Advertisement

ಖಜಾನೆ ಇಲಾಖೆ ಪಾತ್ರ ಮಹತ್ವದ್ದು

12:12 PM Sep 26, 2021 | Team Udayavani |

ಚಿತ್ರದುರ್ಗ: ಕೇಂದ್ರ ಹಾಗೂ ರಾಜ್ಯಸರ್ಕಾರಗಳು ರೂಪಿಸುವ ಯಾವುದೇ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನವಾಗಲು ಖಜಾನೆ ಇಲಾಖೆಯ ಪಾತ್ರ ಬಹಳ ಮಹತ್ವದ್ದಾಗಿದೆಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.

Advertisement

ನಗರದ ತರಾಸು ರಂಗಮಂದಿರದಲ್ಲಿಶನಿವಾರ ನಡೆದ ಖಜಾನೆನೌಕರರ ಸಂಘದ ರಾಜ್ಯಮಟ್ಟದಕಾರ್ಯಕಾರಿಣಿ ಸಭೆ ಉದ್ಘಾಟಿಸಿಅವರು ಮಾತನಾಡಿದರು. ಖಜಾನೆ ಇಲಾಖೆ ನೌಕರರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಗಮನಕ್ಕೆ ತಂದಿದ್ದಾರೆ.

ಮನವಿ ಕೊಟ್ಟು ಸುಮ್ಮನಾಗುವ ಬದಲುರಾಜ್ಯದ ಎಲ್ಲ ಶಾಸಕರು, ಮಂತ್ರಿಗಳನ್ನುಈ ಬಗ್ಗೆ ಗಮನ ಸೆಳೆಯಬೇಕು. ನಾನುಕೂಡ ನಿಮ್ಮ ಸಮಸ್ಯೆ ಬಗೆಹರಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.ಹಣಕಾಸು ಖಾತೆಯನ್ನುಬಹುತೇಕ ಮುಖ್ಯಮಂತ್ರಿಗಳೇ ಹೊಂದಿರುತ್ತಾರೆ.

ಹಣಕಾಸು ಇಲಾಖೆಕಾರ್ಯದರ್ಶಿ ಪ್ರಸಾದ್‌ ಕೂಡಾ ಶಿಸ್ತಿನಅ ಧಿಕಾರಿಯಾಗಿದ್ದು, ಅವರ ಗಮನಕ್ಕೂನಿಮ್ಮ ಸಮಸ್ಯೆಗಳನ್ನು ತಂದರೆ ಬೇಗಇತ್ಯರ್ಥವಾಗಲಿವೆ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಖಜಾನೆ ನೌಕರರ ಸಂಘದಅಧ್ಯಕ್ಷ ಜಿ. ಜಗದೀಶ್‌, ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಜಯಣ್ಣ,ಸಹಾಯಕ ನಿರ್ದೇಶಕ ಕೆ.ಟಿ. ವಿಜಯ್‌ಕೃಷ್ಣಕುಮಾರ್‌, ಸುನೀಲ್‌, ಗೌರವಾಧ್ಯಕ್ಷಎಂ.ಆರ್‌. ರಾಜಣ್ಣ, ಬಿ. ಶಿವಕುಮಾರಪಾಟೀಲ್‌, ಪುನೀತ್‌, ಕೇಶವ, ನಂದೀಶ್‌ಮತ್ತಿತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next