Advertisement

ಕೇಂದ್ರ ಸಚಿವ ಅಜಯ್‌ ಮಿಶ್ರಾ ವಜಾಕ್ಕೆ ಆಗ್ರಹ

06:45 PM Oct 05, 2021 | Team Udayavani |

ಚಿತ್ರದುರ್ಗ: ಉತ್ತರಪ್ರದೇಶದಲ್ಲಿ ಹೋರಾಟನಿರತ ರೈತರ ಮೇಲೆ ವಾಹನ ಹಾಯಿಸಿಎಂಟು ಜನರನ್ನು ಹತ್ಯೆ ಮಾಡಿರುವ ಘಟನೆ ಖಂಡಿಸಿ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಸೋಮವಾರನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾ ಧಿಕಾರಿಗೆ ಮನವಿ ಸಲ್ಲಿಸಲಾಯಿತು.

Advertisement

ಜಿಲ್ಲಾ ಧಿಕಾರಿ ಕಚೇರಿ ಎದುರು ಕುಳಿತುಪ್ರತಿಭಟಿಸಿದ ರೈತರು, ಘಟನೆಗೆ ಕಾರಣರಾದಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ಮಿಶ್ರಾ ಅವರನ್ನು ಕೂಡಲೇ ಸಂಪುಟದಿಂದವಜಾ ಮಾಡಬೇಕು. ಸುಪ್ರೀಂ ಕೋರ್ಟ್‌ಉಸ್ತುವಾರಿಯಲ್ಲಿ ತನಿಖೆ ನಡೆಸಲು ಎಸ್‌ಐಟಿನೇಮಕ ಮಾಡಬೇಕು ಎಂದು ಆಗ್ರಹಿಸಿದರು.ಉತ್ತರಪ್ರದೇಶದ ಲಿಖೀಂಪುರ್‌ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆಅಜಯ್‌ ಮಿಶ್ರಾ ಅವರ ಬೆಂಗಾವಲು ಪಡೆಯವಾಹನ ಹರಿದಿದೆ.

ಇದು ಆಕಸ್ಮಿಕವಾಗಿ ನಡೆದಘಟನೆಯಂತೆ ಕಾಣುತ್ತಿಲ್ಲ. ಹೋರಾಟ ನಿರತರೈತರನ್ನು ಬೆದರಿಸುವ ಹಾಗೂ ಪ್ರಚೋದನೆನೀಡುವ ಉದ್ದೇಶ ನಡೆಸಿದ ದಾಳಿಯಾಗಿದೆ.ಉತ್ತರಪ್ರದೇಶ ರಾಜ್ಯ ಸರ್ಕಾರ ಹಾಗೂ ಕೇಂದ್ರಸರ್ಕಾರ ಕ್ರೂರವಾಗಿ ನಡೆದುಕೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ :ಸಚಿವ ಹಾಲಪ್ಪ ಆಚಾರ್‌

ಸ್ವರಾಜ್‌ ಇಂಡಿಯಾ ಪಕ್ಷದ ಜಿಲ್ಲಾ ಘಟಕದಅಧ್ಯಕ್ಷ ಜೆ.ಯಾದವ ರೆಡ್ಡಿ ಮಾತನಾಡಿ,ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್‌ ಅವರು ರೈತರ ಮೇಲೆ ದಾಳಿ ನಡೆಸಲು ಪ್ರಚೋದನೆ ನೀಡಿದ ಬೆನ್ನಲ್ಲೇ ಈ ಕ್ರೂರ ಘಟನೆನಡೆದಿದೆ. ಸಾಂವಿಧಾನಿಕ ಹುದ್ದೆಯಲ್ಲಿದ್ದು ಅಸಾಂವಿಧಾನಿಕವಾಗಿ ನಡೆದುಕೊಳ್ಳುತ್ತಿದ್ದಾರೆ.ಇದನ್ನು ರಾಷ್ಟ್ರಪತಿಯವರು ಗಂಭೀರವಾಗಿಪರಿಗಣಿಸಬೇಕು.

Advertisement

ಗೂಂಡಾ ಸಂಸ್ಕೃತಿಪ್ರದರ್ಶಿಸುತ್ತಿರುವ ಸರ್ಕಾರವನ್ನು ಕೂಡಲೇವಜಾ ಮಾಡಬೇಕು ಎಂದು ಒತ್ತಾಯಿಸಿದರು.ರಾಜ್ಯ ರೈತ ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿ ನುಲೇನೂರು ಎಂ. ಶಂಕ್ರಪ್ಪ,ಜಿಲ್ಲಾ ಘಟಕದಅಧ್ಯಕ್ಷ ಸುರೇಶಬಾಬು, ಎಸ್‌ಯುಸಿಐಮುಖಂಡ ರವಿಕುಮಾರ್‌, ಸಿಪಿಐ ಮುಖಂಡಸುರೇಶಬಾಬು, ಟಿ.ಷμವುಲ್ಲ, ಧನಂಜಯಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next