Advertisement
ನಗರದ ಭದ್ರಾ ಮೇಲ್ದಂಡೆ ಯೋಜನೆ ಕಚೇರಿ ಸಭಾಂಗಣದಲ್ಲಿ ಗುರುವಾರ ಕಾಮಗಾರಿಗೆ ಸಂಬಂಧಿಸಿದಂತೆ ರೈತರಿಗೆ ಪರಿಹಾರ ಹಾಗೂ ಭೂಸ್ವಾಧೀನ ಕುರಿತು ಚರ್ಚಿಸಲು ಸಭೆ ಕರೆಯಲಾಗಿತ್ತು. ಎಲ್ಲೆಲ್ಲಿ-ಎಷ್ಟೆಷ್ಟು ಎಕರೆ ಸ್ವಾ ಧೀನ: ಚಿತ್ರದುರ್ಗ ಶಾಖಾ ಕಾಲುವೆಯ 10ನೇ ಪ್ಯಾಕೇಜ್‌ಗೆ ಭರಂಪುರ ವ್ಯಾಪ್ತಿಯಲ್ಲಿ 17 ಎಕರೆ, ಪಾಲವ್ವನಹಳ್ಳಿ- 58.35 ಎಕರೆ, ಮರಡಿದೇವಿಗೆರೆ-74.12, ಚಿಕ್ಕಸಿದ್ದವ್ವನಹಳ್ಳಿ-74.19, ದೊಡ್ಡಸಿದ್ದವ್ವನಹಳ್ಳಿ-28.08. ಪ್ಯಾಕೇಜ್ 11ರಲ್ಲಿ ದೊಡ್ಡಸಿದ್ದವ್ವನಹಳ್ಳಿ-111.03, ಕುಂಚಿಗನಾಳ್-17.27, ದ್ಯಾಮವ್ವನಹಳ್ಳಿ-2.05, ಗೋನೂರು 58.25 ಎಕರೆ ಸೇರಿ ಒಟ್ಟು 189.20 ಎಕರೆ ಭೂಸ್ವಾಧೀನಕ್ಕೆ 2018 ರ ಆಗಸ್ಟ್ 22ರಂದು ಅಧಿ ಸೂಚನೆ ಹೊರಡಿಸಲಾಗಿದೆ.
ಅಧಿ ಸೂಚನೆ ಹೊರಡಿಸಿದೆ. ಡೀಮ್ಡ್ ಅರಣ್ಯಕ್ಕೆ ಬೇಕು. ಪರ್ಯಾಯ ಭೂಮಿ: ದ್ವಾಮವ್ವನಹಳ್ಳಿ ವ್ಯಾಪ್ತಿಯಲ್ಲಿ 33 ಎಕರೆ ಡೀಮ್ಡ್ ಅರಣ್ಯ ಪ್ರದೇಶ ಭೂಸ್ವಾ ಧೀನ ಆಗಬೇಕಿದ್ದು, ಇಷ್ಟೇ
ವಿಸ್ತೀರ್ಣದ ಪರ್ಯಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದಲ್ಲಿ ಮಾತ್ರ ಡೀಮ್ಡ್ ಅರಣ್ಯ ಪ್ರದೇಶವನ್ನು ಕಾಮಗಾರಿಗೆ ಹಸ್ತಾಂತರಿಸುವ ಬಗ್ಗೆ ಅರಣ್ಯ ಇಲಾಖೆ ಷರತ್ತು ವಿಧಿಸಿದೆ. ಈ ದಿಸೆಯಲ್ಲಿ ಕಂದಾಯ ಇಲಾಖೆಯೊಂದಿಗೆ ಪತ್ರ ವ್ಯವಹಾರ ಮಾಡಲಾಗಿದೆ ಎಂದು ಕಾರ್ಯಪಾಲಕ ಅಭಿಯಂತರ ಶ್ರೀಧರ್ ತಿಳಿಸಿದರು.
