ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದ ಮೂರುದಿನಗಳಿಂದ ಮಳೆಯ ಆರ್ಭಟಮುಂದುವರೆದಿದ್ದು, ಮನೆ, ಬೆಳೆ,ಜಾನುವಾರುಗಳು ಸೇರಿದಂತೆ ಸುಮಾರು25 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದುಜಿಲ್ಲಾಡಳಿತ ಅಂದಾಜಿಸಿದೆ.
ಜಿಲ್ಲೆಯ ಹೊಸದುರ್ಗ, ಹೊಳಲ್ಕೆರೆ,ಹೊಳಲ್ಕೆರೆ, ಹಿರಿಯೂರು ಭಾಗದಲ್ಲಿಮಳೆಯಿಂದ ಹಲವು ಕೆರೆ, ಕಟ್ಟೆಗಳುತುಂಬಿವೆ. ವಿಶೇಷವಾಗಿ ವಾಣಿವಿಲಾಸಸಾಗರಕ್ಕೆ ನೀರಿನ ಹರಿವಿನ ಪ್ರಮಾಣಹೆಚ್ಚಾಗಿದೆ. ಸೋಮವಾರ ಬೆಳಗ್ಗೆ 8ಗಂಟೆಗೆ ನಡೆದ ಮಾಪನದ ವೇಳೆವಿವಿ ಸಾಗರದಲ್ಲಿ 114 ಅಡಿ ನೀರು ಸಂಗ್ರಹವಾಗಿದೆ.
ಮೂರು ದಿನಗಳ ಹಿಂದೆ ಬಿರುಮಳೆಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದು,ನಾಲ್ವರು ಗಾಯಗೊಂಡಿದ್ದರು. 12ಕುರಿಗಳು ಮೃತಪಟ್ಟಿವೆ. ಜಿಲ್ಲೆಯಲ್ಲಿ 49ಮನೆಗಳಿಗೆ ಭಾಗಶಃ ಹಾನಿಯಾಗಿದೆ.ಹೊಸದುರ್ಗ ತಾಲೂಕು ಒಂದರಲ್ಲೇ 34ಮನೆಗಳು ನೀರು ನುಗ್ಗಿ ಹಾನಿಗೀಡಾಗಿವೆ.ಆನಿವಾಳ ಬಳಿ 8 ಮನೆಗಳಿಗೆ ನೀರು ನುಗ್ಗಿಅವಾಂತರ ಸೃಷ್ಟಿಯಾಗಿತ್ತು.
ಸಾವಿರಾರುಎಕರೆ ಬೆಳೆ ನಾಶವಾಗಿದೆ. ಅಡಕೆ, ಬಾಳೆ,ತೆಂಗು, ಮೆಕ್ಕೆಜೋಳ ಸೇರಿದಂತೆ ಖುಷ್ಕಿಹಾಗೂ ತೋಟಗಾರಿಕಾ ಬೆಳೆಗಳುಹೊಸದುರ್ಗ, ಹೊಳಲ್ಕೆರೆ ಭಾಗದಲ್ಲಿಜಲಾವೃತವಾಗಿವೆ. ಜಿಲ್ಲೆಯ ದೊಡ್ಡಕೆರೆಗಳಲ್ಲಿ ಒಂದಾಗಿರುವ ತಾಳ್ಯ ಕೆರೆಕೋಡಿ ಬೀಳುವ ಹಂತದಲ್ಲಿದೆ. ಸಣ್ಣಪುಟ್ಟಕೆರೆಗಳು ಈಗಾಗಲೇ ತುಂಬಿ ಕೋಡಿಬಿದ್ದಿವೆ.ಹೆಚ್ಚಾದ ಮಳೆಯಿಂದಾಗಿ ಹತ್ತಿಬಿಡಿಸಲು ಸಾಧ್ಯವಾಗದೆ ನಷ್ಟ ಸಂಭವಿಸಿದೆ.
ಹತ್ತಿಗೆ ದರ ಹೆಚ್ಚಾಗಿರುವಹಿನ್ನೆಲೆಯಲ್ಲಿ ರೈತರು ಇಕ್ಕಟ್ಟಿಗೆಸಿಲುಕಿದ್ದಾರೆ. ಮೆಕ್ಕೆಜೋಳಕ್ಕೆ ಸಕಾಲಕ್ಕೆಮಳೆಯಾಗದೆ ಬೆಳೆ ಅಷ್ಟಕ್ಕಷ್ಟೇಎನ್ನುವಂತಾಗಿದ್ದರೆ, ಕಟಾವಿನ ಸಮಯಕ್ಕೆಮಳೆ ಜೋರಾಗಿರುವುದರಿಂದ ತೆನೆಮುರಿಯಲು ಸಾಧ್ಯವಾಗುತ್ತಿಲ್ಲ.