Advertisement

ಕೈ ಜಾರಿತೇ ಕೆಎಸ್ಸಾರ್ಟಿಸಿ ವಿಭಾಗೀಯ ಕಚೇರಿ?

12:20 PM Jun 03, 2019 | Naveen |

ಹರಿಯಬ್ಬೆ ಹೆಂಜಾರಪ್ಪ
ಚಿತ್ರದುರ್ಗ:
ಹಲವು ಹೋರಾಟಗಳ ಮೂಲಕ ಪಡೆದಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿತ್ರದುರ್ಗ ವಿಭಾಗೀಯ ಕಚೇರಿ ಮಧ್ಯ ಕರ್ನಾಟಕದ ಚಿತ್ರದುರ್ಗದಿಂದ ಕೈ ಜಾರುವ ಸಾಧ್ಯತೆ ನಿಚ್ಚಳವಾಗಿದೆ.

Advertisement

ತುಮಕೂರು ಜಿಲ್ಲೆಯ ಶಿರಾ ಘಟಕವನ್ನು ಚಿತ್ರದುರ್ಗ ವಿಭಾಗದಿಂದ ಮತ್ತೆ ತುಮಕೂರು ವಿಭಾಗಕ್ಕೆ ಮರು ಸೇರ್ಪಡೆ ಮಾಡಲು ತೀರ್ಮಾನಿಸಲಾಗಿದ್ದು, ಶಿರಾ ಘಟಕ ವಾಪಸ್‌ ತುಮಕೂರು ವಿಭಾಗವನ್ನು ಸೇರಿಕೊಳ್ಳುವುದರಿಂದ ಚಿತ್ರದುರ್ಗ ವಿಭಾಗ ಅಡಗತ್ತರಿಯಲ್ಲಿ ಸಿಲುಕಿದಂತಾಗಿದೆ.

ಕೆಎಸ್ಸಾರ್ಟಿಸಿ ಸಂಸ್ಥೆ ಅಧ್ಯಕ್ಷ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಸತ್ಯನಾರಾಯಣ ಅಧ್ಯಕ್ಷತೆಯಲ್ಲಿ ಮೇ-28 ರಂದು ನಡೆದ ಕೆಎಸ್ಸಾರ್ಟಿಸಿ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಚಿತ್ರದುರ್ಗ ವಿಭಾಗದಿಂದ ಶಿರಾ ಘಟಕವನ್ನು ವಾಪಸ್‌ ಪಡೆದು ತುಮಕೂರು ವಿಭಾಗಕ್ಕೆ ಮರು ಸೇರ್ಪಡೆ ಮಾಡುವ ಆದೇಶ ಹೊರ ಬಿದ್ದಿದೆ. ಇದರ ಜೊತೆಯಲ್ಲಿ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ತರಬೇತಿ ಕೇಂದ್ರ ಆರಂಭಿಸಲು ಒಪ್ಪಿಗೆ ನೀಡಲಾಗಿದೆ. ಇದರಿಂದಾಗಿ ಚಿತ್ರದುರ್ಗ ವಿಭಾಗ ಆಡಳಿತಾತ್ಮಕ ಮತ್ತು ಆರ್ಥಿಕ ಹಿತದೃಷ್ಟಿಯಿಂದ ಸಾಧುವಲ್ಲ ಎನ್ನುವ ತೀರ್ಮಾನಕ್ಕೆ ಸರ್ಕಾರ ಬಂದಂತಿದೆ.

ಬಯಲುಸೀಮೆ ಜನತೆಯ ಹೋರಾಟದ ಫಲವಾಗಿ 2017ರ ಮೇ 11 ರಂದು ಚಿತ್ರದುರ್ಗ ವಿಭಾಗೀಯ ಕಚೇರಿಯನ್ನು ಪಡೆಯಲಾಗಿತ್ತು. ಇದಕ್ಕೆ ಒತ್ತಾಸೆಯಾಗಿ ನಿಂತವರು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ. ಅವರಿಬ್ಬರ ಇಚ್ಛಾಶಕ್ತಿಯಿಂದಾಗಿ ಚಿತ್ರದುರ್ಗ ವಿಭಾಗವನ್ನು ಆರಂಭಿಸಲಾಯಿತು. ದಾವಣಗೆರೆ ಮತ್ತು ತುಮಕೂರು ವಿಭಾಗೀಯ ಕಚೇರಿಗಳನ್ನು ವಿಭಾಗಿಸಿ ಪ್ರತ್ಯೇಕ ಚಿತ್ರದುರ್ಗ ವಿಭಾಗವನ್ನು ನೀಡಲಾಯಿತು.

ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ಡಿಪೋಗಳನ್ನು ಸೇರಿಸಿಕೊಂಡು ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತುಮಕೂರು ಜಿಲ್ಲೆಯ ಶಿರಾ, ಪಾವಗಡ ಘಟಕಗಳನ್ನು ಚಿತ್ರದುರ್ಗ ವಿಭಾಗಕ್ಕೆ ಸೇರಿಸಿ ವಿಭಾಗ ತೆರೆಯಲಾಯಿತು. ಆದರೆ ಶಿರಾ ಘಟಕ ವಾಪಸ್‌ ತವರು ಜಿಲ್ಲೆಗೆ ಹೋಗುತ್ತಿರುವುದರಿಂದ ಕಡಿಮೆ ಘಟಕಗಳ ನೆಪವೊಡ್ಡಿ ಅಥವಾ ವಿಭಾಗೀಯ ಕಚೇರಿ ಚಿಕ್ಕದಾಯಿತು, ವಿಭಾಗೀಯ ಕಚೇರಿ ಹೊಂದಲು ಇರಬೇಕಾದ ಬಸ್‌ ಗಳ ಸಂಖ್ಯೆ, ಮಾರ್ಗಗಳು, ಮಾನದಂಡಗಳ ಕೊರತೆ ಕಾಡುವುದರಿಂದ ಚಿತ್ರದುರ್ಗ ವಿಭಾಗ ಆರಂಭವಾದ ವೇಗದಷ್ಟೇ ಮುಚ್ಚುವ ಸಾಧ್ಯತೆ ಹೆಚ್ಚಿದೆ.

Advertisement

ಶಿರಾ ಘಟಕವನ್ನು ಇಲ್ಲಿಯೇ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೆಎಸ್ಸಾರ್ಟಿಸಿ ನಿಗಮದ ಅಧ್ಯಕ್ಷರಾಗಿರುವ ಶಿರಾ ಶಾಸಕ ಬಿ. ಸತ್ಯನಾರಾಯಣ ತೀರ್ಮಾನ ಕೈಗೊಂಡಿರುವುದರಿಂದ ಇದನ್ನು ಉಳಿಸಲು ಯಾರಿಂದಲೂ

ಸಾಧ್ಯವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ತುಮಕೂರು ಜಿಲ್ಲೆಯ ಪಾವಗಡ ಕ್ಷೇತ್ರದವರಾಗಿದ್ದಾರೆ. ಅವರು ಪಾವಗಡ ಘಟಕವನ್ನು ವಾಪಸ್‌ ತುಮಕೂರು ಜಿಲ್ಲೆಗೆ ತೆಗೆದುಕೊಂಡು ಹೋದರೆ ಅಲ್ಲಿಗೆ ಚಿತ್ರದುರ್ಗ ವಿಭಾಗೀಯ ಕಚೇರಿಗೆ ಬೀಗಮುದ್ರೆ ಖಾತ್ರಿ.

ಶಿರಾ ಘಟಕವನ್ನು ಇಲ್ಲಿಯೇ ಉಳಿಸಲು ಏನು ಮಾಡಬಹುದು?
ಕೆಎಸ್ಸಾರ್ಟಿಸಿ ವಿಭಾಗೀಯ ಕಚೇರಿಯನ್ನು ಉಳಿಸಬೇಕಾದರೆ ಶಿರಾ ಘಟಕ ಇಲ್ಲಿಯೇ ಉಳಿಯಬೇಕು. ಶಿರಾ ಘಟಕ ಉಳಿಸಲು ಸಾಧ್ಯವಾಗದಿದ್ದಲ್ಲಿ ಕನಿಷ್ಠ ಹಿರಿಯೂರು, ಹೊಳಲ್ಕೆರೆ, ಮೊಳಕಾಲ್ಮೂರು ತಾಲೂಕುಗಳಲ್ಲಿ ನೂತನ ಘಟಕಗಳನ್ನು ಆರಂಭಿಸಬೇಕು. ನೂತನ ಘಟಕಗಳು ಆರಂಭವಾದ ನಂತರ ಶಿರಾ ಘಟಕ ತವರು ಜಿಲ್ಲೆಗೆ ವಾಪಸ್‌ ಹೋದರೂ ಆಗ ಚಿತ್ರದುರ್ಗ ವಿಭಾಗೀಯ ಕಚೇರಿಗೆ ಯಾವುದೇ ಆತಂಕ ಇರುವುದಿಲ್ಲ.

ಆಡಳಿತದ ದೃಷ್ಟಿಯಿಂದ ಚಿತ್ರದುರ್ಗ ಜಿಲ್ಲೆಯ ಮೂರು ಘಟಕಗಳು, ತುಮಕೂರು ಜಿಲ್ಲೆಯ ಶಿರಾ, ಪಾವಗಡ ಘಟಕಗಳನ್ನು ಇಲ್ಲಿಯೇ ಉಳಿಸಲು ಜಿಲ್ಲೆಯ ಜನ ಹೋರಾಟ ಮಾಡಬೇಕಿದೆ. ಚಿತ್ರದುರ್ಗ ವಿಭಾಗದಲ್ಲೇ ಶಿರಾ ಘಟಕ ಉಳಿಸಬೇಕು ಮತ್ತು ತರಬೇತಿ ಕೇಂದ್ರ ಆರಂಭಿಸುವಂತೆ ಈಗಾಗಲೇ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ರೈತ ಸಂಘ ಹಾಗೂ ಅಹಿಂದ ಒಕ್ಕೂಟದವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next