Advertisement
ಇದು ಪುಂಡರು ಮಾಡುವ ದುಷ್ಕೃತ್ಯಕ್ಕೆಅ ಧಿಕೃತ ಮುದ್ರೆ ಒತ್ತಿದಂತೆ ಅನ್ನಿಸುತ್ತದೆ ಎಂದುಸಾಹಿತಿ ಬಂಜಗೆರೆ ಜಯಪ್ರಕಾಶ್ ಹೇಳಿದರು.ನಗರದ ಪತ್ರಿಕಾ ಭವನದಲ್ಲಿಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಕಳೆದ ಎರಡು ತಿಂಗಳಿನಿಂದ ರೈತರುಚಳಿಯನ್ನೂ ಲೆಕ್ಕಿಸದೆ ಪ್ರತಿಭಟಿಸುತ್ತಿದ್ದಾರೆ.ಸಂಧಾನದ ಕೆಲಸ ಮಾಡುವ ಬದಲು ಕುತಂತ್ರದಿಂದಅವರ ಹೆಸರು ಕೆಡಿಸುವ ಕೆಲಸ ಮಾಡಲಾಗುತ್ತಿದೆಎಂದರು.ಸಾಹಿತಿ, ಪತ್ರಕರ್ತರ ಮೇಲೆ ದೇಶದ್ರೋಹದಪ್ರಕರಣಗಳನ್ನು ದಾಖಲಿಸುವುದು ಹೆಚ್ಚಾಗುತ್ತಿದೆ.ಇದು ಒಳ್ಳೆಯ ಬೆಳವಣಿಗೆ ಅಲ್ಲ. ಪ್ರಜಾಪ್ರಭುತ್ವಹಾಗೂ ಸರ್ಕಾರಕ್ಕೆ ಇದು ಶ್ರೇಯಸ್ಸು ತರುವುದಿಲ್ಲ.ಮಾಧ್ಯಮ ಸ್ವಾತಂತ್ರ ಹತ್ತಿಕ್ಕುವುದು ದೇಶದಸ್ವಾತಂತ್ರವನ್ನೇ ಹತ್ತಿಕ್ಕಿದಂತೆ ಎಂದು ಬೇಸರವ್ಯಕ್ತಪಡಿಸಿದರು.
ಅ ಧಿಕಾರಶಾಹಿಗಳ ಬಾಲಂಗೋಚಿಗಳಾಗಿಕನ್ನಡದ ಕೆಲಸ ಮಾಡುವವರನ್ನು ಎಂದಿಗೂಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಮಾಡಬಾರದು. ಕನ್ನಡಕ್ಕೆ ಧಕ್ಕೆ ಬಂದಾಗ ಕನ್ನಡಸಾಹಿತ್ಯ ಪರಿಷತ್ ಪ್ರತಿಭಟಿಸುವ ಕೆಲಸ ಮಾಡಬೇಕು.ಜನಪರ, ಕನ್ನಡಪರ ಕಳಕಳಿಯುಳ್ಳವರನ್ನುಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಗೂರಾಜ್ಯಾಧ್ಯಕ್ಷರನ್ನಾಗಿ ಆಯ್ಕೆಮಾಡಬೇಕಾಗಿದೆಎಂದರು. ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಮಾತನಾಡಿ,ಹೋರಾಟದ ಹಾದಿಯಲ್ಲಿ ಬಂದಿರುವ ಚಿಕ್ಕಪ್ಪನಹಳ್ಳಿಷಣ್ಮುಖಪ್ಪ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷರಾಗಬೇಕು ಎನ್ನುವುದು ನಮ್ಮೆಲ್ಲರ ಆಸೆ.ಸಾಹಿತ್ಯ ಪರಿಷತ್ತಿಗೆ ಚುನಾವಣೆ ನಡೆಸುವುದೇಸರಿಯಲ್ಲ. ಹೊಸಪೇಟೆಯಲ್ಲಿ ಕೆಲ ಸಂಸದರು,ಶಾಸಕರು ಸೇರಿ ಇಂತಹವರನ್ನೇ ಕಸಾಪ ಅಧ್ಯಕ್ಷರನ್ನಾಗಿಮಾಡಬೇಕೆಂಬ ಠರಾವು ಹೊರಡಿಸಿರುವುದುಅತ್ಯಂತ ಖಂಡನೀಯ. ಕನ್ನಡ ಸಾಹಿತ್ಯ ಪರಿಷತ್‌ಸ್ವತಂತ್ರ ನಿರ್ಣಯಗಳನ್ನು ಕೈಗೊಳ್ಳಬೇಕು.ರಾಜಕೀಯ ಇಲ್ಲಿ ಪ್ರವೇಶಿಸಬಾರದು. ಕಸಾಪಕೇವಲ ಕನ್ನಡ ಭಾಷೆಗೆ ಸೀಮಿತವಲ್ಲ. ಕನ್ನಡಿಗರಅಸ್ತಿತ್ವವನ್ನು ರಕ್ಷಿಸಬೇಕು ಎಂದು ತಿಳಿಸಿದರು.
Related Articles
Advertisement
ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷಜೆ.ಯಾದವ ರೆಡ್ಡಿ ಮಾತನಾಡಿ, ಮುಕ್ತಮನಸ್ಸಿನವರು ಜಿಲ್ಲಾ ಕನ್ನಡ ಸಾಹಿತ್ಯಪರಿಷತ್‌ಅಧ್ಯಕ್ಷರಾಗಬೇಕು.ಅಖೀಲ ಭಾರತ ಕನ್ನಡಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವದೊಡ್ಡರಂಗೇಗೌಡರು ಕನ್ನಡ ದ್ರೋಹದಮಾತುಗಳನ್ನಾಡಿರುವುದು ಶೋಭೆಯಲ್ಲ.ಕನ್ನಡ ಸಾಹಿತ್ಯ ಪರಿಷತ್ ಕ್ರಿಯಾಶೀಲವಾಗಲುಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ ಅವರಂಥವರು ನೇತೃತ್ವವಹಿಸಿಕೊಳ್ಳಬೇಕು ಎಂದು ಆಶಿಸಿದರು. ಕಸಾಪ ಮಾಜಿ ಅಧ್ಯಕ್ಷ ಕೆ.ಎಂ. ವೀರೇಶ್,ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ,ರೈತ ಮುಖಂಡ ಹೊರಕೇರಪ್ಪಮಾತನಾಡಿದರು.ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ,ಆರ್. ಶೇಷಣ್ಣಕುಮಾರ್, ಗೌನಹಳ್ಳಿ ಗೋವಿಂದಪ್ಪಸುದ್ದಿಗೋಷ್ಠಿಯಲ್ಲಿದ್ದರು. ಓದಿ : ಗದಗ: ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಕಂಪ್ಯೂಟರ್ ಆಪರೇಟರ್