Advertisement

ಸಾಂಸಾರಿಕ ಜೀವನದಲ್ಲಿ ತಾಳ್ಮೆ

02:53 PM Oct 06, 2021 | Team Udayavani |

ಚಿತ್ರದುರ್ಗ: ತಾಳಿ ಕಟ್ಟಿಸಿಕೊಂಡವರು ಮತ್ತು ಕಟ್ಟಿದವರು ಸಾಂಸಾರಿಕ ಜೀವನದಲ್ಲಿ ತಾಳ್ಮೆ ವಹಿಸಿದಾಗ ಮಾತ್ರನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಡಾ|ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಎಸ್‌.ಜೆ.ಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ಸಹಯೋಗದಲ್ಲಿ ನಡೆದ ಮೂವತ್ತೂಂದನೇ ವರ್ಷ ಹತ್ತನೇತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿದರು. ಮಾನವ ದುಬುìದ್ಧಿಯಿಂದಹಾಳಾಗುತ್ತಿದ್ದಾನೆ. ಅದರಿಂದ ಅಂತರ ಕಾಯ್ದುಕೊಂಡುಸದ್ಬುದ್ಧಿ ಬೆಳೆಸಿಕೊಂಡಾಗ ಯಶಸ್ಸು, ಸಾರ್ಥಕತೆಸಾಧ್ಯವಾಗುತ್ತದೆ. ಸಂಸಾರದ ರಥವೇರಿರುವ ನೀವೆಲ್ಲಸರಾಗವಾಗಿ ನಿರಾತಂಕವಾಗಿ ಜೀವನ ಸಾಗಿಸಿ ಎಂದರು.

ಗದಗ ಜಿಲ್ಲೆ ಬೆಳ್ಳಟ್ಟಿಯ ಶ್ರೀ ಬಸವರಾಜಸ್ವಾಮಿಗಳು ಮಾತನಾಡಿ, ಮಾತೃ ಹೃದಯದ ಮುರುಘಾಶರಣರು ಸಾಮೂಹಿಕ ವಿವಾಹಗಳನ್ನು ಕಳೆದ 31ವರ್ಷಗಳಿಂದ ನಡೆಸಿಕೊಂಡು ಬಂದಿರುವುದು ವಿಶೇಷ.

ಜಗತ್ತಿನ ಮೊಟ್ಟ ಮೊದಲ ಸಾಮೂಹಿಕ ವಿವಾಹಪ್ರಾರಂಭಿಸಿದವರು 12ನೇ ಶತಮಾನದ ಶರಣರು ಎಂದರೆತಪ್ಪಾಗಲಾರದು. ಮುರುಘಾ ಶರಣರು ಪ್ರತಿ ತಿಂಗಳುಮಾಡುವ ವಿವಾಹ ಕಾರ್ಯಕ್ರಮಗಳಿಗೆ ನೊಬೆಲ್‌ ಪ್ರಶಸ್ತಿನೀಡಿದರೂ ಅದು ಅವರ ಸೇವೆಗೆ ಕಡಿಮೆ ಎನ್ನಿಸುತ್ತದೆ.ನೀರಿನ ಸಾಗರ ದಾಟಲು ತೆಪ್ಪ ಬೇಕು. ಸಂಸಾರ ಸಾಗರದಾಟಲು ತೆಪ್ಪಗಿರಬೇಕು.

ಗಂಡ, ಹೆಂಡತಿ ಒಬ್ಬರನ್ನೊಬ್ಬರುಅರ್ಥ ಮಾಡಿಕೊಂಡು, ಹೊಂದಿಕೊಂಡು ದಾಂಪತ್ಯಜೀವನ ಕಟ್ಟಿಕೊಳ್ಳಿರಿ ಎಂದು ವಧು-ವರರಿಗೆ ಕಿವಿಮಾತು ಹೇಳಿದರು.

Advertisement

ಸಿದ್ದಾಪುರದ ವರ್ತಕ ಎಸ್‌.ವಿ. ನಾಗರಾಜಪ್ಪವೇದಿಕೆಯಲ್ಲಿದ್ದರು. ಕಾರ್ಯಕ್ರಮದ ದಾಸೋಹಿಗಳಾದನಾಗರತ್ನಮ್ಮ ಎಸ್‌. ರುದ್ರಪ್ಪ ಮತ್ತು ಮಕ್ಕಳು ಉಪಸ್ಥಿತರಿದ್ದರು. ಸಾಮೂಹಿಕ ಕಲ್ಯಾಣದಲ್ಲಿ ಆದಿದ್ರಾವಿಡಮತ್ತು ಒಕ್ಕಲಿಗ ಜೋಡಿ ಅಂತರ್ಜಾತಿ ವಿವಾಹ ಸೇರಿದಂತೆಒಟ್ಟು 8 ಜೋಡಿಗಳ ವಿವಾಹ ನೆರವೇರಿತು. ಜಮುರಾಕಲಾವಿದರು ವಚನ ಪ್ರಾರ್ಥನೆ ಹಾಡಿದರು. ಹರಿವೃಕ್ಷಾಮೃತದೇವರು ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next