Advertisement

ಒಂದೂವರೆ ಕೋಟಿ ಜನರಿಗೆ ಕೌಶಲ್ಯ ತರಬೇತಿ

01:18 PM Oct 29, 2021 | Team Udayavani |

ಚಿತ್ರದುರ್ಗ: ಹಸಿವು, ಅಸ್ಪಶ್ಯತೆಯನೋವನ್ನು ಸ್ವತಃ ಅನುಭವಿಸಿದ್ದೇನೆ. ಶಾಲಾಶುಲ್ಕ ಪಾವತಿಸಲು ಸಾಧ್ಯವಾಗದೆ ಬೆಂಚ್‌ಮೇಲೆ ನಿಂತಿದ್ದ ನೆನಪು ಹಾಗೆಯೇ ಇದೆ.ಶಾಲಾ ಸಮವಸ್ತ್ರ ತರಲು ಹಣವಿಲ್ಲದೆ ಶಿಕ್ಷೆಅನುಭವಿಸಿದ್ದೂ ಹಸಿರಾಗಿದೆ.

Advertisement

ಈ ಅನುಭವಶೋಷಿತರ ಏಳಿಗೆಗಾಗಿ ದುಡಿಯುವಂತೆಪ್ರೇರೇಪಿಸಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.ಜಿ.ಆರ್‌. ಹಳ್ಳಿಯಲ್ಲಿರುವ ದಾವಣಗೆರೆವಿವಿ ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರಹಮ್ಮಿಕೊಂಡಿದ್ದ ಬಾಬು ಜಗಜೀವನರಾಂಉಪನ್ಯಾಸ ಹಾಗೂ ಮಹಿಳಾವಿದ್ಯಾರ್ಥಿನಿಲಯದ ಉದ್ಘಾಟನೆ ನೆರವೇರಿಸಿಅವರು ಮಾತನಾಡಿದರು.ದೇಶಕ್ಕೆ ಸ್ವಾತಂತ್ರÂ ತಂದುಕೊಟ್ಟಮಹನೀಯರ ಕನಸನ್ನು ನನಸಾಗಿಸುವಹೊಣೆಗಾರಿಕೆ ನಮ್ಮಂಥ ರಾಜಕಾರಣಿಗಳ ಮೇಲಿದೆ.

ಶೋಷಿತ ಸಮುದಾಯ ಆರ್ಥಿಕ,ಸಾಮಾಜಿಕವಾಗಿ ಹಿಂದುಳಿದಿರುವುದಕ್ಕೆಕಾರಣಗಳನ್ನು ಇನ್ನೂ ಪತ್ತೆ ಮಾಡಿಲ್ಲ.ಅಂತರ್ಜಾತಿ ವಿವಾಹಿತರಿಗೆ ನೀಡುವಪ್ರೋತ್ಸಾಹಧನದ ವಿತರಣೆ, ಅಪಘಾತನಡೆದಾಗ ಒದಗಿಸುವ ಸಹಾಯಧನಬಹುತೇಕರಿಗೆ ಸಿಗುತ್ತಿಲ್ಲ. ಎಸ್‌ಇಪಿ,ಟಿಎಸ್‌ಪಿ ಅನುದಾನದ ಸದ್ಬಳಕೆ ಬಗ್ಗೆ ಬೆಳಕುಚೆಲ್ಲುವಂತಹ ಯಾವ ಸಂಶೋಧನೆಗಳೂ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ವಿಶ್ವವಿದ್ಯಾಲಯಗಳು ಪ್ರದಾನ ಮಾಡುವ ಪದವಿ ಪ್ರಮಾಣಪತ್ರಗಳು ಉದ್ಯೋಗನೀಡುವ ಗ್ಯಾರಂಟಿ ಕಾರ್ಡ್‌ ಅಲ್ಲ. ಶಿಕ್ಷಣಪಡೆದಿರುವುದಕ್ಕೆ ಸಿಗುವ ಅರ್ಹತಾಪತ್ರ. ಕೌಶಲ್ಯ ಬೆಳೆಸಿಕೊಳ್ಳದೆ ಉದ್ಯೋಗನಿರೀಕ್ಷಿಸಲು ಸಾಧ್ಯವಿಲ್ಲ.