Related Articles
Advertisement
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಗುತ್ತಿಗೆದಾರರು, ರೈತರೊಂದಿಗಿನ ಒಪ್ಪಂದದಂತೆ ಬೆಳೆ ಪರಿಹಾರ ಕೊಟ್ಟುಕೊಂಡಿದ್ದಾರೆ. ಇದು ಇಲಾಖೆಯಿಂದ ನೀಡಿದ ಪರಿಹಾರವಲ್ಲ. ಇನ್ನು ಯಾವುದೇ ಕಾರಣಕ್ಕೂ ವಿಳಂಬಕ್ಕೆ ಅವಕಾಶ ಕೊಡದೆ, ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದರು.
ಜಮೀನಿನ ದಾಖಲೆಗಳ ಸಂಗ್ರಹವೇ ತ್ರಾಸು: ಕಾಮಗಾರಿಗೆ ಭೂ ಸ್ವಾಧೀನ ಪ್ರಕ್ರಿಯೆ ವಿಳಂಭವಾಗುತ್ತಿದ್ದು, ಇದಕ್ಕೆ ಕಾರಣ ಕೆಲ ಜಮೀನುಗಳ ದಾಖಲೆಗಳೇ ಸಿಗುತ್ತಿಲ್ಲ ಎಂದು ಯೋಜನೆಯ ಕಾರ್ಯಪಾಲಕ ಇಂಜಿನಿಯರ್ ಸೋಮಶೇಖರ್ ತಿಳಿಸಿದರು.
ಕೆಲ ದರಖಾಸ್ತು ಜಮೀನುಗಳಿಗೆ 1953 ರಿಂದ ದಾಖಲೆ ಸಂಗ್ರಹಿಸಬೇಕಿದೆ. ಆಕರ ಬಂದ್ ಪಹಣಿ ಮತ್ತಿತರೆ ದಾಖಲೆಗಳು ಹೊಂದಾಣಿಕೆ ಆಗುತ್ತಿಲ್ಲ. ಕೆಲ ರೈತರ ಜಂಟಿ ಪಹಣಿಗಳಿದ್ದು, ಪ್ರತ್ಯೇಕ ಸರ್ವೇ ಮಾಡಿಸಿ ಸ್ಕೆಚ್ ತಯಾರಿಸಿ ಪಹಣಿ ತರಿಸಿಕೊಳ್ಳಬೇಕಾಗಿದೆ. ಈ ಎಲ್ಲಾ ಕೆಲಸಗಳಿಗೆ ಸರ್ವೇ ಅಧಿಕಾರಿಗಳನ್ನು ಪದೇ ಪದೇ ರೈತರ ಜಮೀನಿಗೆ ಕರೆದೊಯ್ಯುವ ಕೆಲಸ ಆಗುತ್ತಿದೆ. ಇನ್ನೂ ಹತ್ತು ಪಹಣಿಗಳು ಸಿಕ್ಕಿದ ತಕ್ಷಣ ಭರಂಪುರದಿಂದ ಪಾಲವ್ವನಹಳ್ಳಿವರೆಗೆ 11/1 ನೋಟಿಫಿಕೇಶನ್ಹೊರಡಿಸಲಾಗುವುದು ಎಂದು ಮಾಹಿತಿ ನೀಡಿದರು. ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಶಿವಕುಮಾರ್, ಅಧಿಕಾರಿಗಳಾದ ಸತ್ಯನಾರಾಯಣ, ಕಲಾವತಿ, ಕುಲಕರ್ಣಿ, ವೆಂಕಟೇಶ್, ತಿಪ್ಪೇರುದ್ರಪ್ಪ, ಶ್ರೀಧರ್, ರಾಮಚಂದ್ರ, ರೈತ ಮುಖಂಡರಾದ ನುಲೇನೂರು ಎಂ. ಶಂಕ್ರಪ್ಪ, ಕೊಂಚೆ ಶಿವರುದ್ರಪ್ಪ, ಬಸ್ತಿಹಳ್ಳಿ ಸುರೇಶ್ ಬಾಬು, ಮಂಜುಳಾ ಡಾ| ಸ್ವಾಮಿ
ಮತ್ತಿತರರು ಉಪಸ್ಥಿತರಿದ್ದರು.