ಚಿತ್ರದುರ್ಗ: ಜಿಲ್ಲಾ ಕಾಂಗ್ರೆಸ್‌ಕಚೇರಿಯಲ್ಲಿ ಶನಿವಾರಮಹಾತ್ಮ ಗಾಂಧಿ ಹುತಾತ್ಮ ದಿನಆಚರಿಸಲಾಯಿತು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಹಾತ್ಮ ಗಾಂ ಧೀಜಿಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿಮಾತನಾಡಿ, ಗಾಂಧೀಜಿಯವರು ಸತ್ಯಮತ್ತು ಅಹಿಂಸೆ ಮೂಲಕ ಬ್ರಿಟಿಷರವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರÂತಂದು ಕೊಟ್ಟರು. ಬ್ರಿಟಿಷರು ಹೂಡಿದಸಂಚಿನಿಂದ ಭಾರತ ವಿಭಜನೆಯಾಗಿಪಾಕಿಸ್ತಾನವಾಯಿತು. ಆದರೂಗಾಂಧೀಜಿ ಭಾರತ ಮತ್ತು ಪಾಕಿಸ್ತಾನಪ್ರಜೆಗಳು ಶಾಂತಿ-ಸಹಬಾಳ್ವೆಯಿಂದಜೀವಿಸಲಿ ಎಂದು ಆಶಿಸಿದ್ದರು.
ಕೋಮುವಾದಿಗಳು ಗಾಂಧೀಜಿಯವರ ನ್ನು ಹತ್ಯೆಗೈದ ಗೋಡ್ಸೆಯವಿಚಾರಗಳನ್ನು ವೈಭವೀಕರಿಸಲುಹೊರಟಿರುವುದು ದೊಡ್ಡ ದುರಂತ.
ಇದರ ವಿರುದ್ಧ ಜನರನ್ನು ಎಚ್ಚರಿಸುವಕೆಲಸ ಮಾಡಬೇಕಿದೆ ಎಂದರು.ಜಿಪಂ ಸದಸ್ಯ ಬಿ.ಪಿ. ಪ್ರಕಾಶ್‌ಮೂರ್ತಿ ಮಾತನಾಡಿ, ಅಹಿಂಸೆಯಮಾರ್ಗದಲ್ಲಿ ಸಾಗಿದ ಮಹಾತ್ಮಗಾಂಧೀಜಿ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟರು. ರೈತರು ಈಗ ಕೇಂದ್ರರ್ಕಾರದ ಕೃಷಿ ಕಾಯ್ದೆ ವಿರುದ್ಧಅಹಿಂಸೆ ಮಾರ್ಗದಲ್ಲಿ ಧರಣಿನಡೆಸುತ್ತಿದ್ದರೆ, ಕೆಲವು ಪುಢಾರಿಗಳುರೈತರ ಹೆಸರಿಗೆ ಮಸಿ ಬಳಿಯಲುಹೊರಟಿದ್ದಾರೆ. ಇದು ರೈತ ಕುಲಕ್ಕೆಮಾಡಿದ ದೊಡ್ಡ ಅಪಮಾನ ಎಂದುದೂರಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಡಿ.ಎನ್. ಮೈಲಾರಪ್ಪ,ಕೆ.ಪಿ. ಸಂಪತ್‌ಕುಮಾರ್, ಎ.ಸಾದಿ ಕ್‌ವುಲ್ಲಾ, ಕಾರ್ಮಿಕ ವಿಭಾಗದಜಿಲ್ಲಾಧ್ಯಕ್ಷ ಮೋಹನ್ ಪೂಜಾರಿ,ನ್ಯಾಯವಾದಿ ರವೀಂದ್ರ, ಮುನಿರಾಎ. ಮಕಾಂದಾರ್, ಶಿಕ್ಷಕರ ಮತ್ತುಪದವೀಧರ ಕ್ಷೇತ್ರ ವಿಭಾಗದಜಿಲ್ಲಾಧ್ಯಕ್ಷ ಮುದಸಿರ್ ನವಾಜ್,ಚೋಟು, ವಸೀಂ ಬಡಾಮಕಾನ್,ಮಹಮದ್ ಜಿ.ಆರ್.ಹಳ್ಳಿ ಮತ್ತಿತರರುಉಪಸ್ಥಿತರಿದ್ದರು.
ಓದಿ :
ಕೋವಿಡ್ ಲಸಿಕೆ ಪಡೆದಿದ್ದ ಆರೋಗ್ಯ ಕಾರ್ಯಕರ್ತೆ ಸಾವು; ತೆಲಂಗಾಣದಲ್ಲಿ 3ನೇ ಪ್ರಕರಣ