Advertisement

ಸಿದ್ದು ವಿರುದ್ದ ಎಸ್ಸಿ ಮೋರ್ಚಾ ಪ್ರತಿಭಟನೆ

05:32 PM Nov 04, 2021 | Team Udayavani |

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯದಲಿತರ ಕುರಿತು ಅವಹೇಳನ ಮಾಡಿ ಮಾತನಾಡಿದ್ದಾರೆಎಂದು ಆರೋಪಿಸಿ ಬುಧವಾರ ಬಿಜೆಪಿ ಎಸ್ಸಿಮೋರ್ಚಾದಿಂದ ಪ್ರತಿಭಟನೆ ನಡೆಯಿತು.

Advertisement

ನಗರದ ಅಂಬೇಡ್ಕರ್‌ ಪ್ರತಿಮೆ ಬಳಿ ಜಮಾಯಿಸಿದಬಿಜೆಪಿ ಕಾರ್ಯಕರ್ತರು, ಸಿದ್ದರಾಮಯ್ಯ ಹಾಗೂಕಾಂಗ್ರೆಸ್‌ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ,ಸ್ವಾಭಿಮಾನದಿಂದ ಬದುಕುತ್ತಿರುವ ದಲಿತರ ಕುರಿತುಸಿದ್ದರಾಮಯ್ಯ ಆಡಿರುವ ಮಾತುಗಳು ಅವರ ಘನತೆಗೆಶೋಭೆ ತರುವುದಿಲ್ಲ. ದೇಶಕ್ಕೆ ಸಂವಿಧಾನ ಕೊಟ್ಟಡಾ| ಬಿ.ಆರ್‌.ಅಂಬೇಡ್ಕರರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್‌. ಇಂದಿಗೂ ದಲಿತರ ಶೋಷಣೆಕಾಂಗ್ರೆಸ್‌ನಿಂದ ಆಗುತ್ತಿದೆಯೇ ವಿನಾ ಬಿಜೆಪಿಯಿಂದಲ್ಲಎಂದು ದೂರಿದರು.

ದಲಿತ ಸಮುದಾಯದ ಹೆಚ್ಚು ಶಾಸಕರು, ಸಂಸದರುಇರುವುದು ಬಿಜೆಪಿಯಲ್ಲಿ ಎನ್ನುವುದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಅವರುಸಾರ್ವಜನಿಕವಾಗಿ ದಲಿತರಲ್ಲಿ ಕ್ಷಮೆಯಾಚಿಸಬೇಕು.ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿಸದಸ್ಯೆ ಭಾರ್ಗವಿ ದ್ರಾವಿಡ್‌ ಮಾತನಾಡಿ, ಸಿಂದಗಿಯಲ್ಲಿನಡೆದ ದಲಿತ ಸಮಾವೇಶದಲ್ಲಿ ಸಿದ್ದರಾಮಯ್ಯನವರುದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿಕೊಂಡಿದ್ದಾರೆಎಂದು ಕೀಳಾಗಿ ಮಾತನಾಡಿದ್ದಾರೆ.

Advertisement

ಹಾಗಾದರೆಸಿದ್ದರಾಮಯ್ಯ ಜೆಡಿಎಸ್‌ ತೊರೆದು ಕಾಂಗ್ರೆಸ್‌ಸೇರಿದ್ದು ಯಾಕೆ ಎನ್ನುವುದನ್ನು ತಿಳಿಸಲಿ. ದಲಿತರಿಗೆಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದು ಇದೇ ಸಿದ್ದರಾಮಯ್ಯಎಂದರು.

ದಲಿತರನ್ನು ರಾಷ್ಟ್ರಪತಿ ಮಾಡಿದ ಪಕ್ಷ ಬಿಜೆಪಿ.ಕಾಂಗ್ರೆಸ್‌ ದಲಿತರ ಪರವಿಲ್ಲ. ದಲಿತರಿಗಾಗಿ ಏನೂಮಾಡಿಲ್ಲ. ಸಿದ್ದರಾಮಯ್ಯ ದಲಿತರಲ್ಲಿ ಕ್ಷಮೆ ಕೇಳಬೇಕು.ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆಎಂದು ಹೇಳಿದರು.ಬಿಜೆಪಿ ಎಸ್ಸಿ ಮೋರ್ಚಾ ಪದಾ ಕಾರಿಗಳಾದನಾಗರಾಜ್‌, ಪರಶುರಾಂ, ತಿಮ್ಮಣ್ಣ, ಸಿದ್ದಾರ್ಥ,ಶಿವದತ್‌, ಜೈಪಾಲ್‌, ವೆಂಕಟೇಶ್‌ ಯಾದವ್‌,ಸಂಪತ್‌, ನಾಗರಾಜ್‌ಬೇದ್ರೆ, ದಗ್ಗೆ ಶಿವಪ್ರಕಾಶ್‌, ಹೆಚ್‌.ಬಿ.ನರೇಂದ್ರ, ಶೈಲಜಾರೆಡ್ಡಿ, ರೇಖಾ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next