Advertisement

ಡಯಾಲಿಸಿಸ್‌ ಕೇಂದ್ರಕ್ಕೆ ಪರಿಕರ ಕೊರತೆ

12:54 PM Apr 07, 2020 | Naveen |

ಚಿತ್ರದುರ್ಗ: ಕೋವಿಡ್‌ 19 ಮಹಾಮಾರಿಯ ಅವಾಂತರಕ್ಕೆ ಈಗ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿರುವ ರೋಗಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಲಾಕ್‌ಡೌನ್‌
ಘೋಷಣೆಯಾಗುತ್ತಲೇ ರಾಜ್ಯದ ಹಲವು ಜಿಲ್ಲಾ ಆಸ್ಪತ್ರೆಗಳ ಡಯಾಲಿಸಿಸ್‌ ಕೇಂದ್ರಗಳಿಗೆ ಅಗತ್ಯವಿರುವ ಹೆಪಾರಿನ್‌ ಇಂಜಕ್ಷನ್‌, ಸೋಡಿಯಂ ಬೈಕಾಬೊìನೆಟ್‌ ಮತ್ತಿತರೆ ಪರಿಕರಗಳ ಅಭಾವ ಸೃಷ್ಟಿಯಾಗುತ್ತಿದೆ.

Advertisement

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್‌ ಕೇಂದ್ರವೂ ಸೇರಿದಂತೆ ಜಿಲ್ಲೆಯಲ್ಲಿ ಪ್ರತಿದಿನ 200 ರೋಗಿಗಳು ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಾರೆ.
ಈ ಹಿಂದೆ ವಾರದಲ್ಲಿ ಮೂರು ದಿನ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದವರಿಗೆ ಈಗ ವಾರಕ್ಕೆ ಎರಡು ದಿನ ಮಾತ್ರ ಮಾಡಲಾಗುತ್ತಿದೆ. ರಾಜ್ಯದ 23 ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಸುಮಾರು 4500 ಜನ ಡಯಾಲಿಸಿಸ್‌ ಮಾಡಿಸಿಕೊಳ್ಳುವವರಿದ್ದಾರೆ. ಆದರೆ, ಕೆಲ ಜಿಲ್ಲೆಗಳಲ್ಲಿ ತಿಂಗಳಿಗೊಮ್ಮೆ ನಿಯಮಿತವಾಗಿ ಸರಬರಾಜಾಗಬೇಕಾದ ಅಗತ್ಯ ಔಷಧಿ, ಇಂಜಕ್ಷನ್‌ ಮತ್ತಿತರೆ ವಸ್ತುಗಳ ಬೆಲೆ ಏರಿಕೆಯಾಗಿದೆ.

ಸಕಾಲಕ್ಕೆ ಸಿಗುತ್ತಿಲ್ಲ. ಡಯಾಲಿಸಿಸ್‌ ರೋಗಿಗಳಿಗೆ ತೊಂದರೆಯಾಗದಂತೆ ಅಗತ್ಯ ಪರಿಕರಗಳನ್ನು ತರಿಸಿಕೊಳ್ಳುವಂತೆ ಮಾ.26ರಂದು ಆರೋಗ್ಯ ಇಲಾಖೆ ಸುತ್ತೋಲೆಯನ್ನೂ ಹೊರಡಿಸಿದೆ. ಆದರೆ, ಔಷಧಗಳ ಸಮಸ್ಯೆಗೆ ಪರಿಹಾರ ಮಾತ್ರ ಸಿಗುತ್ತಿಲ್ಲ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಡಯಾಲಿಸಿಸ್‌
ಕೇಂದ್ರಗಳನ್ನು ಪಿಪಿಪಿ ಮಾದರಿಯಲ್ಲಿ ಎರಡು ಖಾಸಗಿ ಕಂಪನಿಗಳು ನಡೆಸುತ್ತಿವೆ. ಚಿತ್ರದುರ್ಗ ಕೇಂದ್ರವನ್ನು ಬಿಆರ್‌ಎಸ್‌ ಎಂಬ ಸಂಸ್ಥೆ ನೋಡಿಕೊಳ್ಳುತ್ತಿದೆ. ಇಲ್ಲಿ ಕಳೆದ 15 ದಿನಗಳಿಂದ ಅಗತ್ಯ ಪರಿಕರಗಳ ಸಮಸ್ಯೆ ಸೃಷ್ಟಿಯಾಗಿದೆ.

ಒಂದು ವೇಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ನಿಂತು ಹೋದರೆ ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿಸಿಕೊಳ್ಳಲು ಅಷ್ಟು ಪ್ರಮಾಣದ ಯಂತ್ರಗಳಿಲ್ಲ.
ಜಿಲ್ಲೆಯಲ್ಲಿ 200 ಜನ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ 20 ಯಂತ್ರಗಳಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 11 ಯಂತ್ರಗಳು ಮಾತ್ರ ಇವೆ. ಒಂದು ವೇಳೆ ಖಾಸಗಿಯಲ್ಲಿ ಮಾಡಿಸಿಕೊಳ್ಳುವುದು ಆದರೆ ದಿನದ 24 ಗಂಟೆಯೂ ಡಯಾಲಿಸಿಸ್‌ ಮಾಡಿದರೂ ಸಾಕಾಗುವುದಿಲ್ಲ. ಈ ಹಿನ್ನೆಲೆಯಲ್ಲಿ
ಜಿಲ್ಲಾಡಳಿತ, ಆರೋಗ್ಯ ಇಲಾಖೆ ತû ಡಯಾಲಿಸಿಸ್‌ಗೆ ಬೇಕಾಗುವ ಹೆಪ್ರಾಯಿನ್‌ ಮತ್ತಿತರೆ ಪರಿಕರ ಸರಬರಾಜಾಗುತ್ತಿಲ್ಲ. ಬೆಂಗಳೂರು ಹಾಗೂ ಗಂಗಾವತಿ ಎರಡು ಕಡೆಗಳಲ್ಲಿ ಸಿಗುತ್ತಿದೆ. ಗುತ್ತಿಗೆದಾರರು ಇಂಡೆಂಟ್‌ ಕೊಟ್ಟು ತರಿಸುವುದಾದರೆ ನಾವು ವಾಹನದ ವ್ಯವಸ್ಥೆ ಮಾಡಿಕೊಡಲು ಸಿದ್ಧರಿದ್ದೇವೆ. ಈ ಬಗ್ಗೆ ಸಂಬಂಧಪಟ್ಟವರ ಜತೆ ಚರ್ಚಿಸುತ್ತೇನೆ.
ಡಾ| ಪಾಲಾಕ್ಷ, ಡಿಎಚ್‌ಒ ಚಿತ್ರದುರ್ಗ

ತಿಪ್ಪೇಸ್ವಾಮಿ ನಾಕೀಕೆರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next