Advertisement

Chitradurga: ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆ; 2019ರಲ್ಲೇ ಸತ್ತಿರುವ ಶಂಕೆ!

11:10 AM Dec 29, 2023 | Team Udayavani |

ಚಿತ್ರದುರ್ಗ: ನಗರದ ಹಳೇ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯೊಂದರಲ್ಲಿ ಐವರ ಮೃತ ದೇಹಗಳು ಮೂಳೆಗಳ ರೀತಿಯಲ್ಲಿ ಪತ್ತೆಯಾಗಿವೆ.

Advertisement

ಗುರುವಾರ ರಾತ್ರಿ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಈ ವಿಷಯ ಗೊತ್ತಾಗಿದೆ. ತಡರಾತ್ರಿಯಲ್ಲೇ ಸ್ಥಳಕ್ಕೆ ವಿಧಿ ವಿಜ್ಞಾನ ತಜ್ಞರು ಆಗಮಿಸಿ ಶವಗಳ ಮಾದರಿಗಳನ್ನು ಸಂಗ್ರಹ ಮಾಡಿದ್ದಾರೆ.

ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ ಎಂಬುವವರಿಗೆ ಈ ಮನೆ ಸೇರಿದ್ದು, ಹಲವು ವರ್ಷಗಳಿಂದ ಜಗನ್ನಾಥ ರೆಡ್ಡಿ ಕುಟುಂಬ ಎಲ್ಲಿಯೂ ಕಂಡು ಬಂದಿಲ್ಲ ಎಂದು ಸಂಬಂಧಿಕರು, ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಿಂದ ಈ  ಮನೆಯ ಬಾಗಿಲು ತೆರೆದಿರಲಿಲ್ಲ. 2019 ರಲ್ಲಿ ಮನೆಯಿಂದ ವಾಸನೆ ಬಂದಿತ್ತು, ಇಲಿ ಸತ್ತಿರಬಹುದು ಎಂದು ಜನ ಸುಮ್ಮನಾಗಿದ್ದಾರೆ.

ಇದನ್ನೂ ಓದಿ:Jharkhand: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಡಿಸಿ-ಎಸ್ಪಿ ಕಚೇರಿಯ ಇಬ್ಬರು ಚಾಲಕರು ಅರೆಸ್ಟ್

Advertisement

ಇತ್ತೀಚೆಗೆ ಕಳ್ಳತನ ಮಾಡಲು ಮನೆಯ ಹಿಂದಿನ ಬಾಗಿಲು ಒಡೆಯಲಾಗಿದೆ. ಆನಂತರ ಯಾರೋ ಮನೆಗೆ ಭೇಟಿ ನೀಡಿದ್ದಾಗ ಶವಗಳು ಪತ್ತೆಯಾಗಿವೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ಆರಂಭವಾಗಿದೆ.

ಈ ಮನೆಯಲ್ಲಿ ಸುಮಾರು 80 ವರ್ಷದ ಜಗನ್ನಾಥ ರೆಡ್ಡಿ, ಅವರ ಪತ್ನಿ ಸುಮಾರು 70 ವರ್ಷದ ಪ್ರೇಮಾ, ಇವರ ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣರೆಡ್ಡಿ, ನರೇಂದ್ರ ರೆಡ್ಡಿ ವಾಸವಿದ್ದರು. ಇವರ ಹಿರಿಯ ಪುತ್ರ ಮಂಜುನಾಥ ರೆಡ್ಡಿ ಎಂಬುವವರು ಹಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜಗನ್ನಾಥ ರೆಡ್ಡಿ ಅವರ ಸಂಬಂಧಿಕರಾದ ಪವನ್ ಕುಮಾರ್ ಎಂಬುವವರು ಘಟನೆ ಬೆಳಕಿಗೆ ಬಂದ ನಂತರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next