Advertisement

ಚಿತ್ರ ಮಂಜರಿ

10:45 AM Jan 31, 2018 | Team Udayavani |

ರೂಪಿಕಾ ಒಂದೂವರೆ ವರ್ಷ ಗ್ಯಾಪ್‌ ತಗೊಂಡು ಹೊಸ ಇನ್ನಿಂಗ್ಸ್‌ ಆರಂಭಿಸಿರೋದು ನಿಮಗೆ ಗೊತ್ತೇ ಇದೆ. ಈಗ ರೂಪಿಕಾ ನಟಿಸಿರುವ ಚಿತ್ರವೊಂದು ಬಿಡುಗಡೆಗೆ ರೆಡಿಯಾಗಿದೆ. ಅದು “ಮಂಜರಿ’. ಈ ಚಿತ್ರದಲ್ಲಿ ರೂಪಿಕಾ ನಾಯಕಿ. ಇಡೀ ಸಿನಿಮಾ ಅವರ ಸುತ್ತವೇ ಸಾಗಲಿದೆ. ಇದು ಹಾರರ್‌ ಸಿನಿಮಾವಾಗಿದ್ದು, ರೂಪಿಕಾ ಅವರ ಮೊದಲ ಹಾರರ್‌ ಸಿನಿಮಾ. ಇಲ್ಲಿ ಮಂಜರಿ ಹಾಗೂ ಕಾವ್ಯಾ ಎಂಬ ಎರಡು ಪಾತ್ರಗಳಲ್ಲಿ ರೂಪಿಕಾ ಕಾಣಿಸಿಕೊಂಡಿದ್ದಾರೆ. 

Advertisement

“ಒಂದೂವರೆ ವರ್ಷ ಗ್ಯಾಪ್‌ನ ನಂತರ ಬಂದ ನಾನು, ವಿಭಿನ್ನವಾದ, ನಟನೆಗೆ ಹೆಚ್ಚು ಅವಕಾಶವಿರುವಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂದುಕೊಂಡಿದ್ದೆ. ಅದರಂತೆ ಈಗ ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಅದರಲ್ಲಿ “ಮಂಜರಿ’ ಕೂಡಾ ಒಂದು. ಈ ಚಿತ್ರದ ಪಾತ್ರ ತುಂಬಾ ಭಿನ್ನವಾಗಿದೆ. ಎರಡು ಶೇಡ್‌ನ‌ ಪಾತ್ರ’ ಎಂದು ಖುಷಿಯಿಂದ ಹೇಳುತ್ತಾರೆ. ಚಿತ್ರದಲ್ಲಿ ರೂಪಿಕಾ ಸಖತ್‌ ರಿಸ್ಕಿ ಸ್ಟಂಟ್‌ ಮಾಡಿದ್ದಾರಂತೆ.

ಸ್ಟಂಟ್‌ ಎಂದರೆ ಹೊಡೆದಾಟ ಮಾಡಿಲ್ಲ. ಬದಲಾಗಿ ಕೆಲವು ಏರಿಯಲ್‌ ಶಾಟ್‌ಗಳಲ್ಲಿ ರೂಪಿಕಾ  ಯಾವುದೇ ಡ್ನೂಪ್‌ ಇಲ್ಲದೇ ಪಾಲ್ಗೊಂಡಿದ್ದಾರೆ. ಇದು ಒಳ್ಳೆಯ ಅನುಭವ ಕೊಟ್ಟಿದೆಯಂತೆ. ಇದು “ಮಂಜರಿ’ ವಿಚಾರವಾದರೆ, ರೂಪಿಕಾ ಕೈಯಲ್ಲಿ ಇನ್ನೂ ನಾಲ್ಕು ಸಿನಿಮಾಗಳಿವೆ. “ಥರ್ಡ್‌ ಕ್ಲಾಸ್‌’, “ರುದ್ರಾಕ್ಷಿಪುರ’ ಹಾಗೂ “ಸರ್ಪ ಸಂಬಂಧ’ ಚಿತ್ರಗಳೂ ರೂಪಿಕಾ ಕೈಯಲ್ಲಿದೆ.

ಇದಲ್ಲದೇ, ತಮಿಳು ಸಿನಿಮಾವೊಂದರಲ್ಲೂ ರೂಪಿಕಾ ನಟಿಸುತ್ತಿದ್ದು, ಆ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದಾರೆ. “ಒಳ್ಳೊಳ್ಳೆ ಪಾತ್ರಗಳು ಬರುತ್ತಿವೆ. ನನಗೆ ಇಷ್ಟವಾದ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ. ಇನ್ನು, “ಕನಕ’ ಚಿತ್ರದ ಅವರ ಪಾತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದಲೂ ರೂಪಿಕಾ ಖುಷಿಯಾಗಿದ್ದಾರೆ. ಅಂದಹಾಗೆ, ರೂಪಿಕಾ ಅವರು ನಟನೆ ಜೊತೆಗೆ ಡ್ಯಾನ್ಸ್‌ ಸ್ಕೂಲ್‌ ಕೂಡಾ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next