Advertisement
ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದಲ್ಲಿ ಡಾ|ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿನಿಗಮದಿಂದ 2020-21 ನೇ ಸಾಲಿನ ಪರಿಶಿಷ್ಟ ಜಾತಿಯಚರ್ಮ ಕುಶಲಕರ್ಮಿಗಳಿಗೆ ಉಚಿತ ಹೊಲಿಗೆ ಯಂತ್ರವಿತರಿಸಿ ಅವರು ಮಾತನಾಡಿದರು. ಎಲ್ಲರಿಗೂ ಸರ್ಕಾರಿನೌಕರಿ ದೊರೆಯುವುದು ಕಷ್ಟ.
Related Articles
Advertisement
ಡಾ| ಬಾಬು ಜಗಜೀನರಾಂ ಚರ್ಮ ಕೈಗಾರಿಕಾಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರೊ| ಲಿಂಗಪ್ಪ ಮಾತನಾಡಿ,ದೊಡ್ಡಸಿದ್ದವ್ವನಹಳ್ಳಿ ನಾನು ಹಾಗೂ ನನ್ನ ತಂದೆ ಬದುಕುಸಾಗಿಸಿದ ಗ್ರಾಮ. ನನ್ನ ಪ್ರಾಥಮಿಕ ಮತ್ತು ಪ್ರೌಢಶಾಲಾಶಿಕ್ಷಣ ಮುಗಿಸಿದ ಹಳ್ಳಿ ಎಂದು ಸ್ಮರಿಸಿದರು. ಇಲ್ಲಿಗೆಅನೇಕ ಬಾರಿ ಬಂದಿದ್ದು ಇಲ್ಲಿನ ಜನರ ಜೊತೆ ಉತ್ತಮಒಡನಾಟವಿದೆ. ನರಹರಿ ಸದ್ಗುರು ಭವನಕ್ಕೆ 20 ಲಕ್ಷ ರೂ.ಗಳನ್ನು ಸರ್ಕಾರದಿಂದ ಕೊಡಿಸುವ ಕೆಲಸ ಮಾಡಿದ್ದೇನೆ.
2ಎಕರೆ ಜಾಗದಲ್ಲಿ ಡಿ.ಎಸ್. ಹಳ್ಳಿಯಲ್ಲಿ 1.25 ಕೋಟಿ ರೂ.ವೆಚ್ಚದಲ್ಲಿ ಚರ್ಮ ಶಿಲ್ಪ ಭವನ ಮಾಡಲಾಗುತ್ತಿದೆ. ನಾನು ನನ್ನಅಧಿ ಕಾರ ವ್ಯಾಪ್ತಿಯಲ್ಲಿ ಈ ಭಾಗದ ಪರಿಶಿಷ್ಟ ಜಾತಿಯ 30ಮಹಿಳೆಯರಿಗೆ ಪ್ರೋತ್ಸಾಹಧನ, ಉಚಿತ ತರಬೇತಿ ಮತ್ತುಹೊಲಿಗೆ ಯಂತ್ರ ನೀಡಿದ್ದೇನೆ. ನಮ್ಮ ಇಲಾಖೆಯಿಂದ ಕಚ್ಚಾವಸ್ತುಗಳನ್ನು ಸಹ ನೀಡಲಾಗುತ್ತಿದೆ. ಅದರಿಂದ ಚಪ್ಪಲಿ,ಪರ್ಸ್, ವ್ಯಾನಿಟಿಬ್ಯಾಗ್, ಬೆಲ್ಟ್ ತಯಾರಿಸಿ ನಿಗಮಕ್ಕೆ ನೀಡಿ ಎಂದರು.
ಜಿಲ್ಲಾ ಸಂಯೋಜಕ ಗಂಗಾಧರ, ಗ್ರಾಪಂ ಅಧ್ಯಕ್ಷೆಭಾರತಿ ರಾಜಣ್ಣ, ಸದಸ್ಯರಾದ ಭಾಗ್ಯಮ್ಮ, ವಿದ್ಯಾವತಿ, ಸುಧಾ,ಗಂಗಮ್ಮ, ರಾಜಶೇಖರ್ ಮತ್ತಿತರರು ಇದ್ದರು.