Advertisement

ಕುಂದು ಕೊರತೆ ಆಲಿಕೆಗೆ ಶಿಕ್ಷಕರ ನೇಮಕ

11:40 AM Apr 12, 2020 | Naveen |

ಚಿತ್ರದುರ್ಗ: ಲಾಕ್‌ಡೌನ್‌ ಸಂದರ್ಭದಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ, ಸೂಕ್ತ ಕ್ರಮ ಕೈಗೊಳ್ಳುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲಾ ಕಂದಾಯ ಗ್ರಾಮಗಳು ಹಾಗೂ ನಗರ ಪ್ರದೇಶದ ವಾರ್ಡ್ ಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನಿಯೋಜಿಸಲಾಗಿದೆ.

Advertisement

ಪ್ರತಿ ಊರಿನ ಪ್ರಮುಖ ಸ್ಥಳದಲ್ಲಿ ಶಿಕ್ಷಕರು ಕುಳಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದು, ಏ.4ರಿಂದ ಈ ಕೆಲಸ ಆರಂಭವಾಗಿದೆ. ದೂರುದಾರರ
ಹೆಸರು, ಊರು, ಸಾರ್ವಜನಿಕರು ನೀಡುವ ಮಾಹಿತಿ ಸಂಬಂಧಪಟ್ಟ ಇಲಾಖೆಯಿಂದ ಕಲೆ ಹಾಕಲಾಗುತ್ತದೆ. ಅದರಲ್ಲಿನ ದೂರುಗಳಿಗೆ ಅನುಗುಣವಾಗಿ ಮೇಲಾಧಿಕಾರಿಗಳಿಗೆ ಅಹವಾಲು ರವಾನಿಸಲಾಗುತ್ತದೆ. ಆಹಾರ ಪದಾರ್ಥ ವಿತರಣೆ, ಕುಡಿಯುವ ನೀರು ಸರಬರಾಜು ಹಾಗೂ ವೈದ್ಯಕೀಯ ಸೇವೆಗಳಿಗೆ ಸಂಬಂ  ಧಿಸಿದ ದೂರು ಸ್ವೀಕರಿಸಲಾಗುತ್ತಿದೆ.

ಜಿಲ್ಲೆಯ 6 ತಾಲೂಕಿನಲ್ಲೂ ಶಿಕ್ಷಕರನ್ನು ನಿಯೋಜಿಸಿದ್ದು, ಒಂದೊಂದು ತಾಲೂಕಿನಲ್ಲಿ ಸುಮಾರು 200-250 ಜನ ಶಿಕ್ಷಕರು ಒಂದು ವಾರದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಪಡಿತರ ವ್ಯವಸ್ಥೆ, ಔಷಧಿ, ತರಕಾರಿ, ದಿನಸಿ ಪದಾರ್ಥಗಳು, ಕೋವಿಡ್‌-19 ಸೋಂಕು ಲಕ್ಷಣಗಳು ಕಂಡು ಬಂದಲ್ಲಿ ಅಂತಹವರಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ, ವೈದ್ಯಕೀಯ ಸೇವೆಗಳು, ರೈತರ ಸಮಸ್ಯೆ, ಡಯಾಬಿಟೀಸ್‌, ಅಸ್ತಮಾ, ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಸರ್ಕಾರದಿಂದ ನೀಡಲಾಗುವ ಉಚಿತ ಔಷಧಿಗಳ ವಿತರಣೆ, ಆಹಾರ ಪದಾರ್ಥಗಳ ವಿತರಣೆಗೆ ಸಂಬಂಧಿ ಸಿದಂತೆ ಹತ್ತು ಹಲವಾರು ಕುಂದು ಕೊರತೆ ಸ್ವೀಕರಿಸಿ, ಅವರ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ಶಿಕ್ಷಕರು ನಿರತರಾಗಿದ್ದಾರೆ.

ಕೋವಿಡ್‌-19 ಹರಡುವಿಕೆ, ರೋಗ ಲಕ್ಷಣಗಳು, ಸೋಂಕು ಹರಡುವಿಕೆ ತಡಗಟ್ಟಲು ಮುಂಜಾಗ್ರತಾ ಕ್ರಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರು ಯಾವುದೇ ಸಭೆ, ಸಮಾರಂಭ ಸೇರದಂತೆ ಎಚ್ಚರ ವಹಿಸಲಾಗಿದೆ. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಆಗಾಗ್ಗೆ ಸಾಬೂನಿನಿಂದ ಅಥವಾ ಅಲ್ಕೋಹಾಲ್‌ ಯುಕ್ತ ಹ್ಯಾಂಡ್‌ ಸ್ಯಾನಿಟೈಸರ್‌ನಿಂದ ಕೈತೊಳೆದುಕೊಳ್ಳುವಂತೆ, ಸಾರ್ವಜನಿಕರು ಸ್ವಚ್ಛತೆ ಕಾಪಾಡಿಕೊಳ್ಳುವುದರ ಕುರಿತು ಮನವಿ ಮಾಡುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಕಂದಾಯ ಗ್ರಾಮಗಳು ಹಾಗೂ ನಗರ ಪ್ರದೇಶದ ವಾರ್ಡ್‌ಗಳಲ್ಲಿ ನಿಯೋಜಿಸಿರುವ ಶಿಕ್ಷಕರು ಹಾಗೂ ಬಿಎಲ್‌ಒಗಳು ತಮ್ಮ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿ, ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಂಡ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ವರದಿ ಸಲ್ಲಿಸಲಿದ್ದಾರೆ.

ಕೋವಿಡ್‌-19 ಹರಡುವಿಕೆ ತಡೆಗಟ್ಟಲು ಲಾಕ್‌ಡೌನ್‌ ಜಾರಿಯಲಿದೆ. ಈ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳಿಗೆ ಶಿಕ್ಷಕರು 21 ದಿನದ ಬಿಸಿಯೂಟದ ಆಹಾರ ಸಾಮಾಗ್ರಿಗಳನ್ನು ತಲುಪಿಸುತ್ತಿದ್ದಾರೆ. ಇದರ ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಆಡಳಿತ ವ್ಯವಸ್ಥೆಯ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ.
ಕೆ.ರವಿಶಂಕರ ರೆಡ್ಡಿ,
ಡಿಡಿಪಿಐ ಚಿತ್ರದುರ್ಗ

Advertisement

ಶಿಕ್ಷಕರು, ಆಶಾ ಕಾರ್ಯಕರ್ತೆಯರ ಜತೆಗೆ ಮನೆ ಮನೆಗೆ ಭೇಟಿ ನೀಡಿ ಕೋವಿಡ್‌ -19 ಹರಡುವಿಕೆ ತಡಗಟ್ಟುವ ಕುರಿತು ಮಾಹಿತಿ ನೀಡುತ್ತಿದ್ದಾರೆ.
ಸಾರ್ವಜನಿಕರಿಗೆ ತಮ್ಮ ಬಗ್ಗೆ ಇರುವ ಗೌರವವನ್ನು ಜಾಗೃತಿ ಮೂಡಿಸಲು ಬಳಸುತ್ತಿರುವುದು ಶ್ಲಾಘನೀಯ.
ಎಲ್‌.ಜಯಪ್ಪ,
ಬಿಇಒ ಹೊಸದುರ್ಗ

Advertisement

Udayavani is now on Telegram. Click here to join our channel and stay updated with the latest news.

Next