Advertisement

ಕಾಡುಗೊಲ್ಲರಿಗೆ ರಾಜಕೀಯ ಪ್ರಾತಿನಿಧ್ಯ ಕೊಡಿ

02:50 PM Aug 15, 2022 | Team Udayavani |

ಚಿತ್ರದುರ್ಗ: ಚಿತ್ರದುರ್ಗ ಹಾಗೂತುಮಕೂರು ಜಿಲ್ಲೆಗಳಲ್ಲಿ ಕಾಡುಗೊಲ್ಲರುಹೆಚ್ಚಿನ ಸಂಖ್ಯೆಯಲ್ಲಿದ್ದು, ಮುಂದಿನವಿಧಾನಸಭೆ ಚುನಾವಣೆ ವೇಳೆ ಕನಿಷ್ಟಎರಡು ಸ್ಥಾನಗಳನ್ನು ರಾಜ್ಯದ ಎಲ್ಲಾರಾಜಕೀಯ ಪಕ್ಷಗಳು ಕಾಡುಗೊಲ್ಲರಿಗೆಮೀಸಲಿಡಬೇಕು ಎಂದು ಮಾಜಿ ಶಾಸಕಎ.ವಿ. ಉಮಾಪತಿ ಒತ್ತಾಯಿಸಿದರು.ಕಾಟಮ್ಮ ಪಟೇಲ್‌ ವೀರನಾಗಪ್ಪಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾಕಾಡುಗೊಲ್ಲರ ಚಿಂತನಾ ಸಭೆಯಲ್ಲಿಮಾತನಾಡಿದರು. ಕಾಡುಗೊಲ್ಲರಿಗೆವಿಧಾನಸಭೆ ಚುನಾವಣೆಯಲ್ಲಿಅವಕಾಶ ಕಲ್ಪಿಸಿದರೆ ಗೆಲ್ಲುವುದರಲ್ಲಿಅನುಮಾನವಿಲ್ಲ.

Advertisement

ಮುಂಬರುವ ತಾಪಂ,ಜಿಪಂ ಚುನಾವಣೆಗಳಲ್ಲೂ ಕಾಡುಗೊಲ್ಲರಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನಪ್ರಾತಿನಿಧ್ಯ ನೀಡಬೇಕು. ಅಲೆಮಾರಿ, ಅರೆಅಲೆಮಾರಿ ವಸತಿ ನಿರ್ಮಾಣಕ್ಕೆ ಸರ್ಕಾರಮೀಸಲಿಟ್ಟಿರುವ 1.20 ಲಕ್ಷ ರೂ. ಅನ್ನು3.50 ಲಕ್ಷಕ್ಕೆ ಹೆಚ್ಚಿಸಬೇಕು. ಕಾಡುಗೊಲ್ಲಅಭಿವೃದ್ಧಿ ನಿಗಮವನ್ನು ಬಲಪಡಿಸಬೇಕು.ಕಾಡುಗೊಲ್ಲರಿಗೆ ಎಸ್‌ಟಿ ಮೀಸಲಾತಿಕಲ್ಪಿಸಲು ಈಗಾಗಲೇ ರಾಜ್ಯ ಸರ್ಕಾರದಿಂದಕೇಂದ್ರಕ್ಕೆ ಪ್ರಸ್ತಾವನೆ ಹೋಗಿದೆ. ಆದಷ್ಟುಬೇಗ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕುಎಂದರು.

ನಿವೃತ್ತ ಪ್ರಾಚಾರ್ಯ ಎಂ. ಕರಿಯಪ್ಪ,ಗೌಡ್ರಹಳ್ಳೆಪ್ಪ, ಸಿ. ಚಿತ್ತಯ್ಯ, ಜಿ.ಎಚ್‌.ಷಣ್ಮುಖಪ್ಪ, ರಾಜಕುಮಾರ್‌, ಗುರುಸ್ವಾಮಿ,ಟಿ. ರಂಗಸ್ವಾಮಿ, ಚಿತ್ತಪ್ಪ ಯಾದವ್‌,ಶಿವಣ್ಣ, ವಿರುಪಾಕ್ಷಪ್ಪ ಮತ್ತಿತರರುಮಾತನಾಡಿದರು. ಜಿ.ಸಿ. ರಂಗಸ್ವಾಮಿಪ್ರಾಸ್ತಾವಿಕ ನುಡಿಗಳನ್ನಾಡಿದರು. ಈರಪ್ಪಪ್ರಾರ್ಥಿಸಿದರು. ಜಿ.ಎನ್‌. ಪಾಂಡುರಂಗಪ್ಪಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next