Advertisement
ನಗರಸಭಾ ಅಧ್ಯಕ್ಷೆ ಪ್ರತಿನಿ ಧಿಸುವ 13,14,15, 21, 22 ಮತ್ತು 28 ನೇ ವಾರ್ಡ್ ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಣ ಜಾಗೃತಿ ಸಭೆ ನಡೆಸಿ ಮಾತನಾಡಿದರು. ಪ್ರತಿಯೊಂದು ವಾರ್ಡ್‌ನಲ್ಲೂ ಜನ ಸಂಖ್ಯೆಗೆ ಅನುಗುಣವಾಗಿ ಲಸಿಕೆ ಹಾಕಲಾಗಿಲ್ಲ. ಸೋಂಕಿತರ ಸಂಪರ್ಕ ಹೊಂದಿರುವ ಹಲವಾರು ವ್ಯಕ್ತಿಗಳು ಲಸಿಕೆಯಿಂದ ಹೊರಗುಳಿದಿದ್ದು, ಅವರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪ್ರಗತಿ ಸಾಧಿಸಲಾಗಿಲ್ಲ. ಆರೋಗ್ಯ, ಅಂಗನವಾಡಿ, ಆಶಾ ಮತ್ತು ಮತಗಟ್ಟೆ ಅ ಕಾರಿಗಳು ಹೆಚ್ಚು ಜಾಗೃತೆ ವಹಿಸದೆ ನಿರ್ಲಕ್ಷ ತೋರಿರುವುದು ಎದ್ದು ಕಾಣುತ್ತಿದೆ.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಸಿ.ಬಿ.ಜಯಲಕ್ಷ್ಮಿ ಕೃಷ್ಣಮೂರ್ತಿ ಮಾತನಾಡಿ, ಕೊರೊನಾ ಪ್ರಾರಂಭದ ದಿನದಂದೇ ನಿಯಂತ್ರಣಕ್ಕೆ ನಗರಸಭೆ ಆಡಳಿತ ಕಾಯೋನ್ಮುಖವಾಗಿದೆ. ನಗರಸಭೆಯ ಎಲ್ಲ ವಾರ್ಡ್‌ಗಳ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಯಂತ್ರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆದರೆ, ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಪರ್ಕಿತರು ನಗರದಲ್ಲಿದ್ದು, ಕೆಲವರು ಮಾಹಿತಿ ನೀಡದೆ ಇರುವ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದ್ದು, ಇದನ್ನು ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭಾ ಸದಸ್ಯರಾದ ಕೆ.ವೀರಭದ್ರಪ್ಪ, ಹೊಯ್ಸಳ ಗೋವಿಂದ, ಸಿ.ಎಂ. ವಿಶುಕುಮಾರ್, ಸಾವಿತ್ರಮ್ಮ, ಕಾಂಗ್ರೆಸ್ ಮುಖಂಡರಾದ ಎಸ್.ಮುಜೀಬ್, ಆರ್ .ಪ್ರಸನ್ನಕುಮಾರ್, ಕೃಷ್ಣಮೂರ್ತಿ, ಪರಸಪ್ಪ , ವ್ಯವಸ್ಥಾಪಕ ಲಿಂಗರಾಜು, ಎಇಇ ಜೆ.ಶ್ಯಾಮಲ, ವಿನಯ್, ನೈರ್ಮಲ್ಯ ಇಂಜಿನಿಯರ್ ನರೇಂದ್ರಬಾಬು, ಜೆಇ ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.