಆಗುತ್ತಿದೆ ಎಂದರು.
ನಮ್ಮ ಕಾಲು ನಾವೇ ಎಳೆದುಕೊಂಡು ಕುಳಿತರೆ ಶ್ರೀರಾಮುಲು ಎನ್ನುವ ವ್ಯಕ್ತಿ ಮುಂದೆಬರಲು ಇನ್ನೂ ಹತ್ತು ವರ್ಷ ಬೇಕಾಗುತ್ತದೆ.ಇತರೆ ಸಮುದಾಯಗಳನ್ನು ನೋಡಿ ನಾವುಕಲಿಯಬೇಕು. ಸಮುದಾಯದ ಒಳಗೆಒಗ್ಗಟ್ಟಿರಬೇಕು ಎಂದು ತಿಳಿಸಿದರು. ರಾಜನಹಳ್ಳಿವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಟಿ.ರಘುಮೂರ್ತಿ, ಪೂರ್ಣಿಮಾ, ನಗರಾಭಿವೃದ್ಧಿಪ್ರಾಧಿ ಕಾರದ ಅಧ್ಯಕ್ಷ ಟಿ. ಬದರೀನಾಥ್,ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಜಿಲ್ಲಾಧಿ ಕಾರಿ ಕವಿತಾಎಸ್. ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿ ಕಾ, ಬುಡಕಟ್ಟು ಸಂಶೋಧನಾಸಂಸ್ಥೆ ನಿರ್ದೇಶಕ ಟಿ.ಟಿ. ಬಸವನಗೌಡ, ಪರಿಶಿಷ್ಟಪಂಗಡ ಕಲ್ಯಾಣ ಇಲಾಖೆ ನಿರ್ದೇಶಕ ಪಿ.ಎಸ್.ಕಾಂತರಾಜ್ ಮತ್ತಿತರರು ಇದ್ದರು.