ಚಿತ್ರದುರ್ಗ: ತಾಲೂಕಿನ ಲಕ್ಷ್ಮೀಸಾಗರ ಕೆರೆಯನ್ನುಸ್ವತ್ಛಗೊಳಿಸಿ ಕಟ್ಟೆಯನ್ನು ಭದ್ರಗೊಳಿಸಿ ಅಂತರ್ಜಲವೃದ್ಧಿಗೆ ಒತ್ತು ನೀಡಲಾಗುವುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.ತಾಲೂಕಿನ ಲಕ್ಷ್ಮೀಸಾಗರ, ಕಿಟ್ಟದಹಟ್ಟಿ,ವಡ್ಡರಸಿದ್ದವ್ವನಹಳ್ಳಿ, ಚಿಕ್ಕಾಲಘಟ್ಟ, ದೊಡ್ಡಾಲಘಟ್ಟಗ್ರಾಮಗಳಲ್ಲಿ “ನಮ್ಮ ಗ್ರಾಮ ನಮ್ಮ ರಸ್ತೆ’ ಮತ್ತುಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿನಿರ್ಮಿಸುತ್ತಿರುವ ರಸ್ತೆ ಕಾಮಗಾರಿಗೆ ಚಾಲನೆ ನೀಡಿಅವರು ಮಾತನಾಡಿದರು.
ಗ್ರಾಮೀಣ ಭಾಗದ ರಸ್ತೆಗಳಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ.ತರಿಗೆ ಅನುಕೂಲವಾಗುವ ದೃಷ್ಟಿಯಿಂದ ದೇಶದ ಪ್ರತಿವಿಧಾನಸಭಾ ಕ್ಷೇತ್ರಕ್ಕೆ 30 ಕಿಮೀ ರಸ್ತೆ ಅಭಿವೃದ್ಧಿಗೆ ಕೇಂದ್ರಸರ್ಕಾರದಿಂದ ಅನುದಾನ ನೀಡಿದ್ದಾರೆ. ಒಟ್ಟು 11 ಕೋಟಿರೂ. ವೆಚ್ಚದಲ್ಲಿ ವಡ್ಡರಸಿದ್ದವ್ವನಹಳ್ಳಿ, ಕೋಣನೂರು,ಭೀಮಸಮುದ್ರ, ತೋರೆಬೈಲು ರಸ್ತೆ, ನೀಲಯ್ಯನಹಟ್ಟಿಯಿಂದ ದ್ಯಾಮನಹಳ್ಳಿ, ದೊಡ್ಡಾಲಘಟ್ಟದಿಂದಸಿರಿಗೆರೆ ರಸ್ತೆಗಳನ್ನು ಪಿಎಂಜಿಎಸ್‌ವೈ ಯೋಜನೆಯಲ್ಲಿಮಾಡಲಾಗುತ್ತಿದೆ ಎಂದರು.
ಲಕ್ಷ್ಮೀಸಾಗರ, ಕಿಟ್ಟದಹಟ್ಟಿಯಲ್ಲಿ “ನಮ್ಮ ಗ್ರಾಮನಮ್ಮ ರಸ್ತೆ’ಯೋಜನೆಯಲ್ಲಿ 25 ಲಕ್ಷ ರೂ. ವೆಚ್ಚದಲ್ಲಿರಸ್ತೆ ಮಾಡಲಾಗುತ್ತಿದೆ. ಲಕ್ಷ್ಮೀಸಾಗರ ಗ್ರಾಮದ ಸಿಸಿ ರಸ್ತೆ40 ಲಕ್ಷ ರೂ. ನೀಡಿದ್ದು ಸ್ವಲ್ಪ ದಿನದಲ್ಲಿ ಕೆಲಸ ಪ್ರಾರಂಭಮಾಡಲಾಗುತ್ತದೆ ಎಂದು ತಿಳಿಸಿದರು.ರೈತರು ಲಕ್ಷ್ಮೀಸಾಗರ ಕೆರೆ ಅಭಿವೃದ್ಧಿಗೆ ಹಣ ಕೇಳಿದ್ದು,2 ಕೋಟಿ ರೂ.ದಲ್ಲಿ ಕೆರೆಯ ಏರಿ ಅಭಿವೃದ್ಧಿ, ಜಂಗಲ್‌ಕಟ್ಟಿಂಗ್, ಕೋಡಿ ಭದ್ರಗೊಳಿಸುವಿಕೆ ಮಾಡಲಾಗುವುದು.ಕಡಿಮೆ ಬಂದರೆ ಮತ್ತೆ ಹಣ ನೀಡುತ್ತೇನೆ. ಲಕ್ಷ್ಮೀಸಾಗರಕೆರೆ ದೊಡ್ಡದಾಗಿದ್ದು ಈ ಕೆರೆಯ ಅಭಿವೃದ್ಧಿಯಿಂದಸಾವಿರಾರು ಕೊಳವೆಬಾವಿಗಳಿಗೆ ಅನುಕೂಲವಾಗುತ್ತದೆ.
ಸಿರಿಗೆರೆ ಶ್ರೀಗಳು ಈ ಕೆರೆಗೆ ನೀರುಣಿಸುವ ಕೆಲಸಮಾಡುತ್ತಿದ್ದಾರೆ. ನೀರು ಹರಿಯುವ ವೇಳೆ ಕೆರೆಸಂಪೂರ್ಣ ಭದ್ರವಾಗಿರಬೇಕು ಎಂಬ ಉದ್ದೇಶದಿಂದಹಣ ನೀಡಿದ್ದೇವೆ. ಗ್ರಾಮಸ್ಥರು ಮುಂದೆ ನಿಂತುಉತ್ತಮ ಕಾಮಗಾರಿ ಮಾಡಿಸಿಕೊಳ್ಳಿ ಎಂದು ಸಲಹೆನೀಡಿದರು.ಲಕ್ಷ್ಮೀಸಾಗರದ ದೇವಸ್ಥಾನಕ್ಕೆ 5 ಲಕ್ಷ ರೂ. ನೀಡಿದ್ದೇನೆ.
ಕಿಟ್ಟದಹಟ್ಟಿ ಜನರು ಬಸ್ ಸೌಲಭ್ಯ ಕೇಳಿದ್ದು ಈ ಭಾಗದಸಾರ್ವಜನಿಕರು ಮಾರ್ಗ ತಿಳಿಸಿದರೆ ಸರ್ವೆ ಮಾಡಿಸಿಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕರುಭರವಸೆ ನೀಡಿದರು.ಗ್ರಾಪಂ ಸದಸ್ಯರಾದ ಪಾಡುರಂಗಪ್ಪ, ಶೋಭಾ,ಶಿವಮ್ಮ, ವಸಂತಕುಮಾರ್, ರಾಮಾಂಜನೇಯ,ಅಶೋಕ್‌ಕುಮಾರ್, ಧನಂಜಯ, ಕವಿತಾ ಮತ್ತುಪಿಎಂಜಿಎಸ್‌ವೈ ಯೋಜನೆ ಅಭಿಯಂತರ ನಾಗರಾಜ್‌ಇದ್ದರು.