ದೇಶದಲ್ಲಿ ಪ್ರತಿ ವರ್ಷಒಂದೂವರೆ ಕೋಟಿ ಜನರಿಗೆ ಕೌಶಲ್ಯ ತರಬೇತಿನೀಡಲಾಗುತ್ತಿದೆ. ಆದರೆ ಇದರಲ್ಲಿ ಉದ್ಯೋಗಪಡೆಯುವವರ ಪ್ರಮಾಣ ತೀರಾ ಕಡಿಮೆಇದೆ. ಕರ್ನಾಟಕದಲ್ಲಿ ಕೌಶಲ ತರಬೇತಿಗೆ52 ಕೋಟಿ ರೂ. ನೀಡಲಾಗುತ್ತಿದೆ. ಕೌಶಲತರಬೇತಿ ನೀಡುವ ಹೆಸರಿನಲ್ಲಿಯೂ ಮೋಸ,ವಂಚನೆ ನಡೆಯುತ್ತಿದೆ.

ಇನ್ನು ಮುಂದೆ ಹೀಗೆಆಗಲು ಬಿಡುವುದಿಲ್ಲ. ವಿಶ್ವವಿದ್ಯಾಲಯಗಳುಕೌಶಲ್ಯ ತರಬೇತಿಗೆ ಒಲವು ತೋರಬೇಕುಎಂದು ಸಲಹೆ ನೀಡಿದರು. ವಿಧಾನ ಪರಿಷತ್‌ ಸದಸ್ಯ ಎಂ. ಚಿದಾನಂದಗೌಡ ಮಾತನಾಡಿ, ಹಲವು ದೇಶಗಳಲ್ಲಿ ಶಿಕ್ಷಣಕ್ಕೆ ಉನ್ನತ ಸ್ಥಾನವಿದೆ. ವಿಶ್ವವಿದ್ಯಾಲಯದವಿದ್ವಾಂಸರ ಆಧಾರದ ಮೇಲೆ ದೇಶವನ್ನುಗುರುತಿಸಲಾಗುತ್ತಿದೆ. ಹೀಗೆ ಭಾರತವನ್ನುಗುರುತಿಸುವ ಕಾಲ ಸೃಷ್ಟಿಯಾಗಬೇಕು ಎಂದು ಆಶಿಸಿದರು.

Advertisement

ವಿಶ್ವವಿದ್ಯಾಲಯ ಪದವಿ ನೀಡಿದರೂಇಂಗ್ಲಿಷ್‌ ಹಾಗೂ ವಿಜ್ಞಾನ ಬೋಧಕರಕೊರತೆ ಇದೆ. ಈ ಬಗ್ಗೆ ವಿಧಾನಮಂಡಲದಅ ಧಿವೇಶನದಲ್ಲಿ ಚರ್ಚೆಯಾಗಿದೆ.ಜಿಲ್ಲೆಗೊಂದು ವೈದ್ಯಕೀಯ ಕಾಲೇಜುಸ್ಥಾಪಿಸುವ ಸರ್ಕಾರದ ಆಶಯದಂತೆವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸಬೇಕು ಎಂದರು.

ಬೆಂಗಳೂರು ವಿವಿ ಪ್ರಾಧ್ಯಾಪಕಡಾ| ಗಂಗಾಧರ, ದಾವಿವಿ ಕುಲಪತಿ ಡಾ|ಶರಣಪ್ಪ ಹಲಸೆ, ಕುಲಸಚಿವೆ ಪ್ರೊ| ಗಾಯತ್ರಿ,ಜಿ.ಆರ್‌. ಹಳ್ಳಿ ಗ್ರಾಪಂ ಅಧ್ಯಕ್ಷ ಹೊನ್ನೂರಪ್ಪ,ವಿವಿ ಸಿಂಡಿಕೇಟ್‌ ಸದಸ್ಯರಾದ ಭಾರ್ಗವಿದ್ರಾವಿಡ್‌, ಡಾ| ಜೆ.ಪಿ. ರಾಮನಾಥ, ಆಶಿಷರೆಡ್ಡಿ, ಚೈತನ್ಯ, ಗಣಿತ ಶಾಸ್ತ್ರ ವಿಭಾಗದ ಅಧ್ಯಕ್ಷಡಾ| ಡಿ.ಜಿ.ಪ್ರಕಾಶ್‌, ಸ್ನಾತಕೋತ್ತರ ಕೇಂದ್ರದನಿರ್ದೇಶಕ ಡಾ| ಎಚ್‌. ವಿಶ್ವನಾಥ್‌, ಪರೀûಾಂಗಕುಲಸಚಿವೆ ಎಚ್‌.ಎಸ್‌. ಅನಿತಾ, ಹಣಕಾಸುಅ ಧಿಕಾರಿ ಪ್ರಿಯಾಂಕ, ಡಾ| ಭೀಮಾಂಶಂಕರಜೋಷಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next