Advertisement

ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಪ್ರವಾಸಿಗರಿಗೆ ನಿರ್ಬಂಧ

05:28 PM Mar 16, 2020 | Naveen |

ಚಿತ್ರದುರ್ಗ: ಕೊರೊನಾ ವೈರಸ್‌ ಹರಡುವ ಭೀತಿ ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೂ ತಟ್ಟಿದ್ದು, ಅರಣ್ಯ ಇಲಾಖೆ ಮಾ. 23 ರವರೆಗೆ ಮೃಗಾಲಯಕ್ಕೆ ಪ್ರವಾಸಿಗರು ಬಾರದಂತೆ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಶನಿವಾರ ತೆರೆದಿದ್ದ ಮೃಗಾಲಯ ಭಾನುವಾರ ಮಧ್ಯಾಹ್ನದಿಂದ ಇದ್ದಕ್ಕಿದ್ದಂತೆ ಬಂದ್‌ ಆಗಿತ್ತು. ಆಡುಮಲ್ಲೇಶ್ವರ ಕಿರು ಮೃಗಾಲಯದ ಪ್ರವೇಶ ದ್ವಾರದಲ್ಲಿ “ಪ್ರವಾಸಿಗರಿಗೆ ಪ್ರವೇಶವಿಲ್ಲ’ ಎಂಬ ಫಲಕ ಹಾಕಲಾಗಿತ್ತು.

Advertisement

ಜತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಪ್ರವಾಸಿಗರನ್ನು ಪ್ರವೇಶ ದ್ವಾರದ ಬಳಿಯೇ ತಡೆದು ವಾಪಸ್‌ ಕಳಿಸುತ್ತಿದ್ದರು. ಕಿರು ಮೃಗಾಲಯಕ್ಕೆ ಪ್ರವಾಸಿಗರನ್ನು ನಿರ್ಬಂಧಿಸುವ ನಿರ್ಧಾರವನ್ನು ಸಚಿವಾಲಯ ಕೈಗೊಂಡಿದ್ದು, ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಒಂದು ವಾರ ಮೃಗಾಲಯಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಡಿಎಫ್‌ಒ ಚಂದ್ರಶೇಖರ ನಾಯಕ್‌ ತಿಳಿಸಿದ್ದಾರೆ.

ಶನಿವಾರ ಕಿರು ಮೃಗಾಲಯಕ್ಕೆ 97 ಪ್ರವಾಸಿಗರು ಮಾತ್ರ ಭೇಟಿ ನೀಡಿದ್ದರು. ಭಾನುವಾರ ಮಧ್ಯಾಹ್ನದವರೆಗೂ ತೆರೆದಿದ್ದರೂ ಯಾರೂ ಬಂದಿರಲಿಲ್ಲ. ಮಧ್ಯಾಹ್ನ 12 ಗಂಟೆ ನಂತರ ಸಂಪೂರ್ಣ ಬಂದ್‌ ಮಾಡಲಾಗಿದೆ. ಹಂಪಿ ಪ್ರವಾಸಕ್ಕೆ ಬರುವವರು ಚಿತ್ರದುರ್ಗಕ್ಕೂ ಬಂದು ಹೋಗುತ್ತಿದ್ದರು. ಈಗಾಗಲೇ ಹಂಪಿಯಲ್ಲೂ ನಿರ್ಬಂಧ ವಿಧಿ ಸಿದ್ದರಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲೂ ಇಳಿಮುಖವಾಗಿತ್ತು. ಶಾಲಾ-ಕಾಲೇಜುಗಳು, ಹೋಟೆಲ್‌, ಮಾಲ್‌, ಕ್ಲಬ್‌ಗಳಿಗೆ ಕೊರೊನಾ ಹಿನ್ನೆಲೆಯಲ್ಲಿ ರಜೆ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಸಹಜವಾಗಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next