Advertisement

ಛತ್ರಪತಿ ಶಿವಾಜಿ ದೇಶಾಭಿಮಾನ ಅನುಕರಣೀಯ 

03:00 PM Feb 22, 2022 | Team Udayavani |

ಚಿತ್ರದುರ್ಗ: ಛತ್ರಪತಿ ಶಿವಾಜಿ ಅವರ ಯುದ್ಧ ನಿಪುಣತೆ, ಬದ್ಧತೆ,ಪರಾಕ್ರಮ ಅವರಲ್ಲಿದ್ದ ದೇಶಾಭಿಮಾನವನ್ನು ವಿದ್ಯಾರ್ಥಿಗಳುತಿಳಿದುಕೊಳ್ಳಬೇಕು ಎಂದು ಜಿಲ್ಲಾ ಧಿಕಾರಿ ಕವಿತಾ ಎಸ್‌.ಮನ್ನಿಕೇರಿತಿಳಿಸಿದರು.ಜಿಲ್ಲಾ ಧಿಕಾರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ,ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಸಹಯೋಗದಲ್ಲಿ ಸರಳವಾಗಿ ನಡೆದ ಛತ್ರಪತಿ ಶಿವಾಜಿಜಯಂತಿಯಲ್ಲಿ ಮಾತನಾಡಿದರು.

Advertisement

ಶಿವಾಜಿ ಅವರು ದುಷ್ಟ ಶಕ್ತಿಗಳನ್ನು ದೂರ ಮಾಡಲುಸಮಾಜವನ್ನು ಹೇಗೆ ಒಗ್ಗೂಡಿಸಿದರು ಹಾಗೂ ತಮ್ಮಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಎಂತಹ ಸಾಹಸ ಮೆರೆದರುಎನ್ನುವುದು ಇತಿಹಾಸ. ದುಷ್ಟರನ್ನು ಸಂಹಾರ ಮಾಡಲು ಅಂದುಶಿವಾಜಿ ತೋರಿದ ಶೌರ್ಯ ಇಂದಿನ ಯುವ ಪೀಳಿಗೆಗೆ ಮಾದರಿಎಂದರು.ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ಕೆಲವುಘಟನೆಗಳು ಯಾವ ದಿಕ್ಕಿನಲ್ಲಿ ಯುವ ಜನಾಂಗ ಸಾಗುತ್ತಿದೆ.

ಪ್ರಸ್ತುತನಡೆಯುತ್ತಿರುವ ಘಟನೆಗಳು ನೋವುಂಟು ಮಾಡಿದ್ದು, ನಮಗೆದೇಶ ಮೊದಲು ಎಂಬ ಭಾವನೆ ಎಲ್ಲರಲ್ಲೂ ಬರಬೇಕಾಗಿದೆ.ಛತ್ರಪತಿ ಶಿವಾಜಿ ಅವರು ಯಾವ ರೀತಿ ತಮ್ಮ ಸಾಮ್ರಾಜ್ಯವನ್ನುಉಳಿಸಿದರು ಎಂಬ ಇತಿಹಾಸ ಇಂದಿನ ಯುವ ಜನರಿಗೆಮಾದರಿಯಾಗಿದ್ದು ಇತಿಹಾಸ ಅರಿಯಬೇಕೆಂದರು.

ಅಪರ ಜಿಲ್ಲಾ ಧಿಕಾರಿ ಬಾಲಕೃಷ್ಣ ಮಾತನಾಡಿ, ಹಿಂದೂ ಧರ್ಮಆಕ್ರಮಣಕ್ಕೆ ಒಳಗಾದಂತಹ ಸಂದರ್ಭದಲ್ಲಿ ಒಬ್ಬ ಆದರ್ಶಹಿಂದೂವಾಗಿ, ಕ್ಷತ್ರಿಯ ಮಹಾರಾಜನಾಗಿ ಧರ್ಮವನ್ನು ಯಾವರೀತಿ ರಕ್ಷಣೆ ಮಾಡಬೇಕು ಹಾಗೂ ಧರ್ಮ ರಕ್ಷಣೆಗೆ ಶಿವಾಜಿ ಯಾವರೀತಿ ಹೋರಾಟ ಮಾಡಿದರು ಎಂಬುದನ್ನು ನಾವು ಇತಿಹಾಸದಲ್ಲಿಓದಿ ತಿಳಿದುಕೊಂಡಿದ್ದೇವೆ.

ದೇಶ, ಧರ್ಮ, ಈ ನೆಲಕ್ಕಾಗಿ ಅವರುಹೋರಾಡಿದಂತಹ ವಿಧಾನ ಬಹಳ ಶ್ರೇಷ್ಠವಾದುದು ಎಂದುಹೇಳಿದರು.ಹೆಚ್ಚುವರಿ ರಕ್ಷಣಾ ಧಿಕಾರಿ ಕುಮಾರಸ್ವಾಮಿ, ಜಿಲ್ಲಾ ಮರಾಠಸಮಾಜ ಅಧ್ಯಕ್ಷರಾದ ಸುರೇಶ್‌ ರಾಜ್‌ ಜಾಧವ್‌, ಕಾರ್ಯದರ್ಶಿಜೆ.ಗೋಪಾಲರಾವ್‌ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿಇಲಾಖೆ ಸಹಾಯಕ ನಿರ್ದೇಶಕ ಧನಂಜಯ ಸ್ವಾಗತಿವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next