ಚಳ್ಳಕೆರೆ: ರಾಜ್ಯ ವಿಧಾನಮಂಡಲದ ಕಾಗದಪತ್ರಗಳ ಸಮಿತಿ ಸಭೆ ಸಮಿತಿ ಸದಸ್ಯಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ವಿಧಾನ ಮಂಡಲದ ಕಾರ್ಯಾಲಯದಲ್ಲಿ ನಡೆದಿದ್ದು, ದಾವಣಗೆರೆ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳ ಸಂಬಂಧಪಟ್ಟಂತೆ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದಶಾಸಕ ಟಿ.ರಘುಮೂರ್ತಿ ಕಾಗದಪತ್ರಗಳ ಸಮಿತಿ ಸಭೆ ನಿಯಮ ಬದ್ಧವಾಗಿನಡೆಯುತ್ತಿದ್ದು, ಲೆಕ್ಕಪತ್ರಗಳೂ ಸೇರಿದಂತೆಹಲವಾರು ಯೋಜನೆಗಳ ಅನುಷ್ಠಾನಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.
ವಿಶ್ವವಿದ್ಯಾಲಯಗಳ ಚಟುವಟಿಕೆಗಳನ್ನುಕುರಿತು ಸಹ ಚರ್ಚಿಸಲಾಯಿತು. ಕಾಗದಪತ್ರಗಳ ಸಮಿತಿ ವ್ಯಾಪ್ತಿಗೆ ಬರುವ ಹಲವಾರುವಿಷಯಗಳ ಬಗ್ಗೆ ತಜ್ಞರೊಂದಿಗೆ ಚರ್ಚೆನಡೆಸಿದರು.ಸರ್ಕಾರ ಎಲ್ಲ ಹಂತದಲ್ಲೂ ಇನ್ನೂ ಹೆಚ್ಚಿನಸಹಕಾರವನ್ನು ವಿಶ್ವವಿದ್ಯಾಲಯಗಳಿಗೆನೀಡಬೇಕೆಂದು ಸಭೆಯಲ್ಲಿ ಹಾಜರಿದ್ದವರು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿವಿದ್ಯಾರ್ಥಿಗಳ ಶುಲ್ಕ ದಿಢೀರ್ ಏರಿಕೆಯಬಗ್ಗೆ ಮಾಹಿತಿ ಪಡೆದ ಶಾಸಕರು,ಸರ್ಕಾರ ಮಟ್ಟದಲ್ಲಿ ಶುಲ್ಕ ವಿಮರ್ಶೆಮಾಡುವಂತೆ ಸಲಹೆ ನೀಡಿದಲ್ಲರಲ್ಲದೆ, ಅಧಿಕಾರಿಗಳೊಂದಿಗೆ ಸಾಧಕ ಬಾಧಕಗಳನ್ನುಚರ್ಚಿಸಬೇಕು ಹಾಗೂ ವಿದ್ಯಾರ್ಥಿಗಳಹಿತದೃಷ್ಟಿಯಿಂದ ಶುಲ್ಕ ಹೊರೆಯಾಗದಂತೆ ಜಾಗ್ರತೆ ವಹಿಸಬೇಕು ಎಂದರು.
ಕೆಲವೊಂದು ವಿಶ್ವವಿದ್ಯಾಲಯಗಳುಸೇರಿ ಕಾಗದ ಪತ್ರಗಳ ಸಮಿತಿಗೆ ಸಂಪೂರ್ಣಮಾಹಿತಿ ನೀಡಲು ವಿಫಲವಾಗಿವೆ. ನಿಗದಿತಕಾಲದಲ್ಲಿ ಮಾಹಿತಿ ನೀಡುವ ಕುರಿತು ಚರ್ಚಿಸಲಾಯಿತು. ಯಾವುದೇ ಕಾರಣಕ್ಕೂವಿಳಂಬವಾಗದಂತೆ ಎಲ್ಲರೂ ಸಕಾಲದಲ್ಲಿ ಲೆಕ್ಕಪತ್ರ ಒದಗಿಸುವಂತೆ ಎಲ್ಲರಿಗೂ ನಿರ್ದೇಶನನೀಡಬೇಕೆಂದು ಸಮಿತಿ ತೀರ್ಮಾನಿಸಿತು.