Advertisement

ತಿಪ್ಪೇರುದ್ರಸ್ವಾಮಿ ದೇವಾಲಯ ಇಂದಿನಿಂದ ಓಪನ್‌

10:58 PM Jul 05, 2021 | Team Udayavani |

ನಾಯಕನಹಟ್ಟಿ: ಕೊರೊನಾದಿಂದ ಮುಚ್ಚಿದ್ದ ಇಲ್ಲಿನ ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಸೋಮವಾರದಿಂದ ದೇವರ ದರ್ಶನ ಆರಂಭವಾಗಲಿದೆ. ದೀರ್ಘ‌ ಕಾಲ ಮುಚ್ಚಿದ್ದರಿಂದ ಸ್ವತ್ಛತಾ ಕಾರ್ಯ ಆರಂಭಗೊಂಡಿದೆ. ಏ. 22 ರಂದು ಧಾರ್ಮಿಕ ದತ್ತಿ ಇಲಾಖೆ ಕೊರೊನಾ ಕಾರಣದಿಂದ ದೇವಾಲಯವನ್ನು ಮುಚ್ಚು ವಂತೆ ಆದೇಶಿಸಿತ್ತು.

Advertisement

ದೇವಾಲಯದ ಗರ್ಭಗುಡಿಯಲ್ಲಿ ದೇವರಿಗೆ ನಿತ್ಯಪೂಜೆ ನೆರವೇರುತ್ತಿತ್ತು. ಜತೆಗೆ ಭಕ್ತರಿಲ್ಲದೆ ರುದ್ರಾ ಭಿಷೇಕ ಜರುಗಿಸಲಾಗುತ್ತಿತ್ತು. ದೇವಾಲಯದ ಆರಂಭಕ್ಕೆ ದೇವಾಲಯದ ಸಿಬ್ಬಂದಿ ಸ್ವತ್ಛತಾ ಕಾರ್ಯ ಕೈಗೊಂಡಿದ್ದಾರೆ. ದೇವಾಲಯದ ಹೊರಾಂಗಣದಲ್ಲಿ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲಾಗಿದೆ. ಒಳಾಂಗಣವನ್ನು ಸೋಪ್‌ ಪೌಡರ್‌, ನಾಯಿಲ್‌ ಬಳಸಿ ಸ್ವತ್ಛಗೊಳಿಸಲಾಗಿದೆ. ಮೂರನೇ ಹಂತದ ಅನ್‌ಲಾಕ್‌ ನಿಯಮಗಳಂತೆ ಪ್ರತಿಯೊº ಭಕ್ತರೂ ಮಾಸ್ಕ್ ಹಾಕಿರಬೇಕು. ದೇವಾಲಯದ ವತಿಯಿಂದ ಭಕ್ತರ ಕೈಗಳಿಗೆ ಸ್ಯಾನಿಟೈಸ್‌ ಮಾಡಲಾಗುವುದು.

ಗುಂಪಾಗಿ ದೇವಾಲಯ ಪ್ರವೇಶಕ್ಕೆ ಅವಕಾಶವಿಲ್ಲ. ಒಬ್ಬರಾದ ನಂತರ ಒಬ್ಬರಂತೆ ಸರತಿ ಸಾಲಿನಲ್ಲಿ ದೇವಾಲಯಕ್ಕೆ ಪ್ರವೇಶ ನೀಡಲಾಗುವುದು. ದೇವಾಲಯದಲ್ಲಿ ತೀರ್ಥ-ಪ್ರಸಾದ, ದಾಸೋಹ ಇರುವುದಿಲ್ಲ. ದರ್ಶನ, ವಾಹನ ಪೂಜೆ ಹಾಗೂ ಮಂಗಳಾರತಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ದೇವಾಲಯದ ಒಳಗೆ ಹಾಗೂ ಹೊರಗೆ ಭಕ್ತರಿಗೆ ಧ್ವನಿವರ್ಧಕದ ಮೂಲಕ ಸೂಚನೆಗಳನ್ನು ನೀಡಲಾಗುವುದು.

ಲಾಕ್‌ಡೌನ್‌ ಸಮಯದಲ್ಲಿ ದೇವಾಲಯದ ಹೊರಗೆ ಕೈಮುಗಿದು ಬಾಗಿಲಿಗೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸುತ್ತಿದ್ದ ಭಕ್ತರಿಗೆ ಇದೀಗ ಸಂತಸವಾಗಿದೆ. ಕೊರೊನಾ ಕಾಲದಲ್ಲಿಯೂ ಇಲ್ಲಿನ ಐತಿಹಾಸಿಕ ತಿಪ್ಪೇರುದ್ರಸ್ವಾಮಿ ಜಾತ್ರೆ ಯಾವುದೇ ಅಡೆತಡೆಗಳಿಲ್ಲದೆ ಜರುಗಿದೆ.

Advertisement

Udayavani is now on Telegram. Click here to join our channel and stay updated with the latest news.

Next