Advertisement

ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

10:49 PM Jun 18, 2021 | Team Udayavani |

ಮೊಳಕಾಲ್ಮೂರು: ಕೊರೊನಾ ಸಂಕಷ್ಟದಲ್ಲಿಯೂ ಕೇಂದ್ರ ಬಿಜೆಪಿ ಸರ್ಕಾರವು ನಿತ್ಯವೂ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಮಾಡಿ ದೇಶದಲ್ಲಿ ಜನಸಾಮಾನ್ಯರು ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದೆ ಸಾಯುವಂತಹ ದುಸ್ಥಿತಿ ನಿರ್ಮಿಸಿ ಮರಣಶಾಸನವಾಗಿಸಿದ ಬಿಜೆಪಿಯನ್ನು ದೇಶದಿಂದ ಕಿತ್ತೂಗೆಯಬೇಕೆಂದು ಕಾಂಗ್ರೆಸ್‌ ಮಹಿಳಾ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಜೆ.ಜಯಲಕ್ಷ್ಮೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಪಟ್ಟಣದ ಪಿ.ಟಿ.ಹಟ್ಟಿ ಬಳಿಯ ಪೆಟ್ರೋಲ್‌ ಬಂಕ್‌ ಆವರಣದಲ್ಲಿ ಮಹಿಳಾ ಕಾಂಗ್ರೆಸ್‌ ವತಿಯಿಂದ ಕೈಗೊಂಡ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಮಾಡಿದ್ದರಿಂದ ದೇಶದ ಬಡ ಕೂಲಿ ಕಾರ್ಮಿಕ ಜನತೆಯು ಅಗತ್ಯ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿ ಒಪ್ಪತ್ತಿನ ಊಟಕ್ಕೆ ಪರದಾಡುವಂತಾಗಿದೆ. ದೇಶದಲ್ಲಿ 100 ರೂ.ಗೂ ಹೆಚ್ಚು ಪೆಟ್ರೋಲ್‌ ಹಾಗೂ ಡೀಸೆಲ್‌ನ ಬೆಲೆ ಏರಿಕೆಯಿಂದ ನಿತ್ಯದ ಜೀವನಕ್ಕೆ ಅಡುಗೆ ಎಣ್ಣೆ, ಬೇಳೆ, ಅಕ್ಕಿ ಬೆಲೆ ಸೇರಿದಂತೆ ಹಲವಾರು ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿರುವುದರಿಂದ ಜನ ಸಾಮಾನ್ಯರು ಬದುಕಲಾರದಂತ ದುಸ್ಥಿತಿ ನಿರ್ಮಾಣವಾಗಿದೆ.

ಹಿಂದಿನ ಕಾಂಗ್ರೆಸ್‌ ಸರ್ಕಾರವು ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ತೆರಿಗೆ ಹಾಕದೆ ಬೆಲೆ ಏರಿಕೆ ಮಾಡದೆ ಆರ್ಥಿಕತೆಯನ್ನು ಸಮತೋಲನ ಕಾಪಾಡಲಾಗುತ್ತಿತ್ತು. ಪ್ರಸ್ತುತ ಪೆಟ್ರೋಲ್‌, ಡೀಸೆಲ್‌ಗೆ ಸುಮಾರು 60 ರಷ್ಟು ತೆರಿಗೆ ವಿಧಿಸಿ 100ಕ್ಕೂ ಹೆಚ್ಚಿನ ಬೆಲೆ ಏರಿಕೆ ಮಾಡಿದ್ದರಿಂದ ದಿನ ನಿತ್ಯದ ಸಾಮಗ್ರಿಗಳನ್ನು ಪಡೆಯಲಾಗದೆ ಬಡ ಜನತೆಯು ಹಸಿವಿನಿಂದ ಸಾಯುವಂತಾಗಿದೆ. ದೇಶದಲ್ಲಿ ಕೊರೊನಾ 3 ನೇ ಅಲೆ ಹರಡುತ್ತದೆ ಎಂದು ತಜ್ಞರ ಮಾಹಿತಿಯಿದ್ದರೂ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಂಡು ಜನರ ರಕ್ಷಣೆ ಮಾಡದೆ ಹಲವಾರು ಹಗರಣವೆಸಗಿ ಬ್ಯಾಂಕ್‌ಗಳಲ್ಲಿ ಹಣ ದೋಚಿದವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಭಾರತದಲ್ಲಿ ಜನಸಾಮಾನ್ಯರು ಸಂಕಷ್ಟದಲ್ಲಿದ್ದರೂ ಯಾವುದೇ ಪರಿಹಾರ ನೀಡದೆ ದೇಶದಲ್ಲಿ ಸಾವಿರಾರು ಕೋಟಿ ತೆರಿಗೆ ವಸೂಲಿ ಮಾಡಿ ಬೇರೆ ದೇಶಗಳಿಗೆ ದಾನ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಬಹುದಿನಗಳಿಂದಲೂ ರೈತರು ಪ್ರತಿಭಟನೆ ಮಾಡುತ್ತಿದ್ದರೂ ಕೇಂದ್ರ ಬಿಜೆಪಿ ಸರ್ಕಾರವು ಗಮನಹರಿಸದೆ ನಿರ್ಲಕ್ಷವಹಿಸಿ ಜನರ ಮೇಲೆ ಬರೆ ಮೇಲೆ ಬರೆ ಹಾಕಿ ಬಡಜನರ ಹೊಟ್ಟೆ ಮೇಲೆ ಹೊಡೆಯುತ್ತಿದ್ದೀರಿ.

ಇಂತಹ ಹಲವಾರು ಸಮಸ್ಯೆಗಳನ್ನು ನಿವಾರಿಸದ ಬಿಜೆಪಿ ಸರ್ಕಾರ ಕೂಡಲೇ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ತಗ್ಗಿಸಬೇಕು. ನ್ಯಾಯಯುತವಾಗಿ ಆಡಳಿತ ನಡೆಸದಿದ್ದಲ್ಲಿ ರಾಜೀನಾಮೆ ನೀಡಿ ಇವಿಎಂ ಮಷಿನ್‌ ಗಳನ್ನು ಪಕ್ಕಕ್ಕಿಟ್ಟು ಆತ್ಮಸಾಕ್ಷಿಯಾಗಿ ಜನತಾ ನ್ಯಾಯಾಲಯದಲ್ಲಿ ಅಗ್ನಿ ಪರೀಕ್ಷೆಯಲ್ಲಿ ನ್ಯಾಯಯುತವಾಗಿ ಗೆಲ್ಲಿರಿ ನೋಡೋಣ ಎಂದು ಸವಾಲು ಹಾಕಿದರು.

Advertisement

ಪ.ಪಂ ಸದಸ್ಯ ಎಂ.ಅಬ್ದುಲ್ಲಾ, ಮಹಮ್ಮದ್‌ ವಸೀವುಲ್ಲಾ, ವೆಂಕಟೇಶ, ಗೋಪಾಲ್‌, ಮಹಿಳಾ ಕಾಂಗ್ರೆಸ್‌ನ ಬ್ಲಾಕ್‌ ಅಧ್ಯಕ್ಷೆ ಇಂದ್ರಮ್ಮ ಪಕ್ಷದ ಪದಾ ಧಿಕಾರಿಗಳಾದ ಜ್ಯೋತಮ್ಮ, ಕಮಲಮ್ಮ, ತಿಮ್ಮರಾಜ್‌, ಜುಬೇರ, ರμ ಹೆಚ್ಚಿನ ಕಾರ್ಯಕರ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next