ಚಿತ್ರದುರ್ಗ: ನಾವು ಕನ್ನಡಿಗರಾಗುವ ಜೊತೆಗೆನಮ್ಮ ಮನೆ ಮಾತು ಕೂಡಾ ಕನ್ನಡವಾಗಬೇಕು.ಕನ್ನಡದಲ್ಲಿಯೇ ವ್ಯವಹರಿಸಬೇಕು ಎಂದುಮೆದೇಹಳ್ಳಿ ಅಲ್ಪಸಂಖ್ಯಾತರ ಮೊರಾರ್ಜಿದೇಸಾಯಿ ವಸತಿ ಶಾಲೆ ಪ್ರಾಚಾರ್ಯಬಸವರಾಜ್ ಹೇಳಿದರು.
ನಗರದ ಹೊರವಲಯದ ಮೆದೇಹಳ್ಳಿಯಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿಬುಧವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿಇಲಾಖೆ ಹಾಗೂ ಮೊಳಕಾಲ್ಮೂರಿನ ಅಕ್ಷರಸಾಂಸ್ಕೃತಿಕ ವಿಕಾಸ ಸಂಸ್ಥೆ ಸಹಯೋಗದಲ್ಲಿಆಯೋಜಿಸಿದ್ದ “ಕನ್ನಡಕ್ಕಾಗಿ ನಾವು ಅಭಿಯಾನ’ಹಾಗೂ ಗೀತಗಾಯನ ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದರು.
ಕನ್ನಡಕ್ಕಾಗಿ ನಾವುಅಭಿಯಾನ-ಕನ್ನಡ ರಾಜ್ಯೋತ್ಸವದ ಅಂಗವಾಗಿಕನ್ನಡ ಗೀತೆಗಳ ಗಾಯನದ ಮೂಲಕ ಕನ್ನಡಡಿಂಡಿಮವನ್ನು ರಾಜ್ಯಾದ್ಯಂತ ಪಸರಿಸುವಕಾರ್ಯ ನಡೆಯುತ್ತಿರುವುದು ಶ್ಲಾಘನೀಯಎಂದರು.ಮೊಳಕಾಲ್ಮೂರಿನ ಅಕ್ಷರ ಸಾಂಸ್ಕೃತಿಕ ವಿಕಾಸಸಂಸ್ಥೆ ಕಾರ್ಯದರ್ಶಿ ಡಿ.ಒ. ಮುರಾರ್ಜಿಮಾತನಾಡಿ, ಕನ್ನಡ ಭಾಷೆಯನ್ನು ನಾವು ನಿರ್ಲಕ್ಷéಮಾಡುತ್ತಿದ್ದೇವೆ. ಇದರ ಪರಿಣಾಮವನ್ನು ಮುಂದೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರ ಕನ್ನಡ ಭಾಷೆ, ನಾಡು-ನುಡಿಜಾಗೃತಿಗಾಗಿ ಅಭಿಯಾನ ಆಯೋಜಿಸಿರುವುದುಉತ್ತಮ ಬೆಳವಣಿಗೆ. ಕನ್ನಡ ಮತ್ತು ಸಂಸ್ಕೃತಿಜನರ ಜೀವನಾಡಿಯಾಗಿದೆ. ಈ ಜನರ ಬದುಕಿನಕೊಂಡಿಯಾಗಿದೆ. ಕಲೆ, ಸಾಹಿತ್ಯ, ಸಂಸ್ಕೃತಿಉಳಿಸಬೇಕು ಎಂದು ಪೋಷಣೆ ಮಾಡುವನಿಟ್ಟಿನಲ್ಲಿ ನಾಡಿನಾದ್ಯಂತ ಇರುವ ಎಲ್ಲ ಸಂಘಸಂಸ್ಥೆಗಳು ಕೆಲಸ ಮಾಡಬೇಕು ಎಂದರು.
ನಿತ್ಯ ಬದುಕಿನಲ್ಲಿ ನಾವು ಹೆಚ್ಚು ಹೆಚ್ಚುಕನ್ನಡದಲ್ಲೇ ಮಾತನಾಡಬೇಕು. ಎಲ್ಲ ಭಾಷೆಗಳನ್ನುಕಲಿಯೋಣ, ಪ್ರೀತಿಸುವುದರ ಜೊತೆಗೆ ಕನ್ನಡಭಾಷೆಗೆ ಹೆಚ್ಚಿನ ಆದ್ಯತೆ ನೀಡೋಣ ಎಂದು ಸಲಹೆನೀಡಿದರು.ಮೊಳಕಾಲ್ಮೂರಿನ ಅಕ್ಷರ ಸಾಂಸ್ಕೃತಿಕ ವಿಕಾಸಸಂಸ್ಥೆಯ ಕಲಾವಿದರು ಕನ್ನಡ ಗೀತಗಾಯನಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆದೇಹಳ್ಳಿಮೊರಾರ್ಜಿ ದೇಸಾಯಿ ವಸತಿ ಶಾಲೆಯಶಿಕ್ಷಕರಾದ ಸುಜಾತಾ, ನಯನಾ, ತಾಸಿನಾಭಾನು,ನೇತ್ರಾವತಿ, ಮಮತಾ, ನಾಗೇಶ ಹಾಗೂ ಎಸ್.ಎಚ್. ಸುಜಾತಾ ಸೇರಿದಂತೆ ವಸತಿ ಶಾಲೆಯವಿದ್ಯಾರ್ಥಿಗಳು ಭಾಗವಹಿಸಿದ್ದರು.