Advertisement

ಭೋವಿ ಸಮುದಾಯದ ಅಭಿವೃದಿಗೆ ಬದ್ಧ

03:30 PM Oct 20, 2021 | Team Udayavani |

ಚಿತ್ರದುರ್ಗ: ಭೋವಿ ಸಮುದಾಯದ ಸರ್ವಾಂಗೀಣಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು,ಸಹಕರಿಸುವುದಾಗಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ತಿಳಿಸಿದರು.

Advertisement

ನಗರದ ಹೊರವಲಯದಲ್ಲಿರುವ ಭೋವಿಗುರು ಪೀಠಕ್ಕೆ ಸೋಮವಾರ ರಾತ್ರಿ ಭೇಟಿ ನೀಡಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದುಮಾತನಾಡಿದರು.ಸಮುದಾಯದ ಅಭಿವೃದ್ಧಿ ಅಗತ್ಯಕ್ರಮವಹಿಸುವುದು, ನಮ್ಮ ಕ್ಷೇತ್ರದ ಸಮಸ್ಯೆಯನ್ನುನೋಡಿದ್ದೇನೆ. ಅರೆ ಅಲೆಮಾರಿಗಳು ನಿರಂತರವಾಗಿ ವಲಸೆ ಹೋಗುವ ಈ ಸಮುದಾಯಗಳಿಗೆ ಸ್ಥಿರಜೀವನಕ್ಕೆ ವಿಶೇಷ ಪ್ಯಾಕೇಜ್‌ ನೀಡಲಾಗುವುದು.

ಕುಲ ವೃತ್ತಿಗಳಾದ ಕಟ್ಟಡ ನಿರ್ಮಾಣ, ಕಲ್ಲು ಕೆತ್ತುವಶಿಲ್ಪಕಲೆ, ಸಿಮೆಂಟ್‌ ಶಿಲ್ಪಕಲೆ ಸೇರಿದಂತೆ ವೃತ್ತಿ ಆಧಾರಿತವಿಶೇಷ ಕಸುಬುಗಳಿಗೆ ತರಬೇತಿ ಒದಗಿಸುವಂತಹಕೇಂದ್ರಗಳನ್ನು ಆರಂಭಿಸಲಾಗುವುದು. ಹಿಂದೆ ಭೋವಿಸಮುದಾಯದ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದವಿಚಾರಗಳ ಕುರಿತು ಕ್ರಮವಹಿಸಲು ಅ ಧಿಕಾರಿಗಳಿಗೆಸೂಚಿಸಲಾಗಿದೆ ಎಂದರು.

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರಸ್ವಾಮೀಜಿ ಮಾತನಾಡಿ, ಭೋವಿ ಅಭಿವೃದ್ಧಿ ನಿಗಮಕ್ಕೆಅಧ್ಯಕ್ಷರ ಮತ್ತು ನಿರ್ದೇಶಕರನ್ನು ನೇಮಕ ಹಾಗೂ ಶ್ರೀಸಿದ್ಧರಾಮೇಶ್ವರರ ಅಧ್ಯಯನ ಪೀಠ ಸ್ಥಾಪನೆ, ಭೋವಿಸಂಸ್ಕೃತಿಯ ಸಂಶೋಧನಾ ಕೇಂದ್ರ, ಕಟ್ಟಡ ಕಾರ್ಮಿಕರು,ರಸ್ತೆ, ಚರಂಡಿ ಕಾರ್ಮಿಕರು, ಅರೆಅಲೆಮಾರಿ ವಡ್ಡರಸಮೀಕ್ಷೆ ಮಾಡಿ ವಿಶೇಷ ಗುರುತಿನ ಚೀಟಿ ನೀಡುವುದು.

ಸಂಕಷ್ಟದಲ್ಲಿರುವವರಿಗೆ ಸರ್ಕಾರವು ಸಹಾಯಧನಒದಗಿಸುವುದು ಮತ್ತು ಕಲ್ಲು, ಗಣಿಗಾರಿಕೆ ಮಾಡುವಭೋವಿ ಸಮುದಾಯದವರಿಗೆ ಶೇ.75ರಷ್ಟು ಯಂತ್ರಖರೀದಿಯಲ್ಲಿ ಸಹಾಯಧನ ಒದಗಿಸುವಂತೆ ಮನವಿಮಾಡಿದರು.ನಗರಸಭೆ ನಾಮನಿರ್ದೇಶಿತ ಸದಸ್ಯ ತಿಮ್ಮಣ್ಣ,ಜೆ.ಎಸ್‌.ಜೆ.ಜ್ಞಾನಪೀಠದ ಕಾರ್ಯದರ್ಶಿಡಿ.ಸಿ.ಮೋಹನ್‌, ಸಿಇಒ ಗೌನಹಳ್ಳಿ ಗೋವಿಂದಪ್ಪಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next