Advertisement

ಐಸಿಎಂಆರ್‌ನಿಂದ 400 ರಕ್ತ ಮಾದರಿ ಸಂಗ್ರಹ

06:29 PM May 17, 2020 | Naveen |

ಚಿತ್ರದುರ್ಗ: ಕೋವಿಡ್ ವೈರಸ್‌ ಸಮುದಾಯದಲ್ಲಿ ಹರಡಿರಬಹುದಾದ ಸಾಧ್ಯತೆ ಕುರಿತು ಪರಿಶೀಲನೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ವತಿಯಿಂದ ಜಿಲ್ಲೆಯಲ್ಲಿ 400 ರಕ್ತದ ಮಾದರಿಗಳನ್ನು ಸಂಗ್ರಹಿಸಲಾಯಿತು.

Advertisement

ಶನಿವಾರ ನಡೆದ ನ್ಯಾಷನಲ್‌ ಸಿರೋ ಸರ್ವೆಲೆನ್ಸ್‌ ಫಾರ್‌ ಕೋವಿಡ್‌-19 ಸಮೀಕ್ಷೆಯಲ್ಲಿ ಜಿಲ್ಲೆಯ ಹತ್ತು ಸ್ಥಳಗಳನ್ನು ಗುರುತಿಸಿ ಮಾದರಿಗಳನ್ನು ಸಂಗ್ರಹಿಸಲಾಯಿತು. ರಾಜ್ಯದಲ್ಲಿ ಇಂತಹ ಸಮೀಕ್ಷೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಚಿತ್ರದುರ್ಗ, ಬೆಂಗಳೂರು ನಗರ ಹಾಗೂ ಕಲಬುರಗಿ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿತ್ತು ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಧಿಕಾರಿ ಹಾಗೂ ಸಮೀಕ್ಷಾ ಕಾರ್ಯದ ನೋಡಲ್‌ ಅಧಿಕಾರಿ ಡಾ| ರಂಗನಾಥ್‌ ತಿಳಿಸಿದ್ದಾರೆ.

ಸಮೀಕ್ಷೆಗೆ ಕಂದಾಯ, ಪೊಲೀಸ್‌, ಆರ್‌ಡಿಪಿಆರ್‌ ಹಾಗೂ ಆರೋಗ್ಯ ಇಲಾಖೆಗಳು ಸಹಕಾರ ನೀಡಿದ್ದವು. ಜನರಲ್ಲಿ ಕೋವಿಡ್‌-19 ವೈರಸ್‌ ಸೋಂಕು ಕುರಿತು ಜಾಗೃತಿ ಮೂಡಿದ್ದು, ಸೋಂಕು ಹರಡದಂತೆ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿರುವುದು ಸಮೀಕ್ಷೆ ಸಂದರ್ಭದಲ್ಲಿ ಕಂಡುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ತಂಡದ ಅಧಿಕಾರಿಗಳು ,ಸಮೀಕ್ಷಾ ಕಾರ್ಯಕ್ಕೆ ಕೈಗೊಂಡ ಸಿದ್ಧತಾ ಕ್ರಮಗಳು ಹಾಗೂ ಇಲ್ಲಿನ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಕ್ತ ಮಾದರಿ ಸಂಗ್ರಹಕ್ಕೆ ಐಸಿಎಂಆರ್‌-ಎನ್‌ ಐಆರ್‌ಟಿಯ ತಂಡ ಹಾಗೂ ಸ್ಥಳೀಯ ಆರೋಗ್ಯ ಕೇಂದ್ರ ಪ್ರಯೋಗಶಾಲಾ ತಂತ್ರಜ್ಞರನ್ನು ನಿಯೋಜಿಸಲಾಗಿತ್ತು. ಐಸಿಎಂಆರ್‌ನ ವಿಜ್ಞಾನಿಗಳು, ರಾಜ್ಯ ಮಟ್ಟದ ಸರ್ವೇಕ್ಷಣಾ ಧಿಕಾರಿಗಳು, ನೋಡಲ್‌ ಅಧಿಕಾರಿಗಳು, ವಿಶ್ವಆರೋಗ್ಯ ಸಂಸ್ಥೆಯ ಸಲಹೆಗಾರರು ಸಮೀಕ್ಷೆ ಕಾರ್ಯಚಟುವಟಿಕೆಯ ಮೇಲುಸ್ತುವಾರಿ ವಹಿಸಿದ್ದರು.ಚಿತ್ರದುರ್ಗ ತಾಲೂಕಿನ ವಡ್ಡನಹಳ್ಳಿ, ಚಳ್ಳಕೆರೆ ತಾಲೂಕಿನ ಘಟಪರ್ತಿ, ಪರಶುರಾಂಪುರ ಹಾಗೂ ಚಳ್ಳಕೆರೆ ನಗರದ ವಾರ್ಡ್‌ ಸಂಖ್ಯೆ 22, ಹಿರಿಯೂರು ತಾಲೂಕಿನ ಭರಮಗಿರಿ, ಹೊಳಲ್ಕೆರೆ ಪಟ್ಟಣದ ವಾರ್ಡ್‌ ಸಂಖ್ಯೆ 5, ಹಿರೇಕಂದವಾಡಿ, ಹೊಸದುರ್ಗ ತಾಲೂಕಿನ ತುಂಬಿನಕೆರೆ, ಹಾಗಲಕೆರೆ ಹಾಗೂ ಮೊಳಕಾಲ್ಮೂರು ತಾಲೂಕಿನ ಕಾಟನಾಯಕನಹಟ್ಟಿ ಸೇರಿದಂತೆ 10 ಸ್ಥಳಗಳಲ್ಲಿ ಮಾದರಿ ಸಂಗ್ರಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next