Advertisement

ಮುರುಘಾ ಮಠದ ಕಾರ್ಯ ಸ್ತುತ್ಯರ್ಹ

04:59 PM May 01, 2020 | Naveen |

ಚಿತ್ರದುರ್ಗ: ಮುರುಘಾ ಮಠ ಸದಾ ಒಂದಿಲ್ಲೊಂದು ಜನೋಪಯೋಗಿ ಕೆಲಸ ಮಾಡುತ್ತಾ ನಾಡಿನ ಜನರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ ಎಂದು ಮಾಜಿ ಸಂಸದ ಬಿ.ಎನ್‌.
ಚಂದ್ರಪ್ಪ ಹೇಳಿದರು. ಮುರುಘಾ ಮಠದಲ್ಲಿ ಗುರುವಾರ ಹಮಾಲಿ ಕಾರ್ಮಿಕರು, ಸೌಖ್ಯ ಸಮುದಾಯ ಸಂಸ್ಥೆ, ಸುಚೇತನ ನೆಟ್‌ ವರ್ಕ್‌ ಮೊದಲಾದ ಸಂಸ್ಥೆಗಳ 300 ಕುಟುಂಬಗಳಿಗೆ ದವಸ-ಧಾನ್ಯಗಳನ್ನು ವಿತರಿಸಿ ಮಾತನಾಡಿದರು. ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಮುಖ್ಯಮಂತ್ರಿಗಳಾದವರು ಶ್ರೀಮಠದ ಮಹತ್ತರ ಕಾರ್ಯಗಳ ಬಗ್ಗೆ ಮಾತನಾಡುತ್ತಾರೆ. ಇದೊಂದು ಅಪೂರ್ವ ಸಂದರ್ಭ ಎಂದರು.

Advertisement

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಮಧುಸೂದನ್‌ ಮಾತನಾಡಿ, ಇಡೀ ವಿಶ್ವವೇ ಕೊರೊನಾ ಸಮಸ್ಯೆಯಿಂದ ಬಳಲುತ್ತಿದೆ. ಲಾಕ್‌ಡೌನ್‌ ಆದಾಗಿನಿಂದ
ಜನಸಾಮಾನ್ಯರು, ಕಟ್ಟಡ ಕಾರ್ಮಿಕರು, ನಿರಾಶ್ರಿತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತೊಂದರೆಗೊಳಗಾದ ಜನರ ನೋವನ್ನು ಅರ್ಥೈಸಿಕೊಂಡು ಕಳೆದ ಒಂದು ತಿಂಗಳಿನಿಂದ ಶ್ರೀಮಠ ಅನೇಕ ಅಸಂಘಟಿತ ಸಮುದಾಯಗಳನ್ನು, ಅಸಹಾಯಕರನ್ನು ಗುರುತಿಸಿ ದವಸ-ಧಾನ್ಯ ವಿತರಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಡಾ| ಶಿವಮೂರ್ತಿ ಮುರುಘಾ ಶರಣರು ಉಪಸ್ಥಿತರಿದ್ದರು. ಸೌಖ್ಯ ಸಮುದಾಯ ಸಂಸ್ಥೆಯ ದೀಪಾ, ಹನುಮಲಿ ಷಣ್ಮುಖಪ್ಪ, ಎ.ಜೆ. ಪರಮಶಿವಯ್ಯ, ಎಂ.ಜಿ. ದೊರೆಸ್ವಾಮಿ, ವಕೀಲರಾದ ಉಮೇಶ್‌, ಪೈಲ್ವಾನ್‌ ತಿಪ್ಪೇಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next