ಚಿತ್ರದುರ್ಗ: ಸಂಸದ ಹಾಗೂ ಕೇಂದ್ರ ಸಾಮಾಜಿಕನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆಸಚಿವರಾದ ಎ. ನಾರಾಯಣಸ್ವಾಮಿ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಅವರನ್ನು ಭೇಟಿ ಮಾಡಿ ಅತ್ಯಗತ್ಯ, ಅಭಿವೃದ್ಧಿಕಾಮಗಾರಿಗಳ ತ್ವರಿತ ಅನುಷ್ಠಾನ ಕೋರಿಪ್ರಸ್ತಾವನೆ ಸಲ್ಲಿಸಿದರು.
ಇದಕ್ಕೆ ಸಚಿವ ನಿತಿನ್ ಗಡ್ಕರಿಸಕಾರಾತ್ಮಕವಾಗಿ ಸ್ಪಂದಿಸಿದ್ದು, ಚಿತ್ರದುರ್ಗ ಜಿಲ್ಲೆಯಎರಡು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನುಪ್ರಸಕ್ತ ಸಾಲಿನ ವಾರ್ಷಿಕ ಯೋಜನೆಯಡಿಅನುಮೋದನೆ ದೊರೆತಿದ್ದು, ಕಾಮಗಾರಿಗಳಅಂದಾಜು ಪಟ್ಟಿ ಅಂತಿಮ ಅನುಮೋದನೆಹಂತದಲ್ಲಿದೆ.
ರಾಷ್ಟ್ರೀಯ ಹೆದ್ದಾರಿ-150ಎ ಹಿರಿಯೂರಿನಿಂದಹುಳಿಯಾರುವರೆಗೆ 31 ಕಿಮೀಗೆ ದ್ವಿಪಥರಸ್ತೆಯನ್ನಾಗಿ ಅಭಿವೃದ್ಧಿಪಡಿಸುವುದಕ್ಕೆ 140ಕೋಟಿ ರೂ. ಹಾಗೂ ರಾಷ್ಟ್ರೀಯ ಹೆದ್ದಾರಿ-173ಹೊಳಲ್ಕೆರೆಯಿಂದ ಹೊಸದುರ್ಗದವರೆಗೆ 31.30ಕಿಮೀಗೆ ದ್ವಿಪಥ ರಸ್ತೆ ಅಭಿವೃದ್ಧಿಪಡಿಸಲು 170ಕೋಟಿ ರೂ. ಕಾಮಗಾರಿಗಳಿಗೆ ಅನುಮೋದನೆದೊರಕಿದೆ. ಚಿತ್ರದುರ್ಗ, ಚಳ್ಳಕೆರೆ, ಪಾವಗಡಹಾಗೂ ಆಂಧ್ರಪ್ರದೇಶದ ಪೆನಕೊಂಡ, ಪುಟ್ಟಪರ್ತಿ,ಬುಕ್ಕಾಪಟ್ಟಣಂವರೆಗೆ 180 ಕಿಮೀ ಉದ್ದದ ಹಾಲಿರಾಜ್ಯದ ಹೆದ್ದಾರಿಯನ್ನುರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲುಪ್ರಸ್ತಾವನೆ ಸಲ್ಲಿಸಿದ್ದಾರೆ.
ಈ ಪ್ರಸ್ತಾವನೆಯಿಂದ ಅಂತರರಾಜ್ಯ ಸಂಪರ್ಕ, ಮಧ್ಯ ಕರ್ನಾಟಕಕರಾವಳಿ ಕರ್ನಾಟಕದ ಭಾಗದಿಂದ ಹೈದರಾಬಾದ್‌ಸಂಪರ್ಕಿಸಲು ಅನುಕೂಲವಾಗಲಿದೆ.ರಾಷ್ಟ್ರೀಯ ಹೆದ್ದಾರಿ-173 ಮೂಡಿಗೆರೆಯಿಂದಚಿಕ್ಕಮಗಳೂರು, ಕಡೂರು, ಹೊಸದುರ್ಗಮಾರ್ಗವಾಗಿ ಹೊಳಲ್ಕೆರೆ ಸಂಪರ್ಕಿಸುವ ರಾಷ್ಟ್ರೀಯಹೆದ್ದಾರಿಯನ್ನು ಚಿಕ್ಕಜಾಜೂರು ಮಾರ್ಗವಾಗಿದಾವಣಗೆರೆ ಜಿಲ್ಲೆ ಆನಗೋಡುವೆರೆಗೆ ವಿಸ್ತರಿಸಲುಪ್ರಸ್ತಾವನೆ ಸಲ್ಲಿಸಲಾಗಿದೆ.
ಕೇಂದ್ರ ರಸ್ತೆ ನಿಧಿ ಯೋಜನೆಯಡಿ ಚಿತ್ರದುರ್ಗ,ಗೋನೂರು, ಬೆಳಗಟ್ಟ, ಹಾಯ್ಕಲ್, ನಾಯಕನಹಟ್ಟಿಸಂಪರ್ಕಿಸುವ 30 ಕಿಮೀ ಉದ್ದದ ಜಿಲ್ಲಾ ಮುಖ್ಯರಸ್ತೆಯನ್ನು ಅಭಿವೃದ್ಧಿ ಪಡಿಸಲು ಪ್ರಸ್ತಾವನೆಸಲ್ಲಿಸಲಾಗಿದೆ. ದೊಣೆಹಳ್ಳಿ, ನಾಯಕನಹಟ್ಟಿ,ಗರಣಿಕ್ರಾಸ್ ಸಂಪರ್ಕಿಸುವ ರಾಜ್ಯ ಹೆದ್ದಾರಿಯನ್ನುಕರ್ನಾಟಕ ರಾಜ್ಯ ಹೆದ್ದಾರಿ ಯೋಜನೆಯಡಿಯಲ್ಲಿಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಸಲ್ಲಿಸಲಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವರಾದಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.