Advertisement

ಮುರುಘಾ ಶ್ರೀಗಳಿಂದ ಶೂನ್ಯ ಪೀಠಾರೋಹಣ

01:45 PM Oct 17, 2021 | Team Udayavani |

ಚಿತ್ರದುರ್ಗ: ವೈಚಾರಿಕತೆಯಿಂದ ಗುರುತಿಸಿಕೊಂಡಿರುವಮುರುಘಾಮಠದ ಡಾ| ಶಿವಮೂರ್ತಿ ಮುರುಘಾಶರಣರ ಶೂನ್ಯ ಪೀಠಾರೋಹಣ ಅತ್ಯಂತ ಮಹತ್ವಪಡೆದುಕೊಂಡಿದೆ.

Advertisement

ಶನಿವಾರ ಚಿನ್ನದ ಕಿರೀಟ, ಚಿನ್ನದಪಾದುಕೆಗಳನ್ನು ಪಕ್ಕಕ್ಕಿಟ್ಟು, ರುದ್ರಾಕ್ಷಿಯಿಂದ ಮಾಡಿದ್ದಕಿರೀಟ ಧಾರಣೆ ಮಾಡಿದ ಡಾ| ಶಿವಮೂರ್ತಿ ಮುರುಘಾಶರಣರು ಅತ್ಯಂತ ಸರಳವಾಗಿ ಮುರುಘಾ ಮಠದಐತಿಹಾಸಿಕ ಶೂನ್ಯ ಪೀಠಾರೋಹಣ ಮಾಡಿದರು.

ಶ್ರೀಗಳು ಪೀಠಾರೋಹಣ ಮಾಡಿ ಮೂರು ದಶಕಸಂದಿರುವ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಶನಿವಾರ ಹಬ್ಬದವಾತಾವರಣ ಮನೆ ಮಾಡಿತ್ತು. ಕಳೆದ ವರ್ಷ ಕೋವಿಡ್‌ಕಾರಣಕ್ಕೆ ಸರಳವಾಗಿ ಜರುಗಿದ್ದ ಶೂನ್ಯಪೀಠಾರೋಹಣಕಾರ್ಯಕ್ರಮಕ್ಕೆ ಈ ವರ್ಷ ಭಕ್ತರ ದಂಡೇ ಹರಿದುಬಂದಿತ್ತು.

ಶ್ರೀಗಳು ಕೂಡ ಪೀಠಕ್ಕೆ ಬಂದಾಗಿನಿಂದ ಅಡ್ಡಪಲ್ಲಕ್ಕಿ ಉತ್ಸವ, ಚಿನ್ನದ ಕಿರೀಟ ಧಾರಣೆ ಬಿಟ್ಟುಇಲ್ಲಿಯೂ ಸರಳತೆ ಮೈಗೂಡಿಸಿಕೊಂಡಿರುವುದು ವಿಶೇಷ.ಬೆಳಗ್ಗೆ 10 ಗಂಟೆ ಸುಮಾರಿಗೆ ಮುರುಘಾ ಮಠದ ಕತೃìಗದ್ದುಗೆಗೆ ತೆರಳಿ ಕತೃìಗಳಾದ ಶ್ರೀ ಮುರುಗಿ ಶಾಂತವೀರಸ್ವಾಮಿಗಳ ಗದ್ದುಗೆಗೆ ಭಕ್ತಿ ಸಮರ್ಪಣೆ ಮಾಡಿ ಚಿನ್ನದಕಿರೀಟ, ಇತರೆ ಎಲ್ಲ ಆಭರಣಗಳನ್ನು ಭಕ್ತರ ಕೈಗೆ ನೀಡಿ,ರುದ್ರಾಕ್ಷಿ ಕಿರೀಟ ಧರಿಸಿ, ವಚನ ಕೃತಿಯನ್ನು ಹಿಡಿದುಕೊಂಡುಪೀಠಾರೋಹಣ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next