ಚಿತ್ರದುರ್ಗ: ಕೋವಿಡ್-19ನಿಯಮಾವಳಿ ಅನುಸರಿಸಿಅರ್ಥಪೂರ್ಣವಾಗಿ ಕಿತ್ತೂರುರಾಣಿ ಚೆನ್ನಮ್ಮ ಜಯಂತಿಯನ್ನುಆಚರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ತಿಳಿಸಿದರು.
ನಗರದ ಜಿಲ್ಲಾ ಧಿಕಾರಿ ಕಚೇರಿಸಭಾಂಗಣದಲ್ಲಿ ಗುರುವಾರ ಕಿತ್ತೂರುರಾಣಿ ಚೆನ್ನಮ್ಮ ಜಯಂತಿ ಅಂಗವಾಗಿಹಮ್ಮಿಕೊಂಡಿದ್ದ ಪೂರ್ವಭಾವಿಸಭೆಯಲ್ಲಿ ಅವರು ಮಾತನಾಡಿದರು.ಜಯಂತಿ ಆಚರಣೆಯನ್ನು ನಗರದತರಾಸು ರಂಗಮಂದಿರದಲ್ಲಿ ಅ.23 ರಂದು ಬೆಳಿಗ್ಗೆ 11 ಗಂಟೆಗೆ ಆಚರಿಸಲಾಗುವುದು.
ಸರ್ಕಾರದಮಾರ್ಗಸೂಚಿಗಳ ಅನ್ವಯ ಕಿತ್ತೂರುರಾಣಿ ಚನ್ನಮ್ಮ ಜಯಂತಿಯನ್ನುನಿಯಮ ಪಾಲನೆ ಅನ್ವಯಆಚರಿಸಲು ಅವಕಾಶವಿದೆ. ಹಾಗಾಗಿಕೋವಿಡ್-19 ನಿಯಮಾವಳಿಪಾಲನೆ ಮಾಡಿ ಜಯಂತಿಯನ್ನುಆಚರಿಸಬೇಕು.
ಈ ನಿಟ್ಟಿನಲ್ಲಿ ವಿವಿಧಇಲಾಖೆಗಳ ಅ ಧಿಕಾರಿಗಳು ಅಗತ್ಯಸಿದ್ಧತೆ ಕೈಗೊಳ್ಳಬೇಕು ಎಂದು ಸೂಚನೆನೀಡಿದರು.ಕೋವಿಡ್-19ರ ಸಂಭಾವ್ಯಮೂರನೇ ಅಲೆಯ ಹಿನ್ನೆಲೆಯಲ್ಲಿಜಯಂತಿಯಲ್ಲಿ ಮೆರವಣಿಗೆಯನ್ನುನಿಷೇ ಧಿಸಲಾಗಿದೆ. ರಂಗಮಂದಿರದಲ್ಲಿವೇದಿಕೆ ಕಾರ್ಯಕ್ರಮ ನಡೆಯಲಿದ್ದು,ಸಂಗೀತ ತಂಡಗಳು ಹಾಗೂ ಕಿತ್ತೂರುರಾಣಿ ಚನ್ನಮ್ಮ ಅವರ ಹೋರಾಟಹಾಗೂ ದೇಶಭಕ್ತಿ ಕುರಿತು ಉಪನ್ಯಾಸಕಾರ್ಯಕ್ರಮ ನಡೆಯಲಿದೆ.
ಭಾಗವಹಿಸುವವರು ಮಾಸ್ಕ್ಧರಿಸುವುದು, ಸಾಮಾಜಿಕ ಅಂತರಕಾಯ್ದುಕೊಳ್ಳುವುದು, ಸ್ಯಾನಿಟೈಸರ್‌ಬಳಕೆ ಮಾಡಬೇಕು ಎಂದರು. ಕನ್ನಡಮತ್ತು ಸಂಸ್ಕೃತಿ ಇಲಾಖೆ ಸಹಾಯಕನಿರ್ದೇಶಕ ಧನಂಜಯ, ಜಯಂತಿಆಚರಣೆ ಸಂಬಂಧ ಕೈಗೊಳ್ಳಬೇಕಾದಸಿದ್ದತೆಗಳ ಕುರಿತು ಸಭೆಯಲ್ಲಿಪ್ರಸ್ತಾಪಿಸಿದರು. ಹೆಚ್ಚುವರಿ ಜಿಲ್ಲಾಪೊಲೀಸ್ ವರಿಷ್ಠಾ ಧಿಕಾರಿ ಎಂ.ಬಿ.ನಂದಗಾವಿ, ಬಿಸಿಎಂ ಅ ಧಿಕಾರಿಅವೀನ್, ಸಮಾಜದ ಮುಖಂಡವಿಜಯ್ ಕುಮಾರ್ ಸೇರಿದಂತೆ ಇತರೆಅಧಿ ಕಾರಿಗಳು ಉಪಸ್ಥಿತರಿದ್ದರು.